Englishहिन्दीമലയാളംதமிழ்తెలుగు

ಭಾರತ ವಿರುದ್ಧ ಲಂಕಾಗೆ ರೋಚಕ ಜಯ

Posted by:
Updated: Friday, February 28, 2014, 21:40 [IST]
 

ಫತುಲ್ಲಾ, ಫೆ.28:ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕುಮಾರ್ ಸಂಗಕ್ಕಾರ ಅವರ ಸಮಯೋಚಿತ ಜಾಣ್ಮೆಯುತ ಶತಕದ ನೆರವಿನಿಂದ ಟೀಂ ಇಂಡಿಯಾ ನೀಡಿದ್ದ 265 ರನ್ ಗಳ ಮೊತ್ತವನ್ನು ದಾಟಿದ ಶ್ರೀಲಂಕಾ ತಂಡ 2 ವಿಕೆಟ್ ಗಳ ಜಯಭೇರಿ ಬಾರಿಸಿದೆ. ಟೀಂ ಇಂಡಿಯಾ ಆಟಗಾರರ 'ಕ್ಯಾಚ್ ಡ್ರಾಪ್ ಮ್ಯಾಚ್ ಡ್ರಾಪ್ ' ಎಂಬ ಮಾತು ಗುಂಯ್ ಗುಡುತ್ತಿರುತ್ತದೆ. 49.2 ಓವರ್ ಗಳಲ್ಲಿ 2 ವಿಕೆಟ್ ಉಳಿಸಿಕೊಂಡು ಲಂಕನ್ನರು ಜಯದ ಗುರಿ ದಾಟಿ ಸಂಭ್ರಮಿಸಿದರು.

ಸ್ಕೋರ್ ಕಾರ್ಡ್ ನೋಡಿ

ಶ್ರೀಲಂಕಾ ಇನ್ನಿಂಗ್ಸ್: ಲಂಕಾ ಉತ್ತಮ ಆರಂಭ, ಕುಮಾರ ಸಂಗಕ್ಕಾರ ಅಮೋಘ ಶತಕ, ಮಧ್ಯಮ ಕ್ರಮಾಂಕ ಕುಸಿತ, ಭಾರತದ ಕಳಪೆ ಫೀಲ್ಡಿಂಗ್ ಮುಖ್ಯಾಂಶಗಳಾಗಿವೆ.
* ಆರಂಭಿಕ ಆಟಗಾರರು ಕುಶಾಲ್ ಪೆರೆರಾ 68ರನ್(81 ಎ, 4x4,2x6), ಥಿರುಮನ್ನೆ 33 ರನ್
* 3ನೇ ಕ್ರಮಾಂಕದಲ್ಲಿ ಬಂದ ಔಟಾಗಿದ್ದು ಕುಮಾರ ಸಂಗಕ್ಕಾರ 103 ರನ್ (84 ಎ, 12x4, 1x6) ಗಳಿಸಿ 48.3 ಓವರ್ ಸ್ಕೋರ್ 258/8 ಆದರು. ಪಂದ್ಯದ ದಿಕ್ಕು ದೆಸೆ ಬದಲಾಯಿಸಿದರು.
* ಮಹೇಲ ಜಯವರ್ದನೆ 9, ಚಂಡಿಮಾಲ್ 0, ನಾಯಕ ಮ್ಯಾಥ್ಯೂಸ್ 6 ವಿಫಲರಾದರು.
* ಭಾರತ ಪರ ಜಡೇಜ ಉತ್ತಮ ಬೌಲಿಂಗ್ 10-0-30-3, ಶಮಿ 81/3
* ಸ್ಟುವರ್ಟ್ ಬಿನ್ನಿ 4 ಓವರ್ ಗಳಲ್ಲಿ 22 ರನ್ ಚೆಚ್ಚಿಸಿಕೊಂಡರು.
* ಆರ್ ಅಶ್ವಿನ್ 42 ರನ್ ತೆತ್ತು 2 ವಿಕೆಟ್ ಕಿತ್ತರು.

