Englishहिन्दीമലയാളംதமிழ்తెలుగు

ಯಾವ ಹುಡ್ಗಿ ಜತೆನೂ ಡೇಟಿಂಗ್ ಮಾಡ್ತಿಲ್ಲ : ರೈನಾ

Posted by:
Updated: Friday, May 30, 2014, 16:14 [IST]
 

ಮುಂಬೈ, ಮೇ.30 ; ಬಾಂಗ್ಲಾದೇಶ ಪ್ರವಾಸಕ್ಕೆ ತೆರಳುವ ಟೀಂ ಇಂಡಿಯಾ ನಾಯಕರಾಗಿ ಆಯ್ಕೆಯಾಗಿರುವ ಸುರೇಶ್ ರೈನಾಗೆ ಗಾಸಿಪ್ ಸುದ್ದಿಗಳ ಕಿರಿಕಿರಿ ಹೆಚ್ಚಾಗಿದೆ. ಮಾಧ್ಯಮಗಳಲ್ಲಿ ಬಂದಿರುವ ' ನಟಿ ಶ್ರುತಿ ಡೇಟಿಂಗ್ ಸುದ್ದಿ' ಕಂಡು ಹೌಹಾರಿರುವ ರೈನಾ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಮೂಲಕ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಾನು ಯಾರೊಂದಿಗೂ ಡೇಟಿಂಗ್ ನಡೆಸಿಲ್ಲ, ನನಗೆ ಅದಕ್ಕೆಲ್ಲ ಪುರುಸೊತ್ತಿಲ್ಲ ಎಂದಿದ್ದಾರೆ.

ಶ್ರುತಿ ಹಾಸನ್ ಹಾಗೂ ಟೀಂ ಇಂಡಿಯಾ ಆಲ್ ರೌಂಡರ್ ಸುರೇಶ್ ರೈನಾ ನಡುವೆ 'ಏನೋ ಇದೆ' ಎಂಬ ಸುದ್ದಿ ಹಬ್ಬಿತ್ತು. ಇಂಡಿಯನ್ ಪ್ರಿಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರನಾಗಿರುವ ಸುರೇಶ್ ರೈನಾ ಅವರ ಜತೆ ಶ್ರುತಿ ಹಾಸನ್ ಕಾಣಿಸಿಕೊಂಡಿದ್ದರು. ಶ್ರುತಿ ಪೆವಿಲಿಯನ್ ನಲ್ಲಿದ್ದರೆ ರೈನಾ ಸಕತ್ ಆಗಿ ಆಡುತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಅದರೆ, ಇದೆಲ್ಲವೂ ಕಾಕತಾಳೀಯವಾಗಿತ್ತು.

ಯಾವ ಹುಡ್ಗಿ ಜತೆನೂ ಡೇಟಿಂಗ್ ಮಾಡ್ತಿಲ್ಲ : ರೈನಾ

ಆದರೆ, 27 ವರ್ಷದ ಎಡಗೈ ಬ್ಯಾಟ್ಸ್ ಮನ್ ಸುರೇಶ್ ರೈನಾ ಅವರು ಇತ್ತೀಚೆಗೆ ಹಬ್ಬಿದ್ದ ಗಾಳಿಸುದ್ದಿಗಳಿಂದ ಬೇಸತ್ತು ಈ ಬಗ್ಗೆ ನಾನು ಸ್ಪಷ್ಟನೆ ನೀಡಲೇಬೇಕಾಗಿದೆ. ಹಲವು ಮಾಧ್ಯಮಗಳಲ್ಲಿ ಇಲ್ಲಸಲ್ಲದ ವರದಿ ಬಂದಿದೆ ಯಾರೂ ಸತ್ಯಾಸತ್ಯತೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನಾನು ಸ್ಪಷ್ಟವಾಗಿ ಹೇಳುತ್ತೇನೆ ನಾನು ಯಾರನ್ನು ಡೇಟ್ ಮಾಡುತ್ತಿಲ್ಲ ಎಂದಿದ್ದಾರೆ.

ಇಬ್ಬರ ನಡುವೆ ಪ್ರೀತಿ ಗಾಢವಾಗಿದ್ದು, ಸಾರ್ವಜನಿಕವಾಗಿ ಈ ಬಗ್ಗೆ ಚರ್ಚಿಸುವುದು ಇಬ್ಬರಿಗೂ ಇಷ್ಟವಿಲ್ಲ ಎಂದು ತಿಳಿದು ಬಂದಿದೆ. ಜೂನ್ ಮೊದಲ ವಾರ ಇಬ್ಬರು ಭೇಟಿಯಾಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ಈ ನಡುವೆ ರೈನಾ ಹಾಗೂ ಶ್ರುತಿ ಕೇವಲ ಒಳ್ಳೆ ಸ್ನೇಹಿತರು ಮಾತ್ರ, ಮಾಜಿ ಕೇಂದ್ರ ಸಚಿವ ಪ್ರಫುಲ್ ಪಟೇಲ್ ಪುತ್ರಿ ಪೂರ್ಣಾ ಜತೆ ರೈನಾ ಡೇಟಿಂಗ್ ಮಾಡುತ್ತಿದ್ದಾನೆ ಎನ್ನಲಾಗಿದೆ.

Story first published:  Friday, May 30, 2014, 16:11 [IST]
English summary
CSK Player Suresh Raina is happy with his batting form but not with the rumours floating in the media about his personal life.The 27-year-old left-hander is clearly disappointed with these rumours and took to the micro-blogging site Twitter to clarify his status.
ಅಭಿಪ್ರಾಯ ಬರೆಯಿರಿ