Englishहिन्दीമലയാളംதமிழ்తెలుగు

ಧೋನಿಗೆ ಬಲವಂತದ ರಜೆ, ಕೊಹ್ಲಿಗೆ ಪಟ್ಟ

Posted by:
Published: Friday, February 21, 2014, 10:57 [IST]
 

ನವದೆಹಲಿ, ಫೆ.21: ಬಾಂಗ್ಲಾದೇಶದಲ್ಲಿ ನಡೆಯಲಿರುವ ಏಷ್ಯಾಕಪ್ ಟೂರ್ನಮೆಂಟ್ ಗೆ ನಾಯಕ ಧೋನಿ ಅಲಭ್ಯರಾಗಿದ್ದಾರೆ. ಗಾಯಾಳುವಾಗಿರುವ ಕಾರಣ ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಪಾಲ್ಗೊಳ್ಳುತ್ತಿಲ್ಲ. ಧೋನಿ ಅನುಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ನಾಯಕರಾಗಿ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ ಎಂದು ಬಿಸಿಸಿಐ ಪ್ರಕಟಿಸಿದೆ.

ಎಂಎಸ್ ಧೋನಿ ತಂಡದಿಂದ ಹೊರಬಿದ್ದಿರುವ ಕಾರಣ ದಿನೇಶ್ ಕಾರ್ತಿಕ್ ಅವರು ವಿಕೆಟ್ ಕೀಪರ್ ಸ್ಥಾನವನ್ನು ತುಂಬಲಿದ್ದಾರೆ. ಧೋನಿ ಅವರಿಗೆ ಎಡಬದಿಯಲ್ಲಿ ಸ್ನಾಯು ಸೆಳೆತ ಉಂಟಾಗಿದೆ ಹೀಗಾಗಿ ಅವರಿಗೆ ವಿಶ್ರಾಂತಿ ಅಗತ್ಯವಿದೆ ಎಂದು ಹೇಳಲಾಗಿದೆ. ಆದರೆ, ಧೋನಿ ಅವರಿಗೆ ಆಗಿರುವ ತೊಂದರೆ ಬಗ್ಗೆ ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲ. ಎರಡನೇ ಟೆಸ್ಟ್ ವೇಳೆಯಲ್ಲಿ ಧೋನಿಗೆ ಗ್ರೇಡ್ 1 ಗಾಯವಾಗಿದೆ ಅವರಿಗೆ 10 ದಿನಗಳ ಕಾಲ ವಿಶ್ರಾಂತಿ ಅಗತ್ಯವಿದೆ ಎಂದು ತಂಡದ ವೈದ್ಯರು ಹೇಳಿದ್ದಾರೆ.

ಇತ್ತೀಚಿಗೆ ನ್ಯೂಜಿಲೆಂಡ್ ಪ್ರವಾಸದ ವೇಳೆ ಟೀಂ ಇಂಡಿಯಾ ಕಳಪೆ ಪ್ರದರ್ಶನ ನೀಡಿತ್ತು. ಧೋನಿ ನಾಯಕತ್ವ ಬದಲಾವಣೆ ಬಗ್ಗೆ ಕೂಡಾ ಮಾತುಗಳು ಕೇಳಿ ಬಂದಿದ್ದವು. ಟೆಸ್ಟ್ ಕ್ರಿಕೆಟ್ ನಾಯಕರಾಗಿ ಧೋನಿಯನ್ನು ಮುಂದುವರೆಸಿ ಏಕದಿನ ಕ್ರಿಕೆಟ್ ಹಾಗೂ ಟಿ20 ಟೂರ್ನಿಗಳಿಗೆ ವಿರಾಟ್ ಕೊಹ್ಲಿ ಅವರನ್ನು ನಾಯಕರನ್ನಾಗಿಸಬೇಕು ಎಂಬ ಕೂಗೆದ್ದಿತ್ತು.

