Englishहिन्दीമലയാളംதமிழ்తెలుగు

ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ ಚಾಂಪಿಯನ್

Posted by:
Published: Monday, June 2, 2014, 9:30 [IST]
 

ಬೆಂಗಳೂರು, ಜೂನ್ 2: ಮೊದಲ ಬಾರಿ ಫೈನಲ್ ಪ್ರವೇಶಿಸಿದ ಪಂಜಾಬ್ ತಂಡದ ಟ್ರೋಫಿ ಗೆಲ್ಲುವ ಕನಸು ಭಂಗವಾಗಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ. ಕೋಲ್ಕತ್ತಾ ತಂಡ ಪಂಜಾಬ್ ತಂಡದ ವಿರುದ್ದ ಮೂರು ವಿಕೆಟುಗಳ ಜಯಸಾಧಿಸಿ ಐಪಿಎಲ್ 7 ಚಾಂಪಿಯನ್ ಆಗಿ ಹೊರಹೊಮ್ಮಿದೆ.

ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ (ಜೂ 1) ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡ್ ಆಯ್ದುಕೊಂಡ ನೈಟ್ ರೈಡರ್ಸ್, ಪಂಜಾಬ್ ತಂಡವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಲಿಲ್ಲ. ಪಂಜಾಬ್ ತಂಡ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತು.

ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ ಚಾಂಪಿಯನ್

ಪಂಜಾಬ್ ತಂಡದ ಪರ ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ವಿಕೆಟ್ ಕೀಪರ್ ವೃದ್ದಿಮಾನ್ ಸಹಾ 55 ಎಸೆತಗಳಲ್ಲಿ 115 ರನ್ ಚಚ್ಚಿದರು. ಇವರಿಗೆ ವೊಹ್ರಾ (67) ಉತ್ತಮ ಸಾಥ್ ನೀಡಿದರು. ಇವರಿಬ್ಬರು ಮೂರನೇ ವಿಕೆಟಿಗೆ 129 ರನ್ ಗಳ ಜೊತೆಯಾಟ ನೀಡಿದರು.

200 ರನ್ ಗಳ ಗುರಿ ಬೆನ್ನತ್ತಿದ ಕೋಲ್ಕತ್ತಾ ತಂಡ ಮೊದಲ ಓವರಿನಲ್ಲೇ ಇನ್ ಫಾರ್ಮ್ ಬ್ಯಾಟ್ಸಮ್ಯಾನ್ ಉತ್ತಪ್ಪ ಅವರ ವಿಕೆಟನ್ನು ಕಳೆದುಕೊಂಡಿತು. ನಾಯಕ ಗಂಭೀರ್ 23 ರನ್ ಗಳಿಸಿ ಔಟಾದರು. ಆದರೆ ಕರ್ನಾಟಕದ ಯುವ ಆಟಗಾರ ಮನೀಶ್ ಪಾಂಡೆ 50 ಎಸೆತಗಳಲ್ಲಿ 94 ರನ್ ಭಾರಿಸಿ ಕೋಲ್ಕತ್ತಾ ತಂಡದ ಗೆಲುವಿಗೆ ಪ್ರಮುಖ ಕಾರಣರಾದರು.

ಯೂಸಫ್ ಪಠಾಣ್ (36) ರನ್ ಗಳಿಸಿ ಔಟಾದರು. ಕೋಲ್ಕತ್ತಾ ತಂಡ ಮೂರು ಎಸೆತ ಬಾಕಿ ಇರುವಂತೆ ಗೆಲುವಿನ ನಗೆ ಬೀರಿತು.

ಪಂಜಾಬ್ ತಂಡದ ಪರ ಕರಣ್ ವೀರ್ ಸಿಂಗ್ ನಾಲ್ಕು ಮತ್ತು ಮಿಚೆಲ್ ಜಾನ್ಸನ್ ಎರಡು ವಿಕೆಟ್ ಪಡೆದರು. ಕಿಕ್ಕಿರಿದು ತುಂಬಿದ್ದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎರಡೂ ತಂಡಗಳನ್ನು ಪ್ರೇಕ್ಷಕರು ಹುರಿದುಂಬಿಸುತ್ತಿದ್ದರು.

ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ ಚಾಂಪಿಯನ್

ವಿಜೇತ ತಂಡಕ್ಕೆ ಬಹುಮಾನದ ಮೊತ್ತ: 15 ಕೋಟಿ
ರನ್ನರ್ಸಪ್ ತಂಡಕ್ಕೆ ಬಹುಮಾನದ ಮೊತ್ತ: 10 ಕೋಟಿ

ಪಂದ್ಯಶ್ರೇಷ್ಠ: ಮನೀಶ್ ಪಾಂಡೆ
ಆರೆಂಜ್ ಕ್ಯಾಪ್ (ಗರಿಷ್ಠ ರನ್) : ರಾಬಿನ್ ಉತ್ತಪ್ಪ
ಪರ್ಪಲ್ ಕ್ಯಾಪ್ ( ಗರಿಷ್ಠ ವಿಕೆಟ್) : ಮೋಹಿತ್ ಶರ್ಮಾ

English summary
Manish Pandey played an absolute blinder as Kolkata Knight Riders held their nerves to beat a spirited Kings XI Punjab by three wickets in an exhilarating summit clash to win the seventh edition of the Indian Premier League in Chinnaswamy Stadium, Bangalore.
ಅಭಿಪ್ರಾಯ ಬರೆಯಿರಿ