Englishहिन्दीമലയാളംதமிழ்తెలుగు

ಏಷ್ಯಾ ಕಪ್: ಕೊಹ್ಲಿ ಶತಕ, ಬಾಂಗ್ಲಾ ಬಗ್ಗುಬಡಿದ ಭಾರತ

Posted by:
Updated: Thursday, February 27, 2014, 11:14 [IST]
 

ಢಾಕಾ, ಫೆ.26: ಅತಿಥೇಯ ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಭರ್ಜರಿ ಜಯ ದಾಖಲಿಸಿ ಶುಭಾರಂಭ ಮಾಡಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಭರ್ಜರಿ ಶತಕ ಹಾಗೂ ಅಜಿಂಕ್ಯ ರಹಾನೆ ಅರ್ಧಶತಕದ ನೆರವಿನಿಂದ ಗೆಲ್ಲಲು ಬೇಕಿದ್ದ 280ರನ್ ಗುರಿಯನ್ನು ಇನ್ನು ಒಂದು ಓವರ್ ಬಾಕಿಯಿರುವಂತೆಯೇ ತಲುಪಿದ ಟೀಂ ಇಂಡಿಯಾ 6 ವಿಕೆಟ್ ಗಳಿಂದ ಪಂದ್ಯ ಗೆದ್ದು ಜಯದ ನಗೆ ಬೀರಿತು.

ನಾಯಕ ವಿರಾಟ್ ಕೊಹ್ಲಿ ಅವರು ತಮ್ಮ 19ನೇ ಶತಕ 100 (95 ಎಸೆತ, 12X4, 1X6) ಗಳಿಸಿ ಬಾಂಗ್ಲಾಗೆ ತಲೆನೋವಾದರು. ಅಂತಿಮ ವಾಗಿ ಕೊಹ್ಲಿ 136 ರನ್ (122 ಎಸೆತ, 16X4, 2X6) ಗಳಿಸಿ ರುಬೆಲ್ ಗೆ ಕ್ಲೀನ್ ಬೋಲ್ಡ್ ಆಗಿ ಪೆವಿಲಿಯನ್ ಗೆ ಮರಳಿದರು.

ಇನ್ನೊಂದು ತುದಿಯಲ್ಲಿ ಅಜಿಂಕ್ಯ ರಹಾನೆ ಅರ್ಹ ಅರ್ಧಶತಕ 73 ರನ್ (82 ಎಸೆತ, 7X 4, 1X6) ಗಳಿಸಿ ಸಮಯೋಚಿತ ಆಟ ಪ್ರದರ್ಶಿಸಿ ಜಯದ ಹೊಸ್ತಿಲಲ್ಲಿ ಕ್ಯಾಚಿತ್ತು ಔಟಾದರು. ಆದರೆ, 3ನೇ ವಿಕೆಟ್ ಗೆ ವಿರಾಟ್ ಕೊಹ್ಲಿ-ರಹಾನೆ ದಾಖಲೆ ಜೊತೆಯಾಟ ಸೇರಿಸಿ ಟೀಂ ಇಂಡಿಯಾವನ್ನು ಜಯದ ಗಡಿ ದಾಟಿಸಿದರು. ಟೀಂ ಇಂಡಿಯಾ ಕೇವಲ 4 ವಿಕೆಟ್ ಕಳೆದುಕೊಂಡು ರನ್ ಗಳಿಸಿ ಸುಲಭ ಜಯ ದಾಖಲಿಸಿತು.

ಏಷ್ಯಾ ಕಪ್: ಕೊಹ್ಲಿ ಶತಕ, ಬಾಂಗ್ಲಾ ಬಗ್ಗುಬಡಿದ ಭಾರತ

ಸ್ಕೋರ್ ಕಾರ್ಡ್

ಇದಕ್ಕೂ ಮುನ್ನ ರೋಹಿತ್ ಶರ್ಮ 21 ರನ್ (29 ಎಸೆತ, 1X4, 1X6), ಶಿಖರ್ ಧವನ್ 28 ರನ್ (44 ಎಸೆತ, 5X4) ಗಳಿಸಿ ಪೆವಿಲಿಯನ್ ಗೆ ತೆರಳಿದರು. ನಂತರ ಕೊಹ್ಲಿ-ರಹಾನೆ ಜೊತೆಯಾಟ ಮುರಿಯಲು ಬಾಂಗ್ಲಾ ಬೌಲರ್ ಗಳು ತಿಣುಕಾಡಿದರು. ಬಾಂಗ್ಲಾ ನಾಯಕ ರಹೀಂ ಎಂಟು ಜನ ಬೌಲರ್ ಗಳನ್ನು ಬಳಸಿ ಸೋತರು. ಬಾಂಗ್ಲಾ ಪರ ರುಬೆಲ್, ರಜಾಕ್, ರಹಮಾನ್, ಸೊಹಾಗ್ ತಲಾ ಒಂದು ವಿಕೆಟ್ ಪಡೆದರು.

