Englishहिन्दीമലയാളംதமிழ்తెలుగు

ವಿವಾದಗಳ ನಡುವೆ ಐಪಿಎಲ್ ಹಬ್ಬ ಆರಂಭ

Posted by:
Published: Wednesday, April 16, 2014, 12:04 [IST]
 

ದುಬೈ, ಏ. 16: ಏಳನೆ ಆವೃತ್ತಿಯ ಐಪಿಎಲ್ ಪಂದ್ಯಾವಳಿಗೆ ಬುಧವಾರ ರಾತ್ರಿ ಯುನೈಟೆಡ್ ಅರಬ್ ಎಮಿರೇಟ್ಸ್ ನ ಅಬುಧಾಬಿಯ ಶೇಖ್ ಝಾಹಿದ್ ಸ್ಟೇಡಿಯಂನಲ್ಲಿ ಚಾಲನೆ ದೊರೆಯಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಮಾಜಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ವಿವಾದಗಳ ನಡುವೆ ಐಪಿಎಲ್ ಟೂರ್ನಿಯನ್ನು ಸುಸೂತ್ರವಾಗಿ ಮುನ್ನಡೆಸುವ ಜವಾಬ್ದಾರಿಯನ್ನು ಮಾಜಿ ಕ್ರಿಕೆಟರ್ ಸುನಿಲ್ ಗವಾಸ್ಕರ್ ಹೊತ್ತುಕೊಂಡಿದ್ದಾರೆ.

ಯುಎಇನಲ್ಲಿ ಏ.16 ರಿಂದ ಏ.30ರ ತನಕ ಐಪಿಎಲ್ ಪಂದ್ಯಾವಳಿ ನಡೆಯಲಿದೆ. ಮೇ.2ಕ್ಕೆ ಭಾರತಕ್ಕೆ ಐಪಿಎಲ್ ಪಂದ್ಯಗಳು ಮರಳಲಿದೆ. ಬಾಲಿವುಡ್ ನಟ ಶಾರುಖ್ ಖಾನ್ ಅವರು ಐಪಿಎಲ್ ಹಂಗಾಮಕ್ಕೆ ಭರ್ಜರಿಯಾಗಿ ಚಾಲನೆ ನೀಡಲಿದ್ದು ಎಲ್ಲಾ ತಂಡಗಳ ನಾಯಕರೊಂದಿಗೆ ಹಾಡಿ ಕುಣಿದು ನಲಿಯಲಿದ್ದಾರೆ.

ಏಳನೆ ಆವೃತ್ತಿಯಲ್ಲಿ 8 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿದ್ದು, ಏಪ್ರಿಲ್ 16ರಿಂದ ಜೂನ್ 1ರ ತನಕ ನಡೆಯಲಿರುವ ಪಂದ್ಯಾವಳಿಯಲ್ಲಿ 60 ಪಂದ್ಯಗಳು ನಡೆಯಲಿವೆ. ಭಾರತದಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಏ.16ರಿಂದ 30ರ ತನಕ ಆರಂಭದ 20 ಪಂದ್ಯಗಳನ್ನು ಯುಎಇಯಲ್ಲಿ ಆಯೋಜಿಸಲಾಗಿದೆ. ಫೈನಲ್ ಜೂ.1ರಂದು ಮುಂಬೈನ ವಾಂಖೇಡೆ ಸ್ಟೇಡಿಯಂನಲ್ಲಿ ನಿಗದಿಯಾಗಿದೆ.

ವಿವಾದಗಳ ನಡುವೆ ಐಪಿಎಲ್ ಹಬ್ಬ ಆರಂಭ

ಮುಂಬೈ ತಂಡವನ್ನು ನಾಯಕರಾಗಿ ಟೀಮ್ ಇಂಡಿಯಾದ ಆರಂಭಿಕ್ ಆಟಗಾರ ರೋಹಿತ್ ಶರ್ಮ ಮುನ್ನಡೆಸುತ್ತಿದ್ದಾರೆ. ಹರ್ಭಜನ್ ಸಿಂಗ್, ಲಸಿತ್ ಮಾಲಿಂಗ, ಕೀರನ್ ಪೊಲಾರ್ಡ್ ಮತ್ತು ಅಂಬಟಿ ರಾಯುಡು ಕಳೆದ ಆವೃತ್ತಿಯಲ್ಲಿ ಮುಂಬೈ ತಂಡದಲ್ಲಿದ್ದರು. ವೇಗಿ ಜಹೀರ್ ಖಾನ್ ಮೂರು ವರ್ಷಗಳ ಬಳಿಕ ಮುಂಬೈ ತಂಡಕ್ಕೆ ಮರಳಿದ್ದಾರೆ.

