Englishहिन्दीമലയാളംதமிழ்తెలుగు

ಇಂಗ್ಲೆಂಡ್ ಸರಣಿಗೆ ಗಂಭೀರ್ ಇನ್, ಜಹೀರ್ ಔಟ್

Posted by:
Published: Wednesday, May 28, 2014, 18:40 [IST]
 

ಬೆಂಗಳೂರು, ಮೇ.28: ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಕೆಕೆಆರ್ ತಂಡದ ನಾಯಕ ಗೌತಮ್ ಗಂಭೀರ್ ಭಾರತ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಜುಲೈನಲ್ಲಿ ಕೈಗೊಳ್ಳಲಿರುವ ಇಂಗ್ಲೆಂಡ್ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟಿಸಲಾಗಿದ್ದು, ಜಹೀರ್ ಖಾನ್ ಅವರನ್ನು ತಂಡದಿಂದ ಕೈಬಿಡಲಾಗಿದೆ.

ಎಡಗೈ ಆಟಗಾರ ಗೌತಮ್ ಗಂಭೀರ್ ಅವರು ಭಾರತದ ಟೆಸ್ಟ್ ತಂಡದಲ್ಲಿ 2012ರಲ್ಲಿ ಕೊನೆ ಬಾರಿ ಆಡಿದ್ದರು. 2013ರ ಜನವರಿಯಲ್ಲಿ ಕೊನೆಯ ಬಾರಿಗೆ ಏಕದಿನ ಪಂದ್ಯದಲ್ಲಿ ಕಾಣಿಸಿಕೊಂಡಿದ್ದ ಗಂಭೀರ್ ತಂಡಕ್ಕೆ ಮತ್ತೆ ಮರಳಿದ್ದಾರೆ.

ವೇಳಾಪಟ್ಟಿ ನೋಡಿ | ಬಾಂಗ್ಲಾ ಸರಣಿ ತಂಡ

ಮುಂಬೈನಲ್ಲಿ ಸಭೆ ಸೇರಿದ ಬಿಸಿಸಿಐ ಆಯ್ಕೆ ಸಮಿತಿ 18 ಸದಸ್ಯರ ತಂಡವನ್ನು ಆಯ್ಕೆ ಮಾಡಿದ್ದು ಕರ್ನಾಟಕದ ಸ್ಟುವರ್ಟ್ ಬಿನ್ನಿ, ಈಶ್ವರ್ ಪಾಂಡೆಗೆ ಟೆಸ್ಟ್ ಟೋಪಿ ಧರಿಸುವ ಅವಕಾಶ ಲಭಿಸಿದೆ. ವೇಗಿ ಪಂಕಜ್ ಸಿಂಗ್ ಹಾಗೂ ಸಂದೀಪ್ ಪಾಟೀಲ್ ಗೆ ಕೂಡಾ ಮನ್ನಣೆ ಸಿಕ್ಕಿದೆ.

ಇಂಗ್ಲೆಂಡ್ ಸರಣಿಗೆ ಗಂಭೀರ್ ಇನ್, ಜಹೀರ್ ಔಟ್

ಬಾಂಗ್ಲಾದೇಶ ವಿರುದ್ಧದ ಏಕದಿನ ಅಂತಾರಾಷ್ಟ್ರೀಯ ಸರಣಿಯಿಂದ ವಿಶ್ರಾಂತಿ ಪಡೆದಿರುವ ನಾಯಕ ಎಂಎಸ್ ಧೋನಿ ಅವರು ಇಂಗ್ಲೆಂಡ್ ಸರಣಿಗೆ ಮರಳಲಿದ್ದು, ತಂಡದ ಸಾರಥ್ಯ ವಹಿಸಲಿದ್ದಾರೆ.

ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡ 5 ಟೆಸ್ಟ್ ಪಂದ್ಯ, 5 ಏಕದಿನ ಸರಣಿ ಹಾಗೂ 1 ಟ್ವೆಂಟಿ20 ಪಂದ್ಯವಾಡಲಿದೆ. ಜುಲೈ 9 ರಂದು ಟ್ರೆಂಟ್ ಬ್ರಿಡ್ಜ್ ನಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ ಕೊನೆ ಟೆಸ್ಟ್ ಓವಲ್ ನಲ್ಲಿ ಆಗಸ್ಟ್ 15 ರಂದು ನಡೆಯಲಿದೆ. ಟೆಸ್ಟ್ ಸರಣಿ ನಂತರ ಏಕದಿನ ಪಂದ್ಯಾವಳಿ ಆರಂಭವಾಗಲಿದ್ದು ಆಗಸ್ಟ್ 25 ರಿಂದ ಸೆಪ್ಟೆಂಬರ್ 7 ರ ತನಕ ಸರಣಿ ಮುಂದುವರೆಯಲಿದೆ.

ತಂಡ ಹೀಗಿದೆ: ಎಂಎಸ್ ಧೋನಿ(ನಾಯಕ), ಮುರಳಿ ವಿಜಯ್, ಶಿಖರ್ ಧವನ್, ಗೌತಮ್ ಗಂಭೀರ್, ಚೇತೇಶ್ವರ್ ಪೂಜಾರಾ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ರವೀಂದ್ರ ಜಡೇಜ, ಆರ್ ಅಶ್ವಿನ್, ಭುವನೇಶ್ವರ್ ಕುಮಾರ್, ಮಹಮ್ಮದ್ ಶಮಿ, ಈಶ್ವರ್ ಪಾಂಡೆ, ಇಶಾಂತ್ ಶರ್ಮ, ಸ್ಟುವರ್ಟ್ ಬಿನ್ನಿ, ವರುಣ್ ಅರೋನ್, ವೃದ್ಧಿಮಾನ್ ಸಹಾ, ಪಂಕಜ್ ಸಿಂಗ್

English summary
Gautam Gambhir has been recalled to the Indian Test squad for the tour of England in July and August. However, senior paceman Zaheer Khan has been ignored.
ಅಭಿಪ್ರಾಯ ಬರೆಯಿರಿ