Englishहिन्दीമലയാളംதமிழ்తెలుగు

ಶ್ರೀನಿವಾಸನ್ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿ

Posted by:
Updated: Tuesday, March 25, 2014, 15:32 [IST]
 

ಶ್ರೀನಿವಾಸನ್ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿ
 

ಕಳೆದ ಫೆ.10 ರಂದು ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಮುದಗಲ್ ನೇತೃತ್ವದ ತನಿಖಾ ಸಮಿತಿ ಸುಪ್ರೀಂಕೋರ್ಟಿಗೆ ವರದಿ ಸಲ್ಲಿಸಿತ್ತು. ಅದರನ್ವಯ ಸುಪ್ರೀಂ ಕೋರ್ಟ್ ಇದರ ವಿಚಾರಣೆ ಕೈಗೆತ್ತಿಕೊಂಡಿತ್ತು. ವರದಿಯಲ್ಲಿ ಪ್ರಸ್ತುತ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶವಿಲ್ಲ. ಹೀಗಾಗಿ ನ್ಯಾಯಾಲಯವೇ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು.

ಶ್ರೀನಿವಾಸನ್ ಅವರ ಅಳಿಯ ಮೇಯಪ್ಪನ್ ಚೆನ್ನೈ ಸೂಪರ್ ಕಿಂಗ್ಸ್ ಪರ ಬೆಟ್ಟಿಂಗ್ ನಲ್ಲಿ ತೊಡಗಿ ಸ್ಪಾಟ್ ಫಿಕ್ಸಿಂಗ್ ನಲ್ಲೂ ಭಾಗಿಯಾಗಿರುವ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ತನಿಖಾ ಆಯೋಗ ಹೊರ ಹಾಕಿದ್ದು, ಇದನ್ನು ಸುಪ್ರೀಂಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸಾಕಷ್ಟು ಲಾಬಿ ನಡೆಸಿ ಕೊನೆಗೂ ಹೈಕೋರ್ಟ್ ಮೊರೆ ಹೋಗಿ ಅಧಿಕಾರ ವಹಿಸಿಕೊಂಡಿದ್ದ ಶ್ರೀನಿವಾಸನ್ ಗೆ ಸುಪ್ರೀಂಕೋರ್ಟ್ ಆದೇಶದಿಂದ ಮುಖಭಂಗವಾಗಿದೆ.

ಜನರನ್ನು ವಂಚಿಸುವಂಥ ಪ್ರಕರಣ ಇದಾಗಿದ್ದು, ಐಪಿಎಲ್ ಪ್ರಾಂಚೈಸಿಗಳಲ್ಲಿ ಶ್ರೀನಿವಾಸನ್ ಕೂಡ ಚೆನ್ನೈ ಸೂಪರ್ ಕಿಂಗ್ಸ್ ನ ಮಾಲೀಕರಾಗಿದ್ದಾರೆ. ಅದೇ ತಂಡದ ಮೇಲೆ ಮೋಸದಾಟದ ಆರೋಪಗಳು ಕೇಳಿ ಬರುತ್ತಿವೆ. ಹೀಗಿರುವಾಗ ಶ್ರೀನಿವಾಸನ್ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆದರೆ ನ್ಯಾಯಸಮ್ಮತ ತನಿಖೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

Story first published:  Tuesday, March 25, 2014, 15:13 [IST]
English summary
Coming down heavily on BCCI President N Srinivasan, the Supreme Court today asked him to step down for a free and fair probe in the betting and spot fixing scandal involving his son-in-law Gurunath Meiyappan and some cricketers, failing which it would pass an order.
ಅಭಿಪ್ರಾಯ ಬರೆಯಿರಿ