ಭಾರತ ವಿರುದ್ಧ ಲಂಕಾಗೆ ರೋಚಕ ಜಯ

ಭಾರತ ಇನ್ನಿಂಗ್ಸ್ : ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮ ಮತ್ತೊಮ್ಮೆ ವಿಫಲ 13 ರನ್ (28 ಎಸೆತ). ಕೈಕೊಟ್ಟ ಮಧ್ಯಮ ಕ್ರಮಾಂಕ. ಅಜಿಂಕ್ಯ ರಹಾನೆ 22(27 ಎಸೆತ), ಅಂಬಟಿ ರಾಯುಡು 18 ರನ್ (23 ಎಸೆತ), ದಿನೇಶ್ ಕಾರ್ತಿಕ್ 4, ಸ್ಟುವರ್ಟ್ ಬಿನ್ನಿ 0 ಭಾರತದ ರನ್ ಗತಿ ಹೆಚ್ಚಿಸಲು ಮಾರಕವಾದರು.
* ಶಿಖರ್ ಧವನ್ ಭರ್ಜರಿ ಬ್ಯಾಟಿಂಗ್ 94 (114 ಎ, 7X4, 1X6), ವಿರಾಟ್ ಕೊಹ್ಲಿ 48 ರನ್ (51 ಎಸೆತ, 4x4, 1x6)
* ರವೀಂದ್ರ ಜಡೇಜ 22 ನಾಟೌಟ್ ಹಾಗೂ ಆರ್ ಅಶ್ವಿನ್ 18(16 ಎ), ಮಹಮ್ಮದ್ ಶಮಿ 2 ಸಿಕ್ಸರ್ ಸೇರಿ 7 ಎಸೆತದಲ್ಲಿ 14 ರನ್ ಕೊನೆ ಓವರ್ ಗಳಲ್ಲಿ ಬಲ ತಂದಿತು.
* ಭಾರತ 50 ಓವರ್ ಗಳಲ್ಲಿ 260/9.
* ಶ್ರೀಲಂಕಾ ಪರ ಅಜಿಂತಾ ಮೆಂಡಿಸ್ 60 ಚೆಚ್ಚಿಸಿಕೊಂಡರೂ 4 ವಿಕೆಟ್ ಕಿತ್ತರು.
* ಶಿಖರ್ ಧವನ್, ಕೊಹ್ಲಿ ಇಬ್ಬರನ್ನು ಮೆಂಡಿಸ್ ಬೋಲ್ಡ್ ಮಾಡಿದರು.
* ಸಚಿತ್ರಾ ಸೇನಾನಾಯಕೆ 41 ರನ್ನಿತ್ತು 3 ವಿಕೆಟ್ ಪಡೆದರು.

ಟಾಸ್ ವರದಿ:ನಿಧಾನಗತಿಯ ಪಿಚ್ ಗಮನಿಸಿ ಶ್ರೀಲಂಕಾ ತಂಡದ ನಾಯಕ ಏಂಜಲೋ ಮ್ಯಾಥ್ಯುಸ್ ಅವರು ಟಾಸ್ ಗೆದ್ದ ತಕ್ಷಣವೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಬ್ಯಾಟಿಂಗ್ ಆರಂಭಿಸುವಂತೆ ಆಹ್ವಾನ ನೀಡಿದರು. ಟೀಂ ಇಂಡಿಯಾ ಇಂದಿನ ಪಂದ್ಯದಲ್ಲಿ ವೇಗಿ ವರುಣ್ ಅರೋನ್ ಬದಲಿಗೆ ಸ್ಟುವರ್ಟ್ ಬಿನ್ನಿ ಅವರನ್ನು ಆಡಿಸುತ್ತಿದೆ. ಸರಿಯಾಗಿ ಒಂದು ತಿಂಗಳ ಹಿಂದೆ(ಜ.28) ಸ್ಟುವರ್ಟ್ ಬಿನ್ನಿ ಅವರು ನ್ಯೂಜಿಲೆಂಡ್ ವಿರುದ್ಧ ಆಡುವ ಮೂಲಕ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟಿದ್ದರು. ಆ ಪಂದ್ಯದಲ್ಲಿ ಕೇವಲ ಒಂದು ಓವರ್ ಎಸೆದು 8 ರನ್ ತೆತ್ತಿದ್ದರು.

