Englishहिन्दीമലയാളംதமிழ்తెలుగు

ಎನ್ ಶ್ರೀನಿವಾಸನ್ ,ಧೋನಿ ಭವಿಷ್ಯ ಮಾ.28ಕ್ಕೆ ನಿರ್ಧಾರ

Posted by:
Published: Thursday, March 27, 2014, 19:39 [IST]
 

ನವದೆಹಲಿ, ಮಾ.27: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಪೂರ್ಣಗೊಳ್ಳುವವರೆಗೆ ಹಾಲಿ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ತಾತ್ಕಾಲಿಕವಾಗಿ ಸುನೀಲ್ ಗವಾಸ್ಕರ್ ಅಥವಾ ಹಿರಿಯ ಕ್ರಿಕೆಟಿಗರು ಒಬ್ಬರನ್ನು ಆ ಸ್ಥಾನಕ್ಕೆ ನೇಮಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಾಳೆ ಮಧ್ಯಂತರ ತೀರ್ಪು ನೀಡುವ ಸಾಧ್ಯತೆ ಇದೆ. ಜತೆಗೆ ಚೆನ್ನೈ ಸೂಪರ್ ‌ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಪ್ರಸಕ್ತ ಐಪಿಎಲ್ ತಂಡದಲ್ಲಿ ಭಾಗವಹಿಸದೆ ಇರುವುದು ಉತ್ತಮ ಎಂಬ ಅಭಿಪ್ರಾಯವನ್ನು ನ್ಯಾಯಾಲಯ ವ್ಯಕ್ತಪಡಿಸಿದೆ. ಕೋರ್ಟ್ ‌ನಲ್ಲಿ ಈ ಕುರಿತಂತೆ ವಾದ-ಪ್ರತಿವಾದಗಳು ಮುಂದುವರಿದಿದ್ದು, ಚೆನ್ನೈ ಸೂಪರ್ ‌ಕಿಂಗ್ ನಾಯಕ ಮಹೇಂದ್ರಸಿಂಗ್ ಧೋನಿ ಅವರು ನ್ಯಾಯಮೂರ್ತಿ ಮುದ್ಗಲ್ ಸಮಿತಿಗೆ ತಪ್ಪು ಮಾಹಿತಿ ನೀಡಿ ಹಾದಿ ತಪ್ಪಿಸಿದ್ದಾರೆ ಎಂಬ ಅಂಶವು ಪ್ರಸ್ತಾಪವಾಯಿತು.

ಈ ಹಿನ್ನೆಲೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಪ್ರತಿಕ್ರಿಯೆಯನ್ನು ನಾಳೆಯೊಳಗಾಗಿ ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ನ್ಯಾಯಾಧೀಶರು ಸೂಚಿಸಿದ್ದಾರೆ.

ಎನ್ ಶ್ರೀನಿವಾಸನ್ ,ಧೋನಿ ಭವಿಷ್ಯ ಮಾ.28ಕ್ಕೆ ನಿರ್ಧಾರ

ಧೋನಿ ಭವಿಷ್ಯ ನಾಳೆ ನಿರ್ಧಾರ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿವೃತ್ತ ನ್ಯಾಯಮೂರ್ತಿ ಮುದ್ಗಲ್ ಸಮಿತಿ ಎದುರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂಬ ಅಂಶ ಪ್ರಸ್ತಾಪವಾಗಿರುವುದು ಬಿಸಿಸಿಐಗೆ ಬಿಸಿ ತುಪ್ಪವಾಗಿದೆ. ಈ ಕುರಿತಂತೆ ಸರ್ವೋಚ್ಚ ನ್ಯಾಯಾಲಯ ನಾಳೆ ಮಹತ್ವದ ತೀರ್ಪು ಪ್ರಕಟಿಸುವ ಸಾಧ್ಯತೆಯಿದ್ದು, ಧೋನಿ ಭವಿಷ್ಯ ನಾಳೆ ನಿರ್ಧಾರವಾಗಲಿದೆ.