ಆಸ್ಟ್ರೇಲಿಯದ ಮೈಕ್ ಹಸ್ಸಿ ಮುಂಬೈ ಇಂಡಿಯನ್ಸ್ ನ ಇನಿಂಗ್ಸ್ ಆರಂಭಿಸಲಿದ್ದಾರೆ. ಇವರೊಂದಿಗೆ ವಿಕೆಟ್ ಕೀಪರ್ ಆದಿತ್ಯ ತಾರೆ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಮಧ್ಯಮ ಸರದಿಯಲ್ಲಿ ನಾಯಕ ರೋಹಿತ್ ಶರ್ಮ, ಅಂಬಟಿ ರಾಯುಡು ಮತ್ತು ಕೀರನ್ ಪೊಲಾರ್ಡ್ ಇದ್ದಾರೆ. ಮುಂಬೈ ತಂಡದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ನ್ಯೂಜಿಲೆಂಡ್ ‌ನ ಆಲ್ ರೌಂಡರ್ ಕೋರಿ ಆಂಡರ್ಸನ್ ಸೇರ್ಪಡೆಗೊಂಡಿರುವ ಹಿನ್ನೆಲೆಯಲ್ಲಿ ತಂಡದ ಮಧ್ಯಮ ಸರದಿ ಇನ್ನಷ್ಟು ಬಲಿಷ್ಠವಾಗಿದೆ.

ಸ್ಪಿನ್ ಬೌಲಿಂಗ್ ವಿಭಾಗವನ್ನು ಹರ್ಭಜನ್ ಸಿಂಗ್ ಮತ್ತು ಪ್ರಗ್ಯಾನ್ ಓಜಾ, ವೇಗದ ಬೌಲಿಂಗ್ ವಿಭಾಗವನ್ನು ಲಸಿತ್ ಮಾಲಿಂಗ ಮತ್ತು ಝಹೀರ್ ಖಾನ್ ಮುನ್ನಡೆಸುವರು.

ಕೋಲ್ಕತಾ ನೈಟ್ ರೈಡರ್ಸ್ ‌ ತಂಡ ಬ್ಯಾಟಿಂಗ್ ‌ನಲ್ಲಿ ನಾಯಕ ಗೌತಮ್ ಗಂಭೀರ್ ಮತ್ತು ಜಾಕ್ ಕಾಲಿಸ್ ‌ನ್ನು ಅವಲಂಬಿಸಿದೆ. ಇವರು ಕಳೆದ ಆವೃತ್ತಿಯಲ್ಲೂ ಕೆಕೆಆರ್ ‌ನಲ್ಲಿದ್ದರು. ದೇಶಿ ಕ್ರಿಕೆಟ್ ‌ನಲ್ಲಿ ಅತ್ಯುತ್ತಮ ಫಾರ್ಮ್ ‌ನಲ್ಲಿರುವ ರಾಬಿನ್ ಉತ್ತಪ್ಪ ಅವರ ಮೇಲೆ ತಂಡ ಅಪಾರ ನಿರೀಕ್ಷೆಯನ್ನು ಇಟ್ಟುಕೊಂಡಿದೆ. ಮನ್ವಿಂದರ್ ಬಿಸ್ಲಾ ತಂಡಕ್ಕೆ ಹೊಸ ಸೇರ್ಪಡೆ. ಯೂಸುಫ್ ಪಠಾಣ್ ಮತ್ತು ಟನ್ ಡೊಶಾಟ್ ಸೇರಿದಂತೆ ಕೆಲವು ಮಂದಿ ಉತ್ತಮ ಆಲ್ ‌ರೌಂಡರ್ ‌ಗಳು ತಂಡದ ಮಧ್ಯಮ ಸರದಿಯಲ್ಲಿ ಸ್ಥಾನ ಪಡೆದಿದ್ದಾರೆ.

