Englishहिन्दीമലയാളംதமிழ்తెలుగు

ಪಂಜಾಬ್ ಮಣಿಸಿ ಫೈನಲಿಗೆ ಕೆಕೆಆರ್ ಲಗ್ಗೆ

Posted by:
Updated: Wednesday, May 28, 2014, 22:59 [IST]
 

ಕೋಲ್ಕತ್ತಾ, ಮೇ.28 : ಐಪಿಎಲ್ 7 ಟೂರ್ನಿಯ ಕಪ್ ಗೆಲ್ಲುವ ನೆಚ್ಚಿನ ತಂಡ ಎನಿಸಿರುವ ಕಿಂಗ್ಸ್ XI ಪಂಜಾಬ್ ತಂಡಕ್ಕೆ ಸಣ್ಣ ಶಾಕ್ ತಗುಲಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಬುಧವಾರ ನಡೆದ ಪಂದ್ಯದಲ್ಲಿ ಆಲ್ ರೌಂಡ್ ಪ್ರದರ್ಶನ ನೀಡಿ 28 ರನ್ ಗಳ ಜಯ ದಾಖಲಿಸಿದ್ದಲ್ಲದೆ ಫೈನಲಿಗೆ ಲಗ್ಗೆ ಇಟ್ಟಿದೆ.

ಮೊದಲು ಬ್ಯಾಟಿಂಗ್ ಮಾಡುವ ಸದಾವಕಾಶ, ತವರು ನೆಲದ ಲಾಭ ಪಡೆದ ಗೌತಮ್ ಗಂಭೀರ್ ತಂಡ ನಿಗದಿತ 20 ಓವರ್ ಗಳಲ್ಲಿ 163/8 ಸ್ಕೋರ್ ಮಾಡಿತು. ಉತ್ತಮ ಚೇಸರ್ ಎನಿಸಿರುವ ಪ್ರೀತಿ ಜಿಂಟಾ ಹುಡುಗರು ಕಾಲ ಕಾಲಕ್ಕೆ ವಿಕೆಟ್ ಕಳೆದುಕೊಳ್ಳುತ್ತಾ ಈಡೆನ್ ಗಾರ್ಡನ್ಸ್ ನಲ್ಲಿ 135/8 ರನ್ ಮಾಡಿ ಸೋಲೊಪ್ಪಿಕೊಂಡರು. ಈ ಗೆಲುವಿನ ಮೂಲಕ ಕೆಕೆಆರ್ ತಂಡ ಮೂರು ವರ್ಷಗಳಲ್ಲಿ ಎರಡನೇ ಬಾರಿಗೆ ಫೈನಲ್ ತಲುಪಿದ ಸಾಧನೆಗೆ ಪಾತ್ರವಾಗಿದೆ. ಶಾರುಖ್ ಖಾನ್ ಒಡೆತನದ ತಂಡ 2012ರ ಕಪ್ ವಿನ್ನರ್ ಆಗಿದ್ದು ಈ ಬಾರಿ ಅಂತಿಮ ಹಣಾಹಣಿ ತಲುಪಿದೆ.

ಸ್ಕೋರ್ ಕಾರ್ಡ್ ನೋಡಿ

ಪಂಜಾಬ್ ಪರ ಮನನ್ ವೋಹ್ರಾ (26ರನ್ 19 ಎಸೆತ, 3X6), ವೃದ್ಧಿಮನ್ ಸಹಾ (35 ರನ್, 31ಎ, 2x4 2x6) ಹಾಗೂ ನಂತರ ಜಾರ್ಜ್ ಬೈಲಿ (26 ರನ್; 17 ಎ, 1x4, 2x6) ಹೋರಾಟ ನಡೆಸಿದ್ದು ಫಲ ನೀಡಲಿಲ್ಲ. ಉತ್ತಮ ಲಯದಲ್ಲಿರುವ ಗ್ಲೆನ್ ಮ್ಯಾಕ್ಸ್ ವೆಲ್ (6), ಡೇವಿಡ್ ಮಿಲ್ಲರ್ (8) ರನ್ ಗಳಿಸಿ ಪೆವಿಲಿಯನ್ ಸೇರಿದ್ದು ಪಂಜಾಬಿಗೆ ಮುಳುವಾಯಿತು.

 ಪಂಜಾಬ್ ಮಣಿಸಿ ಫೈನಲಿಗೆ ಕೆಕೆಆರ್ ಲಗ್ಗೆ

ಕೆಕೆಆರ್ ಇನ್ನಿಂಗ್ಸ್ : ನಾಯಕ ಗೌತಮ್ ಗಂಭೀರ್ 1 ರನ್ ಗಳಿಸಿ ಔಟಾದರೂ ಧೃತಿಗೆಡದೆ ಇನ್ನೊಂದು ತುದಿಯಲ್ಲಿ ರನ್ ಪೇರಿಸುತ್ತ ರಾಬಿನ್ ಉತ್ತಪ್ಪ ಉತ್ತಮ ಅಡಿಪಾಯ ಹಾಕಿಕೊಟ್ಟರು. ಉತ್ತಪ್ಪ (42 ರನ್; 30 ಎ 4x4 2x6) ಕೆಕೆಆರ್ ಗೆ ಇನ್ನಿಂಗ್ಸ್ ಬೆಳೆಸಿತು. ಟೂರ್ನಿಯಲ್ಲಿ 665 ರನ್ ಚೆಚ್ಚುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಎಂಬ ವಿರಾಟ್ ಕೊಹ್ಲಿ ಬರೆದಿದ್ದ ದಾಖಲೆ (634, 2012ರ ಐಪಿಎಲ್) ಮುರಿದಿದ್ದಾರೆ.

ಕೆಕೆಆರ್ ಪರ ಶಕೀಲ್ (18), ಯೂಸುಫ್ ಪಠಾಣ್ (20), ಡೆಸ್ಕಾಟ್ (17), ಎಸ್ಕೆ ಯಾದವ್ (20) ಹಾಗೂ ಪಿಯೂಷ್ ಚಾವ್ಲಾ 9 ಎಸೆತದಲ್ಲಿ 17 ರನ್ ಚೆಚ್ಚಿದ್ದು ಫಲ ನೀಡಿತು. ಕೊನೆ ನಾಲ್ಕು ಓವರ್ ನಲ್ಲಿ ಪಂಜಾಬಿಗಳು ಚೆಚ್ಚಿಸಿಕೊಂಡಿದ್ದು ಪಂದ್ಯ ಸೋಲಲು ಪ್ರಮುಖ ಕಾರಣ ಎನ್ನಬಹುದು. ಕೆಕೆಆರ್ ತಂಡ ಈ ಜಯದೊಂದಿಗೆ ಮತ್ತೊಮ್ಮೆ ಕಪ್ ಎತ್ತುವ ಕನಸು ಕಾಣತೊಡಗಿದೆ.

Story first published:  Wednesday, May 28, 2014, 22:44 [IST]
English summary
Kolkata : Kolkata Knight Riders came up with an all-round show to romp into the final with a clinical 28-run decimation of Kings XI Punjab in qualifier 1 of the Indian Premier League here Wednesday.
ಅಭಿಪ್ರಾಯ ಬರೆಯಿರಿ