ಬಿಸಿಸಿಐ ವಾದ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಮುದ್ಗಲ್ ಸಮಿತಿ ನೀಡಿರುವ ವರದಿಯನ್ನು ಚಾಚೂ ತಪ್ಪದೆ ಜಾರಿಗೆ ತರುತ್ತೇವೆ. ಆದರೆ, ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಶ್ರೀನಿವಾಸನ್ ಅವರನ್ನು ಪದಚ್ಯುತಿಗೊಳಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಇಂದು ನ್ಯಾಯಾಲಯಕ್ಕೆ ಲಿಖಿತ ಹೇಳಿಕೆ ನೀಡಿದೆ.

ಕಳೆದ ಎರಡು ದಿನಗಳ ಹಿಂದೆ ಸುಪ್ರೀಂಕೋರ್ಟ್ ‌ನ ವಿಭಾಗೀಯ ಪೀಠ ಕೂಡಲೇ ಬಿಸಿಸಿಐ ಅಧ್ಯಕ್ಷರು ರಾಜೀನಾಮೆ ನೀಡಿ. ಇಲ್ಲವೇ ನಾವೇ ಆ ಕೆಲಸ ಮಾಡಬೇಕಾಗುತ್ತದೆ ಎಂದು ಖಾರವಾಗಿ ತಿಳಿಸಿದ್ದ ತರುವಾಯ ಬಿಸಿಸಿಐ ಇಂದು ಸಲ್ಲಿಸಿರುವ ಹೇಳಿಕೆ ತೀವ್ರ ಕುತೂಹಲ ಕೆರಳಿಸಿದೆ.
ಮುಕ್ತ ಹಾಗೂ ನ್ಯಾಯಸಮ್ಮತ ತನಿಖೆಗೆ ಎಲ್ಲಾ ರೀತಿಯಲ್ಲೂ ಮಂಡಳಿ ಸಹಕಾರ ನೀಡುತ್ತದೆ ಮತ್ತು ಮುದ್ಗಲ್ ವರದಿಯನ್ನು ಜಾರಿಗೆ ತರುತ್ತೇವೆ ಎಂದು ತಿಳಿಸಿರುವುದಲ್ಲದೆ, ಯಾವುದೇ ರೀತಿಯಲ್ಲೂ ಅಡೆ-ತಡೆಗಳು ಆಗುವುದಿಲ್ಲ ಎಂದು ಭರವಸೆ ನೀಡಿದೆ.

ನಾವು ಎಲ್ಲಾ ವಿಧದಲ್ಲೂ ಪರಿಶೀಲನೆ ನಡೆಸಿ ಕ್ರಿಕೆಟ್ ‌ನ ಒಳಿತಿಗಾಗಿ ಮತ್ತು ಅದನ್ನು ಪ್ರೀತಿಸುವ ಜನರಿಗಾಗಿ ಆದೇಶ ಹೊರಡಿಸಿದ್ದೇವೆ. ಆದರೆ, ನೀವು ಸಲ್ಲಿಸಿರುವ ಹೇಳಿಕೆ ಏನು ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ.

ಮುದ್ಗಲ್ ವರದಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ‌ನ ಮಾಲೀಕರಾದ ಶ್ರೀನಿವಾಸನ್ ಅಳಿಯ ಗುರುನಾಥ್ ಮೇಯಪ್ಪನ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಹೇಳಿದೆ. ಅಲ್ಲದೆ, ನ್ಯಾಯಾಲಯದಿಂದಲೇ ಮುಂದಿನ ವಿಚಾರಣೆ ನಡೆಸಲು ಹೇಳಿರುವಾಗ ಬಿಸಿಸಿಐ ಅಧ್ಯಕ್ಷ ಸ್ಥಾನದಲ್ಲಿ ಶ್ರೀನಿವಾಸನ್ ಅವರು ಉಳಿದರೆ ತನಿಖೆಯಾದರೂ ಹೇಗೆ ನ್ಯಾಯಸಮ್ಮತವಾಗಿ ನಡೆಯಲು ಸಾಧ್ಯ ಎಂದು ಕೇಳಿದೆ.

English summary
On Thursday, the Supreme Court put forward former India captain Sunil Gavaskar as Srinivasan's replacement and said the Chennai and Rajasthan franchises should be kept out of the IPL pending the completion of probe due to their role in the scandal.
ಅಭಿಪ್ರಾಯ ಬರೆಯಿರಿ