Englishहिन्दीമലയാളംதமிழ்తెలుగు

ಬಾಂಗ್ಲಾ ಸರಣಿಗೆ ರೈನಾ ನಾಯಕ, ರಾಬಿನ್ ಇನ್

Posted by:
Updated: Wednesday, May 28, 2014, 18:56 [IST]
 

ಬೆಂಗಳೂರು, ಮೇ.28: ಎಡಗೈ ಆಟಗಾರ ಸುರೇಶ್ ರೈನಾಗೆ ಟೀಂ ಇಂಡಿಯಾದ ನಾಯಕತ್ವ ವಹಿಸಿಕೊಡಲಾಗಿದೆ. 2008ರ ನಂತರ ಒನ್ ಡೇ ಟೀಂಗೆ ಕರ್ನಾಟಕದ ರಾಬಿನ್ ಉತ್ತಪ್ಪ ಮರಳಿದ್ದಾರೆ. ಎಂಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ ಸೇರಿದಂತೆ ಪ್ರಮುಖ ಆಟಗಾರರಿಗೆ ರೆಸ್ಟ್ ನೀಡಿ ಬಾಂಗ್ಲಾದೇಶ ಸರಣಿಗೆ ತಂಡವನ್ನು ಬಿಸಿಸಿಐ ಈಗಷ್ಟೇ ಪ್ರಕಟಿಸಿದೆ.

ಬಾಂಗ್ಲಾದೇಶ ಪ್ರವಾಸಕ್ಕೆ ತೆರಳಲಿರುವ 15 ಮಂದಿ ತಂಡಕ್ಕೆ ಸುರೇಶ್ ರೈನಾ ನಾಯಕರಾಗಿರುವುದು ಹಿರಿಯ ಆಟಗಾರ ಎಂಬ ಅರ್ಹತೆಯಿಂದ ಮಾತ್ರ. ಕಳೆದ ಏಷ್ಯಾ ಕಪ್ ನಲ್ಲಿ ರೈನಾರನ್ನು ತಂಡದಿಂದ ಕೈ ಬಿಡಲಾಗಿತ್ತು. ಆದರೆ, ಈಗ ಆಯ್ಕೆಯಾಗಿರುವ ತಂಡದಲ್ಲಿ ರೈನಾ ಅವರೇ ಹಿರಿಯಣ್ಣ.

ವೇಳಾಪಟ್ಟಿ ನೋಡಿ | ಇಂಗ್ಲೆಂಡ್ ಸರಣಿಗೆ ತಂಡ

ಐಪಿಎಲ್ 7 ರಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ರಾಬಿನ್ ತಂಡಕ್ಕೆ ಸೇರಿದ್ದರೆ ಅವರ ಜತೆಗೆ ಕರ್ನಾಟಕದ ವೇಗಿ ವಿನಯ್ ಕುಮಾರ್ ಹಾಗೂ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ ಕುಡಾ ಸ್ಥಾನ ಗಳಿಸಿದ್ದಾರೆ. ಅಕ್ಷರ್ ಪಟೇಲ್ ತಂಡದ ಹೊಸ ಮುಖವಾಗಿದ್ದಾರೆ. ಧೋನಿ ಸ್ಥಾನದಲ್ಲಿ ವಿಕೆಟ್ ಕೀಪರ್ ಆಗಿ ವೃದ್ಧಿಮಾನ್ ಸಹಾ ಆಡಲಿದ್ದಾರೆ.

ಬಾಂಗ್ಲಾ ಸರಣಿಗೆ ರೈನಾ ನಾಯಕ, ರಾಬಿನ್ ಇನ್

28 ವರ್ಷ ವಯಸ್ಸಿನ ಉತ್ತಪ್ಪ ಐಪಿಎಲ್ 7 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಾ 15 ಪಂದ್ಯಗಳಲ್ಲಿ 655 ರನ್ ಚೆಚ್ಚಿದ್ದಾರೆ. ಇದಕ್ಕೂ ಕಳೆದ ರಣಜಿ ಋತುವಿನಲ್ಲಿ ಕರ್ನಾಟಕ ತಂಡ ಕಪ್ ಗೆಲ್ಲಲು ಸಹಕಾರಿಯಾಗಿದ್ದರು. ಜತೆಗೆ ವಿಜಯ್ ಹಜಾರೆ, ಏಕದಿನ ಸರಣಿ ಎಲ್ಲದರಲ್ಲೂ ರಾಬಿನ್ ಮಿಂಚಿದ್ದರು 3 ಶತಕ, 1 ಅರ್ಧಶತಕ ಜತೆಗೆ 76.57 ಸರಾಸರಿಯಂತೆ 536 ರನ್ ಗಳಿಸಿದ್ದರು. ಜೂ.15ರಿಂದ ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಮೂರು ಏಕದಿನ ಪಂದ್ಯಗಳ ಸರಣಿ ಆಡಲಿದೆ.

ಟೀಂ ಇಂಡಿಯಾ : ಸುರೇಶ್ ರೈನಾ(ನಾಯಕ), ರಾಬಿನ್ ಉತ್ತಪ್ಪ, ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರಾ, ಅಂಬಟಿ ರಾಯುಡು, ಮನೋಜ್ ತಿವಾರಿ, ಕೇದಾರ್ ಜಾಧವ್, ವೃದ್ಧಿಮಾನ್ ಸಹಾ, ಪರ್ವೇಜ್ ರಸೂಲ್, ಅಕ್ಷರ್ ಪಟೇಲ್, ಆರ್ ವಿನಯ್ ಕುಮಾರ್, ಉಮೇಶ್ ಯಾದವ್, ಸ್ಟುವರ್ಟ್ ಬಿನ್ನಿ, ಮೋಹಿತ್ ಶರ್ಮ, ಅಮಿತ್ ಮಿಶ್ರಾ

Story first published:  Wednesday, May 28, 2014, 17:49 [IST]
English summary
Suresh Raina has been named India captain for the One Day International tour of Bangladesh this month. Regular captain MS Dhoni has been rested along with Virat Kohli, R Ashwin, Shikhar Dhawan, Ravindra Jadeja and Rohit Sharma.
ಅಭಿಪ್ರಾಯ ಬರೆಯಿರಿ