Englishहिन्दीമലയാളംதமிழ்తెలుగు

ಕ್ರಿಕೆಟ್ ಶಿಶುಗಳ ಮೇಲೆ ಭಾರತಕ್ಕೆ ಸುಲಭ ಜಯ

Posted by:
Updated: Wednesday, March 5, 2014, 21:33 [IST]
 

ಢಾಕಾ, ಮಾ.5: ಕ್ರಿಕೆಟ್ ಲೋಕದ ಶಿಶುಗಳಾದ ಅಫ್ಘಾನಿಸ್ತಾನದ ವಿರುದ್ಧ ಸುಲಭ ಜಯ ದಾಖಲಿಸುವ ಮೂಲಕ ಟೀಂ ಇಂಡಿಯಾ ಏಷ್ಯಾಕಪ್ 2014ರ ತನ್ನ ಪ್ರವಾಸಕ್ಕೆ ಅಂತ್ಯ ಹಾಡಿದೆ. ಜಡೇಜ ಹಾಗೂ ಅಶ್ವಿನ್ ಸ್ಪಿನ್ ದಾಳಿಗೆ ಸಿಲುಕಿ 159 ಸ್ಕೋರ್ ಮಾಡಿದ್ದ ಅಫ್ಘಾನಿಸ್ತಾನದ ಗುರಿಯನ್ನು ಭಾರತ 32.2 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗಳಿಸಿತು.

ಸ್ಕೋರ್ ಕಾರ್ಡ್ ನೋಡಿ

ಅಫ್ಘಾನಿಸ್ತಾನ ನೀಡಿದ್ದ ಅಲ್ಪ ಮೊತ್ತದ ಗುರಿ ಬೆನ್ನತ್ತಲು ಆರಂಭಿಕ ಬ್ಯಾಟ್ಸ್ ಮನ್ ಆಗಿ ರೋಹಿತ್ ಶರ್ಮ ಬದಲಿಗೆ ಅಜಿಂಕ್ಯ ರಹಾನೆ ಬಂದಿದ್ದು ವಿಶೇಷ. ಶಿಖರ್ ಧವನ್ ಹಾಗೂ ಅಜಿಂಕ್ಯ ರಹಾನೆ ಮೊದಲ ವಿಕೆಟ್ ಗೆ 121 ರನ್ ಸ್ಕೋರ್ ಮಾಡಿ ಅಫ್ಘಾನಿಸ್ತಾನ ವಿರುದ್ಧ ಮೊದಲ ಶತಕದ ಜೊತೆಯಾಟ ಬರೆದರು.

ಶಿಖರ್ ಧವನ್ 60 ರನ್ (78 ಎ, 4x4, 1x6) ಹಾಗೂ ರಹಾನೆ 56 (66 ಎಸೆತ, 5x4) ಇಬ್ಬರು 25 ಓವರ್ ಆಗುವುದರೊಳಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಗೆ ಮರಳಿದರು. ನಂತರ ರೋಹಿತ್ ಶರ್ಮ 18, ದಿನೇಶ್ ಕಾರ್ತಿಕ್ 21 ರನ್ ಗಳಿಸಿ ಟೀಂ ಇಂಡಿಯಾ ಗೆಲುವಿನ ನಗೆ ಬೀರುವಂತೆ ಮಾಡಿದರು. ಅಫ್ಘಾನ್ ಪರ ನಾಯಕ ನಬಿ ಹಾಗೂ ಅಶ್ರಫ್ ತಲಾ 1 ವಿಕೆಟ್ ಪಡೆದರು.

