Englishहिन्दीമലയാളംதமிழ்తెలుగు

ವಿಜಯ್ ಹಜಾರೆ ಟ್ರೋಫಿ ಫೈನಲ್ ಗೆ ಕರ್ನಾಟಕ

Posted by:
Published: Friday, March 14, 2014, 18:22 [IST]
 

ಕೋಲ್ಕತ್ತಾ, ಮಾ.14: ರಣಜಿ ಚಾಂಪಿಯನ್ಸ್ ಕರ್ನಾಟಕ ತಂಡ ಇರಾನಿ ಟ್ರೋಫಿ ಗೆದ್ದ ನಂತರ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿ ಫೈನಲ್ ತಲುಪಿದೆ. ಈ ಟೂರ್ನಿ ಗೆಲ್ಲುವ ಮೂಲಕ ದೇಶಿ ಕ್ರಿಕೆಟ್ ನ ಮೂರು ಪ್ರಮುಖ ಟೂರ್ನಿ ಗೆಲ್ಲುವ ಉತ್ಸಾಹದಲ್ಲಿ ವಿನಯ್ ಪಡೆ ಸಿದ್ದವಾಗುತ್ತಿದೆ.

ಜಾದವ್ ಪುರ್ ವಿಶ್ವವಿದ್ಯಾಲಯ ಮೈದಾನದಲ್ಲಿ ನಡೆದ ವಿಜಯ್ ಹಜಾರೆ ಟೂರ್ನಿ ಸೆಮಿಫೈನಲ್ ಪಂದ್ಯದಲ್ಲಿ ಜಾರ್ಖಂಡ್ ತಂಡವನ್ನು 21 ರನ್ ಗಳಿಂದ ಸೋಲಿಸಿದ ವಿನಯ್ ಕುಮಾರ್ ಅವರ ತಂಡ ಅಂತಿಮ ಹಂತಕ್ಕೇರಿದೆ. ಮಾ.16ರಂದು ನಡೆಯಲಿರುವ ಫೈನಲ್ ನಲ್ಲಿ ಪಶ್ಚಿಮ ಬಂಗಾಳ ಅಥವಾ ರೈಲ್ವೇಸ್ ತಂಡವನ್ನು ಕರ್ನಾಟಕ ಎದುರಿಸಲಿದೆ.

ವಿಜಯ್ ಹಜಾರೆ ಟ್ರೋಫಿ ಫೈನಲ್ ಗೆ ಕರ್ನಾಟಕ

ಟಾಸ್ ಸೋತು ಮೊದಲು ಬ್ಯಾಟಿಂಗ್ ಆಯ್ಕೆ ಪಡೆದ ಕರ್ನಾಟಕ ಭರ್ಜರಿ ಅರಂಭ ಪಡೆದುಕೊಂಡಿತು. ರಾಬಿನ್ ಉತ್ತಪ್ಪ 133 (135 ಎ, 12X4, 4x6) ಸತತ ಎರಡನೇ ಶತಕ ಬಾರಿಸಿ ಉತ್ತಮ ಆಟ ಪ್ರದರ್ಶಿಸಿದರು.ಗುಜರಾತ್ ವಿರುದ್ಧ ಕ್ವಾರ್ಟರ್ ಫೈನಲ್ ನಲ್ಲಿ 132 ನಾಟೌಟ್ ಆಗಿದ್ದ ಉತ್ತಪ್ಪ ಮತ್ತೊಮ್ಮೆ ಕರ್ನಾಟಕದ ಬ್ಯಾಟಿಂಗ್ ಬೆನ್ನೆಲುಬು ಎನಿಸಿದರು. ಮಯಾಂಕ್ ಅಗರವಾಲ್ 66 ರನ್ (67ಎ, 9x4) ಹಾಗೂ ಕೆಎಲ್ ರಾಹುಲ್ 67 ರನ್ (72 ಎ, 5x4) ಉತ್ತಮ ಸಾಥ್ ನೀಡಿದರು. ಕರ್ನಾಟಕ ನಿಗದಿತ 50 ಓವರ್ ಗಳಲ್ಲಿ 323/6 ಸ್ಕೋರ್ ಮಾಡಿತು. ಜಾರ್ಖಂಡ್ ಪರ ರಾಹುಲ್ ಶುಕ್ಲ 3 ವಿಕೆಟ್ ಗಳಿಸಿದರು.

ಜಾರ್ಖಂಡ್ ಕೂಡಾ ಉತ್ತಮ ಹೋರಾಟ ಪ್ರದರ್ಶಿಸಿ 50 ಓವರ್ ಗಳಲ್ಲಿ 302/9 ಸ್ಕೋರ್ ಮಾಡಿತು. ಆರಂಭಿಕ ಅಟಗಾರ ಇಶಾಂತ್ ಜಗ್ಗಿ 121 ಎಸೆತದಲ್ಲಿ 141 ರನ್ (16x4, 4x6) ಚೆಚ್ಚಿ ಉತ್ತಮ ಪ್ರತಿರೋಧ ತೋರಿದರು. ಕರ್ನಾಟಕ ಪರ ನಾಯಕ ವಿನಯ್ ಕುಮಾರ್ 4/75 ವಿಕೆಟ್ ಪಡೆದರೆ ಅಭಿಮನ್ಯು ಮಿಥುನ್ 3/52 ಹಾಗೂ ಎಚ್ ಎಸ್ ಶರತ್ ಹಾಗೂ ಅಬ್ರಾರ್ ಖಾಜಿ ಅವರು ತಲಾ ಒಂದು ವಿಕೆಟ್ ಪಡೆದರು.

English summary
Karnataka, after winning Ranji Trophy and Irani Cup this season, have a chance to complete a hat-trick of titles as they reached the Vijay Hazare Trophy one-day tournament final today(Mar.14).
ಅಭಿಪ್ರಾಯ ಬರೆಯಿರಿ