ಏಷ್ಯಾ ಕಪ್ 2014 ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ ಶುಕ್ರವಾರ ಟೀಂ ಇಂಡಿಯಾ ವಿರುದ್ಧ ಟಾಸ್ ಗೆದ್ದ ಶ್ರೀಲಂಕಾ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಎರಡು ತಂಡಗಳು ಟೂರ್ನಿಯ ಮೊದಲ ಪಂದ್ಯಗಳನ್ನು ಗೆದ್ದಿರುವ ಹುಮ್ಮಸ್ಸಿನಿಂದ ಕಣಕ್ಕಿಳಿದಿವೆ. ಕರ್ನಾಟಕದ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ ಅವರು ಟೀಂ ಇಂಡಿಯಾ ಅಂತಿಮ XIರಲ್ಲಿ ಸ್ಥಾನ ಪಡೆದು ಏಷ್ಯಾ ಕಪ್ ನಲ್ಲಿ ಮೊದಲ ಪಂದ್ಯವಾಡುತ್ತಿದ್ದಾರೆ. ಪಾಕಿಸ್ತಾನ ವಿರುದ್ಧ ಜಯ ಗಳಿಸಿದ ತಂಡವನ್ನೇ ಶ್ರೀಲಂಕಾ ಇಂದಿನ ಪಂದ್ಯದಲ್ಲಿ ಮುಂದುವರೆಸಿದರೂ ಸುರಂಗ ಲಕ್ಮಲ್ ಬದಲಿಗೆ ಸ್ಪಿನ್ನರ್ ಅಜಂತಾ ಮೆಂಡಿಸ್ ಅವರನ್ನು ಆಡಿಸಲಾಗುತ್ತಿದೆ.

ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮ, ಶಿಖರ್ ಧವನ್, ಅಜಿಂಕ್ಯ ರಹಾನೆ, ದಿನೇಶ್ ಕಾರ್ತಿಕ್ (ವಿಕೆಟ್ ಕಾರ್ತಿಕ್), ರವೀಂದ್ರ ಜಡೇಜ, ಆರ್ ಅಶ್ವಿನ್, ಭುವನೇಶ್ವರ್ ಕುಮಾರ್, ಮಹಮ್ಮದ್ ಶಮಿ, ಸ್ಟುವರ್ಟ್ ಬಿನ್ನಿ, ಅಂಬಟಿ ರಾಯುಡು

ಶ್ರೀಲಂಕಾ ತಂಡ: ಏಂಜೆಲೋ ಮ್ಯಾಥ್ಯೂಸ್(ನಾಯಕ), ಕುಶಾಲ್ ಪೆರೆರಾ, ಲಹಿರು ಥಿರುಮನ್ನೆ, ಕುಮಾರ್ ಸಂಗಕ್ಕಾರ(ವಿಕೆಟ್ ಕೀಪರ್), ಮಹೇಲ ಜಯವರ್ದನೆ, ದಿನೇಶ್ ಚಂಡಿಮಾಲ್, ಚತುರಂಗ ಡಿ ಸಿಲ್ವ, ಥಿಸಾರಾ ಪೆರೆಆ, ಸಚಿತ್ರಾ ಸೇನಾನಾಯಕೆ, ಲಸಿತ್ ಮಾಲಿಂಗ, ಅಜಂತ ಮೆಂಡಿಸ್

Story first published:  Friday, February 28, 2014, 13:44 [IST]
English summary
Fatullah: Kumar Sangakkara's 84-ball 103 took Sri Lanka to a tense two-wicket victory over India in the fourth game of the Asia Cup here Friday(Feb.28).
ಅಭಿಪ್ರಾಯ ಬರೆಯಿರಿ