Englishहिन्दीമലയാളംதமிழ்తెలుగు

'ದಕ್ಷ' ನಾಯಕ ಸ್ಮಿತ್ 'ಟೆಸ್ಟ್ ಕ್ರಿಕೆಟ್' ಗೆ ವಿದಾಯ

Posted by:
Published: Tuesday, March 4, 2014, 16:39 [IST]
 

ಬೆಂಗಳೂರು, ಮಾ.4: ದಕ್ಷಿಣ ಆಫ್ರಿಕಾದ ದಕ್ಷ ನಾಯಕ ಗ್ರಹಾಂ ಸ್ಮಿತ್ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. 109 ಟೆಸ್ಟ್ ಪಂದ್ಯಗಳಲ್ಲಿ ದೇಶವನ್ನು ಮುನ್ನಡೆಸಿದ ಸ್ಮಿತ್ ವಿಶ್ವದ ಯಾವುದೇ ದೇಶದ ನಾಯಕ ಸಾಧಿಸಿದ ಹಲವು ದಾಖಲೆಗಳನ್ನು ಹೊಂದಿದ್ದಾರೆ. ಬ್ಯಾಟಿಂಗ್ ಆರಂಭಿಸುವ ಹೊಣೆಗಾರಿಕೆ ಜತೆ ತಂಡವನ್ನು ಕಿರಿಯ ವಯಸ್ಸಿನಲ್ಲೇ ಸಮರ್ಥವಾಗಿ ಮುನ್ನಡೆಸಿದ ಸ್ಮಿತ್ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

2003 ವಿಶ್ವಕಪ್ ನಂತರ ಶಾನ್ ಪೊಲ್ಲಾಕ್ ಅವರಿಂದ ಏಕದಿನ ತಂಡದ ನಾಯಕತ್ವ ವಹಿಸಿಕೊಂಡ ಸ್ಮಿತ್ ಗೆ ಇನ್ನೂ 22 ರ ಹರೆಯ. ಇಂಗ್ಲೆಂಡ್ ಪ್ರವಾಸದಲ್ಲಿ ತಂಡವನ್ನು ಮುನ್ನಡೆಸಿದ ಬಗೆ ಕಂಡು ಆಂಗ್ಲರ ನಾಯಕ ನಾಸೀರ್ ಹುಸೇನ್ ಅಚ್ಚರಿ ಪಟ್ಟುಕೊಂಡಿದ್ದರು. ನಾಯಕನಾದ ಕೆಲ ಪಂದ್ಯಗಳಲ್ಲೇ ಸತತವಾಗಿ ದ್ವಿಶತಕ ಸಿಡಿಸಿ ಎಲ್ಲರ ಗಮನ ಸೆಳೆದರು. 2008-09ರಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ ಗಳಿಸಿದ ವಿಜಯಕ್ಕೆ ಸ್ಮಿತ್ ನಾಯಕತ್ವದ ಮಹತ್ವ ಪಾಲು ಹೊಂದಿದೆ.

ಜೋಹಾನ್ಸ್ ಬರ್ಗ್ ನಲ್ಲಿ ಗ್ರಹಾಂ ಹಾಗೂ ಜನೇತ್ ದಂಪತಿ ಪುತ್ರನಾಗಿ ಹುಟ್ಟಿ ಬೆಳೆದ ಸ್ಮಿತ್ ಐರೀಷ್ ಗಾಯಕಿ ಮಾರ್ಗನ್ ಡೀನ್ ಮದುವೆಯಾಗಿದ್ದು ಕಾಡೆನ್ಸ್ ಎಂಬ ಪುತ್ರಿ ಇದ್ದಾಳೆ. ಕ್ರಿಕೆಟ್ ಅಲ್ಲದೆ ಫುಟ್ಬಾಲ್ ಆಟ ಇಷ್ಟ ಪಡುವ ಸ್ಮಿತ್ ಲಿವರ್ ಪೂಲ್ ಕ್ಲಬ್ ಬೆಂಬಲಿಗ. ಎಡಗೈ ಬ್ಯಾಟ್ಸ್ ಮನ್, ಬಲಗೈ ಆಫ್ ಸ್ಪಿನ್ ಮಾಡುವ ಸ್ಮಿತ್ ಗೆ ಇನ್ನೂ 33 ರ ಹರೆಯ. ಹರ್ಷಲ್ ಗಿಬ್ಸ್ ಜತೆ 300 ರನ್ ಗಳ ಜೊತೆಯಾಟ, ನೀಲ್ ಮೆಕನ್ಜಿ ಜತೆ 415 ರನ್ ಜೊತೆಯಾಟ ಮರೆಯಲು ಸಾಧ್ಯವಿಲ್ಲ. ಗ್ರಹಾಂ ಕ್ರೇಗ್ ಸ್ಮಿತ್ ಅವರ ಕ್ರಿಕೆಟ್ ಜೀವನದ ಪ್ರಮುಖ ಘಟ್ಟಗಳ ಹಿನ್ನೋಟ ಮುಂದೆ ಓದಿ...

