Englishहिन्दीമലയാളംதமிழ்తెలుగు

ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Posted by:
Updated: Friday, March 21, 2014, 22:37 [IST]
 

ಢಾಕಾ, ಮಾ.21: ವಿಶ್ವ ಟಿ20 ಹಣಾಹಣಿಯ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಒಡ್ಡಿದ್ದ 131 ರನ್ ಗಳ ಗುರಿಯನ್ನು 3 ವಿಕೆಟ್ ಕಳೆದುಕೊಂಡು ಧೋನಿ ಪಡೆ ಸುಲಭವಾಗಿ ಗೆಲುವು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಈ ಗೆಲುವಿನ ಮೂಲಕ ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಅಜೇಯವಾಗಿ ಉಳಿದಿದೆ. ವಿಶ್ವಕಪ್ 1992,1996,1999,2003 ವಿಶ್ವ ಟಿ20 2007 (ಎರಡು ಬಾರಿ),2012, 2014 ರಲ್ಲಿ ಭಾರತ ಗೆಲುವಿನ ನಗೆ ಬೀರಿದೆ.

ಸ್ಕೋರ್ ಕಾರ್ಡ್ ನೋಡಿ

ಆರಂಭಿಕ ಆಟಗಾರರಾದ ರೋಹಿತ್ ಶರ್ಮ ಹಾಗೂ ಶಿಖರ್ ಧವನ್ ಅವರು ಆತ್ಮವಿಶ್ವಾಸದಿಂದ ಪಾಕಿಸ್ತಾನದ ಬೌಲರ್ ಗಳನ್ನು ಎದುರಿಸುತ್ತಾ ಭಾರತಕ್ಕೆ ಉತ್ತಮ ಆರಂಭ ಒದಗಿಸಿದರು. ಶಿಖರ್ ಧವನ್ 30 ರನ್(28 ಎ, 5x4),ರೋಹಿತ್ ಶರ್ಮ 24 ರನ್(21 ಎ, 1x4, 2x6) ಗಳಿಸಿ ಪಾಕಿಸ್ತಾನಕ್ಕೆ ಸುಲಭವಾಗಿ ವಿಕೆಟ್ ಒಪ್ಪಿಸಿದೆ ಆಡಿದ್ದು ಭಾರತಕ್ಕೆ ಒಳ್ಳೆ ಅಡಿಪಾಯ ಒದಗಿಸಿತು. ಆದರೆ, ಇಬ್ಬರು ಹತ್ತು ರನ್ ಗಳ ಅಂತರದಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಗೆ ಮರಳಿದಾಗ ತಂಡದ ಮೊತ್ತ 64ರನ್ ದಾಟಿರಲಿಲ್ಲ.

ಈ ಸಮಯದಲ್ಲಿ ಆಡಲು ಬಂದ ಯುವರಾಜ್ ಸಿಂಗ್ ಯುವ ವೇಗಿ ಭಟ್ಟಿಗೆ ಕ್ಲೀನ್ ಬೋಲ್ಡ್ ಆದರು. ನಂತರ ವಿರಾಟ್ ಕೊಹ್ಲಿ ಹಾಗೂ ಸುರೇಶ್ ರೈನಾ ಸಮಯೋಚಿತ ಆಟ ಪ್ರದರ್ಶಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ವಿರಾಟ್ ಕೊಹ್ಲಿ 36 ರನ್(32 ಎ, 4x4, 1x6), ಸುರೇಶ್ ರೈನಾ 35 ರನ್ (28 ಎ, 4x4, 1x6) ಗಳಿಸಿ ಪಾಕಿಸ್ತಾನ ಆಸೆಗೆ ತಣ್ಣೀರೆರಚಿದರು. ಪಾಕಿಸ್ತಾನ ಪರ ಅಜ್ವಲ್, ಗುಲ್, ಭಟ್ಟಿ ತಲಾ 1 ವಿಕೆಟ್ ಗಳಿಸಿದರು.

ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಪಾಕಿಸ್ತಾನ ಇನ್ನಿಂಗ್ಸ್ : ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಗಿಟ್ಟಿಸಿಕೊಂಡ ಪಾಕಿಸ್ತಾನದ ಆರಂಭ ಉತ್ತಮವಾಗಿರಲಿಲ್ಲ. 8 ರನ್ ಗಳಿಸಿದ್ದ ಕಮ್ರಾನ್ ಅಕ್ಮಲ್ ಕದಿಯುವ ಯತ್ನಿಸಿ ಪೆವಿಲಿಯನ್ ಗೆ ಮರಳಿದರು. ಅಹ್ಮದ್ ಶೆಹ್ಜಾದ್, ಮಹಮ್ಮದ್ ಹಫೀಜ್ ಇನ್ನಿಂಗ್ಸ್ ಕಟ್ಟಿದರೂ ಮೂರು ರನ್ ಗಳ ಅಂತರದಿಂದ ಇಬ್ಬರು ಔಟಾದರು. ಅಹ್ಮದ್ 22 ರನ್, ನಾಯಕ ಹಫೀಜ್ 15 ರನ್ ಗಳಿಸಿದರು.

ಉಮರ್ ಅಕ್ಮಲ್ 30 ಎಸೆತದಲ್ಲಿ 33 ರನ್ ಹಾಗೂ ಶೋಯಿಬ್ ಮಲ್ಲಿಕ್ 18 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ಅಂತಿಮ ಓವರ್ ಗಳಲ್ಲಿ ಶೋಯಿಬ್ ಮಕ್ಸೂದ್ 21ರನ್ ಗಳಿಸಿ ಉತ್ತಮ ಆಟ ಪ್ರದರ್ಶಿಸಿದರು. ಭಾರತ ಪರ ಭುವನೇಶ್ವರ್ ಕುಮಾರ್, ಮಹಮ್ಮದ್ ಶಮಿ, ರವೀಂದ್ರ ಜಡೇಜ ತಲಾ 1 ವಿಕೆಟ್ ಗಳಿಸಿದರೆ, ಪಂದ್ಯ ಶ್ರೇಷ್ಠ ಪ್ರಶಸ್ತಿ ಗಳಿಸಿದ ಅಮಿತ್ ಮಿಶ್ರಾ 22ಕ್ಕೆ 2 ವಿಕೆಟ್ ಕಬಳಿಸಿದರು.

Story first published:  Friday, March 21, 2014, 22:12 [IST]
English summary
ICC World T20 : Team india beat Pakistan win by 7 wickets and chased target of 132 runs set by Pakistan with 9 balls left. Suresh Raina and Virat Kohli steered India to a comfortable seven wicket win over Pakistan in their opening World Twenty20 match in Mirpur on Friday.
ಅಭಿಪ್ರಾಯ ಬರೆಯಿರಿ