ಕೋಲ್ಕತಾ ತಂಡದ ಬೌಲರ್ ‌ಗಳ ಹೊಂದಾಣಿಕೆ ಚೆನ್ನಾಗಿಲ್ಲ. ಬಾಂಗ್ಲಾದ ಶಾಕಿಬ್ ಅಲ್ ಹಸನ್ ತಂಡದ ಆಲ್ ‌ರೌಂಡರ್. ಅವರಿಗೆ ಸಾಥ್ ನೀಡಲು ಸುನಿಲ್ ನರೇನ್ ಇದ್ದಾರೆ. ರಸ್ಸೆಲ್, ಪ್ಯಾಟ್ ಕುಮಿನ್ಸ್, ಉಮೇಶ್ ಯಾದವ್ ಮತ್ತು ಆರ್. ವಿನಯ್ ಕುಮಾರ್ ನಡುವೆ ಬೌಲಿಂಗ್ ವಿಭಾಗದಲ್ಲಿ ಅಂತಿಮ ಹನ್ನೊಂದರ ವಿಭಾಗದಲ್ಲಿ ಸ್ಥಾನ ಪಡೆಯಲು ಪೈಪೋಟಿ ಏರ್ಪಟ್ಟಿದೆ.

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮ (ನಾಯಕ), ಆದಿತ್ಯ ತಾರೆ(ವಿಕೆಟ್ ಕೀಪರ್), ಮೈಕ್ ಹಸ್ಸಿ, ಸುಶಾಂತ್ ಮರಾಠೆ, ಅಂಬಟಿ ರಾಯುಡು, ಕೀರನ್ ಪೊಲಾರ್ಡ್, ಕೋರಿ ಆಯಂಡರ್ಸನ್, ಬೆನ್ ಡಂಕ್, ಜೋಶ್ ಹಝ್ಲೆವುಡ್, ಹರ್ಭಜನ್ ಸಿಂಗ್, ಪ್ರಗ್ಯಾನ್ ಓಜಾ, ಶ್ರೇಯಸ್ ಗೋಪಾಲ್, ಜಲಜ್ ಸಕ್ಸೇನಾ, ಸಿ.ಎಂ.ಗೌತಮ್, ಕೆ. ಸಾಂಟೊಕಿ, ಮರ್ಚಂಟ್ ಡೆ ಲಾಂಗೆ, ಜಪ್ರೀತ್ ಬುಮ್ರಾ, ಅಪೂರ್ವ್ ವಾಂಖೇಡೆ, ಪವನ್ ಸುಯಾಲ್.

ಕೋಲ್ಕತಾ ನೈಟ್ ರೈಡರ್ಸ್: ಗೌತಮ್ ಗಂಭೀರ್(ನಾಯಕ), ಜಾಕ್ ಕಾಲಿಸ್, ರಾಬಿನ್ ಉತ್ತಪ್ಪ, ಮನೀಷ್ ಪಾಂಡೆ, ಶಾಕಿಬ್ ಅಲ್ ಹಸನ್, ಮನ್ವೀಂದರ್ ಬಿಸ್ಲಾ(ವಿಕೆಟ್ ಕೀಪರ್), ರ್ಯಾನ್ ಟನ್ ಡೊಶಾಟ್, ಯೂಸುಫ್ ಪಠಾಣ್, ಸೂರ್ಯ ಕುಮಾರ್ ಯಾದವ್, ಸುನಿಲ್ ನರೇನ್, ಕ್ರಿಸ್ ಲಿನ್, ಕುಲದೀಪ್ ಯಾದವ್, ಪ್ಯಾಟ್ ಕುಮಿನ್ಸ್, ದೇಬಾಬೃತಾ ದಾಸ್, ಪಿಯೂಷ್ ಚಾವ್ಲಾ, ಮೊರ್ನೆ ಮೊರ್ಕೆಲ್, ಉಮೇಶ್ ಯಾದವ್, ಸಾಯನ್ ಮಂಡಲ್, ಆರ್.ವಿನಯ್ ಕುಮಾರ್, ಆ್ಯಂಡ್ರೆ ರಸ್ಸೆಲ್, ವೀರ್ ಪ್ರತಾಪ್ ಸಿಂಗ್.

Read in English: Controversial IPL returns
English summary
Fighting for credibility after being left devastated by a spot-fixing scandal, the glamorous but controversial Indian Premier League will roll out its seventh edition here from Wednesday. Defending champions Mumbai Indians will square off against 2012 winners Kolkata Knight Riders
ಅಭಿಪ್ರಾಯ ಬರೆಯಿರಿ