'ದಕ್ಷ' ನಾಯಕ ಸ್ಮಿತ್ 'ಟೆಸ್ಟ್ ಕ್ರಿಕೆಟ್' ಗೆ ವಿದಾಯ

* 2014 : ಆಸ್ಟ್ರೇಲಿಯಾ ವಿರುದ್ಧ ಮೂರನೇ ಟೆಸ್ಟ್ ನಡುವೆ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಘೋಷಣೆ
* 2013: ತನ್ನ ಹುಟ್ಟುಹಬ್ಬದ ದಿನದಂದೇ ನಾಯಕನಾಗಿ 100ನೇ ಟೆಸ್ಟ್ ನಲ್ಲಿ ತಂಡವನ್ನು ಮುನ್ನಡೆಸಿದ್ದು (ಪಾಕಿಸ್ತಾನ ವಿರುದ್ಧ) ವಿಶೇಷ
* 2012: ಟೆಸ್ಟ್ ಕ್ರಿಕೆಟ್ ನಲ್ಲಿ ವೈಯಕ್ತಿಕವಾಗಿ 100ನೇ ಟೆಸ್ಟ್ ಇಂಗ್ಲೆಂಡ್ ವಿರುದ್ಧ
* 2011: ಭಾರತ ಉಪಖಂಡಲ್ಲಿನ ವಿಶ್ವಕಪ್ ನಂತರ ಏಕದಿನ ಹಾಗೂ ಟಿ20 ನಾಯಕತ್ವವನ್ನು ಎಬಿ ಡಿ ವಿಲೆಯರ್ಸ್ ಗೆ ನೀಡಿದರು.
* 2008: ನಾಯಕನಾಗಿ ಆಸ್ಟ್ರೇಲಿಯಾ ವಿರುದ್ಧ ಸರಣಿ ಜಯ,
* ನಾಯಕನಾಗಿ ಇಂಗ್ಲೆಂಡ್ ವಿರುದ್ಧ ಸರಣಿ ಜಯ(1965 ರ ನಂತರ)
* ಚಿಟ್ಟಗಾಂಗ್ ನಲ್ಲಿ ಬಾಂಗ್ಲಾದೇಶ ವಿರುದ್ಧ ಸ್ಮಿತ್ (232), ಮೆಕನ್ಜಿ(226) ಮೊದಲ ವಿಕೆಟ್ ಗೆ 415 ವಿಕೆಟ್ ಜೊತೆಯಾಟ ವಿಶ್ವ ದಾಖಲೆ
* 2006 : ಆಸ್ಟ್ರೇಲಿಯಾ ವಿರುದ್ಧ ವಿಶ್ವ ದಾಖಲೆಯ 438ರನ್ ಚೇಸ್ ಮಾಡಿ ಗೆಲುವು
* 2005: ಸಾಮರ್ಸೆಟ್ ಕ್ಲಬ್ ಪರ 300 ರನ್ ದಾಖಲು, ಆಸ್ಟ್ರೇಲಿಯಾ ವಿರುದ್ಧ ಐಸಿಸಿ ವಿಶ್ವ XI ನಾಯಕ, ಟಿ20 ಕ್ಷೇತ್ರಕ್ಕೆ ಪಾದಾರ್ಪಣೆ
* 2004 : ವಿಸ್ಡನ್ ಕ್ರಿಕೆಟರ್ ಆಫ್ ದಿ ಇಯರ್ ಪ್ರಶಸ್ತಿ
* 2003 : ಇಂಗ್ಲೆಂಡ್ ವಿರುದ್ಧ ಸತತ ದ್ವಿಶತಕ, ಎಜ್ಬಾಸ್ಟನ್ [277], ಲಾರ್ಡ್ಸ್[259]
* 2003 : ಮೊದಲ ಬಾರಿಗೆ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದು, ಬಾಂಗ್ಲಾದೇಶ ವಿರುದ್ಧ ಇನ್ನಿಂಗ್ಸ್ ಜಯ
* 2002 : ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ, ಏಕದಿನ ಕ್ರಿಕೆಟ್ ಕೂಡಾ ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯ
* 2001-02ರ ದಕ್ಷಿಣ ಆಫ್ರಿಕಾದ ವಾರ್ಷಿಕ ಕ್ರಿಕೆಟರ್ ಪ್ರಶಸ್ತಿ
* 1999 : 18ನೇ ವಯಸ್ಸಿನಲ್ಲಿ ಕೇಪ್ ಟೌನ್ ಗೆ ತೆರಳಿ ಪಶ್ಚಿಮ ಪ್ರಾವಿನ್ಸ್ ಪರ ಆಡಿದರು.
* 1981: ಜೋಹಾನ್ಸ್ ಬರ್ಗ್ ನಲ್ಲಿ ಗ್ರಹಾಂ ಹಾಗೂ ಜನೇತ್ ದಂಪತಿ ಪುತ್ರನಾಗಿ ಫೆ.1 ರಂದು ಜನನ.

 ಗ್ರಹಾಂ ಸ್ಮಿತ್ ವೃತ್ತಿ  ಟೆಸ್ಟ್ ಏಕದಿನ
ಪಂದ್ಯಗಳು 116 197
ರನ್ 9,257 6,989
ರನ್ ಸರಾಸರಿ 48.72 38.48
100s/50s 27/37 10/47
ಅತ್ಯಧಿಕ ಸ್ಕೋರ್ 277 141
English summary
As Australia pummels its team to an inexorable defeat, South Africa's highly-regarded captain Graeme Smith will call it quits from international cricket, at the end of a series that exposed his position as South African cricket's go-to leader.
ಅಭಿಪ್ರಾಯ ಬರೆಯಿರಿ