ಅಫ್ಘಾನಿಸ್ತಾನ ಇನ್ನಿಂಗ್ಸ್: ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಅಫ್ಘನ್ನರು ಜದ್ರಾನ್(31 ರನ್) ಉತ್ತಮ ಬ್ಯಾಟಿಂಗ್ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಜದ್ರಾನ್ , ಮಹಮ್ಮದ್ ಶಹಜಾದ್ 22 ರನ್, ಸಮಿಯುಲ್ಲಾ ಶೆನ್ ವಾರಿ 50 ರನ್(73 ಎ, 6x4, 1x6) ಬಿಟ್ಟರೆ ಉಳಿದವರು ಎರಡಂಕಿ ದಾಟಲಿಲ್ಲ.

ಕ್ರಿಕೆಟ್ ಶಿಶುಗಳ ಮೇಲೆ ಭಾರತಕ್ಕೆ ಸುಲಭ ಜಯ

ರವೀಂದ್ರ ಜಡೇಜ (10-1-30-4) ಹಾಗೂ ಆರ್ ಅಶ್ವಿನ್ (10-3-31-3) ಮಾರಕ ಬೌಲಿಂಗ್ ದಾಳಿ ನಡೆಸಿ ಅಫ್ಘನ್ನರ ರನ್ ಗತಿಗೆ ಬ್ರೇಕ್ ಹಾಕಿ ಮಾರಕವಾಗಿ ಪರಿಣಮಿಸಿದರು. ಉಳಿದಂತೆ ಮಹಮ್ಮದ್ ಶಮಿ 50 ರನ್ನಿತ್ತು 2 ವಿಕೆಟ್ ಹಾಗೂ ಅಮಿತ್ ಮಿಶ್ರಾ 10 ಓವರ್ ಗಳಲ್ಲಿ 21 ರನ್ ನೀಡಿ 1 ವಿಕೆಟ್ ಕಿತ್ತು ಮಿತವ್ಯಯಿ ಎನಿಸಿದರು.

ಪಾಕಿಸ್ತಾನದ ವಿರುದ್ಧ ಸೋತ ಟೀಂ ಇಂಡಿಯಾ ತಂಡವನ್ನೇ ಈ ಪಂದ್ಯಕ್ಕೂ ಉಳಿಸಿಕೊಂಡಿದ್ದನ್ನು ಮಾಜಿ ನಾಯಕ ಸುನಿಲ್ ಗವಾಸ್ಕರ್ ತೀವ್ರವಾಗಿ ಖಂಡಿಸಿದ್ದಾರೆ. ಶ್ರೀಲಂಕಾ ಹಾಗೂ ಪಾಕಿಸ್ತಾನ ವಿರುದ್ಧ ಸೋತ ವಿರಾಟ್ ಕೊಹ್ಲಿ ತಂಡ ಬಾಂಗ್ಲಾದೇಶ, ಅಫ್ಘನ್ನರ ಮೇಲೆ ಜಯದೊಂದಿಗೆ ಟೂರ್ನಿಯೊಂದಿಗೆ ಹಿಂತಿರುಗಿದೆ. ಮಾ.8 ರಂದು ಫೈನಲ್ ನಲ್ಲಿ ಶ್ರೀಲಂಕಾ ಹಾಗೂ ಪಾಕಿಸ್ತಾನ ಸೆಣೆಸಲಿದೆ. ಟೀಂ ಇಂಡಿಯಾ ಮಾ.21 ರಂದು ವಿಶ್ವ ಟಿ20 ಟೂರ್ನಿಯಲ್ಲಿ ಪಾಕಿಸ್ತಾನವನ್ನು ಮತ್ತೊಮ್ಮೆ ಎದುರಿಸಲಿದೆ.

Story first published:  Wednesday, March 5, 2014, 20:17 [IST]
English summary
Spin duo of Ravindra Jadeja and Ravichandran Aswhin shared seven wickets between them to help India skittle out minnows Afghanistan for 159 in their inconsequential last league match of the Asia Cup, here today(Mar.05). The Indians chased down the target in 32.2 overs to clinch the bonus point but it was a case of too little too late after defeats against Sri Lanka and Pakistan poured cold water on their final hopes.
ಅಭಿಪ್ರಾಯ ಬರೆಯಿರಿ