ಬಾಂಗ್ಲಾದೇಶ ಇನ್ನಿಂಗ್ಸ್: ಆರಂಭಿಕ ಆಟಗಾರ ಅನಾಮುಲ್ ಹಕ್ ತಾಳ್ಮೆಯಿಂದ ಆಡಿ ಗಳಿಸಿದ 77 ರನ್ (106 ಎ, 5X4, 3X6), ನಾಯಕ ಮುಷ್ಫಿಕರ್ ರಹೀಂ ಉತ್ತಮ ಶತಕ113 (117 ಎ, 7X4, 2X6) ಬಿಟ್ಟರೆ ಉಳಿದವರು ವಿಫಲರಾದರು. ಟೀಂ ಇಂಡಿಯಾ ಪರ ಮಹಮ್ಮದ್ ಶಮಿ ಉತ್ತಮ ಬೌಲಿಂಗ್ ಪ್ರದರ್ಶಿಸಿ 50/4 ವಿಕೆಟ್ ಕಿತ್ತರು. ಉಳಿದಂತೆ ಭುವನೇಶ್ವರ್ ಕುಮಾರ್, ವರುಣ್ ಅರೋನ್, ಅಶ್ವಿನ್ ತಲಾ ಒಂದು ವಿಕೆಟ್ ಪಡೆದರು. ಬಾಂಗ್ಲಾದೇಶ ಅಂತಿಮ ಸ್ಕೋರ್ 50 ಓವರ್ ಗಳಲ್ಲಿ 279/7 ಗಳಿಸಿತು.

ಟಾಸ್ ವರದಿ: ಗಾಯಗೊಂಡಿರುವ ಎಂಎಸ್ ಧೋನಿ ಬದಲಿಗೆ ವಿರಾಟ್ ಕೊಹ್ಲಿ ಅವರು ನಾಯಕರಾಗಿದ್ದಾರೆ. ಈ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ವಿಕೆಟ್ ಕೀಪರ್ ಆಗಿದ್ದು, ಚೇತೇಶ್ವರ್ ಪೂಜಾರಾ, ಈಶ್ವರ್ ಪಾಂಡೆ, ಸ್ಟುವರ್ಟ್ ಬಿನ್ನಿ ಅಂತಿಮ ‍XI ನಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಎರಡು ಪಂದ್ಯಗಳ ಅಮಾನತು ಅನುಭವಿಸುತ್ತಿರುವ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಕೂಡಾ ಇಂದಿನ ಪಂದ್ಯವಾಡುತ್ತಿಲ್ಲ. ಈ ನಡುವೆ ಕಳೆದ ಬಾರಿ ಚಾಂಪಿಯನ್ ಪಾಕಿಸ್ತಾನ ತಂಡ ಮಂಗಳವಾರ ನಡೆದ ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋಲು ಕಂಡಿದೆ.

ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮ, ಶಿಖರ್ ಧವನ್, ಅಜಿಂಕ್ಯ ರಹಾನೆ, ದಿನೇಶ್ ಕಾರ್ತಿಕ್ (ವಿಕೆಟ್ ಕಾರ್ತಿಕ್), ರವೀಂದ್ರ ಜಡೇಜ, ಆರ್ ಅಶ್ವಿನ್, ಭುವನೇಶ್ವರ್ ಕುಮಾರ್, ಮಹಮ್ಮದ್ ಶಮಿ, ವರುಣ್ ಅರೋನ್, ಅಂಬಟಿ ರಾಯುಡು

ಬಾಂಗ್ಲಾದೇಶ: ಮುಷ್ಫಿಕರ್ ರಹೀಂ(ನಾಯಕ), ಎಂ ಮುರ್ತಜಾ, ನಯೀಂ ಇಸ್ಲಾಂ, ರುಬೆಲ್ ಹೊಸ್ಸೆನ್, ಜಡ್ ರೆಹಮಾನ್, ಅದ್ಬುರ್ ರೆಹ್ಮಾನ್, ಅನಾಮುಲ್ ಹಕ್(ವಿಕೆಟ್ ಕೀಪರ್), ಮೊಮಿನುಲ್ ಹಕ್, ನಾಸಿರ್ ಹುಸೇನ್, ಶಾಮ್ಸುರ್ ರಹಮಾನ್, ಸೊಹಾಗ್ ಗಾಜಿ

Story first published:  Wednesday, February 26, 2014, 17:15 [IST]
English summary
Asia Cup 2014: Virat Kohli hit 19th Ton and half Century by Ajinkya Rahane helped Team India beat Bangladesh at Fatullah on Wednesday(Feb.26). Bangla set a target of 280 runs to India with help of Captain Mushfiqur Rahim's career-best ODI score of 117.
ಅಭಿಪ್ರಾಯ ಬರೆಯಿರಿ