ಆಟಗಾರರ ಬಳಕೆ ಆಗಲಿಲ್ಲ: ನ್ಯೂಜಿಲೆಂಡ್ ಪ್ರವಾಸದ ತಂಡಕ್ಕೆ ಆಯ್ಕೆಯಾಗಿದ್ದ ಕರ್ನಾಟಕದ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ ಹಾಗೂ ವೇಗಿ ಈಶ್ವರ ಪಾಂಡೆ ಅವರಿಗೆ ಸೂಕ್ತ ಅವಕಾಶವನ್ನು ಧೋನಿ ಕಲ್ಪಿಸಿರಲಿಲ್ಲ. ಭಾರತದ ಪ್ರತಿಭಾವಂತ ಆಲ್ ರೌಂಡರ್ ಬಿನ್ನಿ ನಾಲ್ಕನೆ ಏಕದಿನ ಪಂದ್ಯದಲ್ಲಿ ಕೇವಲ ಒಂದು ಓವರ್ ಬೌಲಿಂಗ್ ಮಾಡಿದ್ದರು. ಪಾಂಡೆ ಕೇವಲ ಒಂದು ಅಭ್ಯಾಸ ಪಂದ್ಯವನ್ನು ಆಡಿದ್ದರು.ಲೆಗ್-ಸ್ಪಿನ್ನರ್ ಅಮಿತ್ ಮಿಶ್ರಾ ಸಹ ಆಟಗಾರರಿಗೆ ನೀರು ಸರಬರಾಜು ಮಾಡುವುದರಲ್ಲೇ ದಿನ ಕಳೆದರು. ಮಿಶ್ರಾ ಭಾರತದ ಕಳೆದ ಎರಡೂ ಪ್ರವಾಸದಲ್ಲೂ ಪೆವಿಲಿಯನ್ ಕುಳಿತು ಎದ್ದು ಬಂದಿದ್ದಾರೆ.

ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುವುದಾಗಿ ಈ ಇಬ್ಬರು ಆಟಗಾರರು ಭರವಸೆಯನ್ನು ವ್ಯಕ್ತಪಡಿಸಿದ್ದರು.ಆದರೆ, ಈ ಇಬ್ಬರಿಗೆ ಅವಕಾಶವೇ ಸಿಗಲಿಲ್ಲ. ಪ್ರಸ್ತುತ ಭಾರತದ ಪ್ರತಿಭಾವಂತ ಆಲ್ ರೌಂಡರ್ ಬಿನ್ನಿ ನಾಲ್ಕನೆ ಏಕದಿನ ಪಂದ್ಯದಲ್ಲಿ ಕೇವಲ ಒಂದು ಓವರ್ ಬೌಲಿಂಗ್ ಮಾಡಿದ್ದರು. ಪಾಂಡೆ ಕೇವಲ ಒಂದು ಅಭ್ಯಾಸ ಪಂದ್ಯವನ್ನು ಆಡಿದ್ದರು.

ಧೋನಿ ಅವರ ಅಂತಿಮ ‍XI ತಂಡದ ಆಯ್ಕೆ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಭಾರತದ ಮಾಜಿ ಆಯ್ಕೆಗಾರ ರಾಜಾ ವೆಂಕಟ್, 'ಮಿಶ್ರಾ ವೃತ್ತಿಜೀವನ ಕೊನೆಗೊಂಡಂತಿದೆ. ಅನಿಲ್ ಕುಂಬ್ಳೆ ನಂತರ ಮಿಶ್ರಾ ನಮ್ಮ ಉತ್ತಮ ಬೌಲರ್. ಅವರನ್ನು ಮತ್ತೆ ಮತ್ತೆ ಕೈಬಿಟ್ಟರೆ ಅವರ ಆತ್ಮವಿಶ್ವಾಸ ಕುಂದಿಹೋಗುವ ಸಾಧ್ಯತೆಯಿದೆ''ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು. ಫೆ.25 ರಿಂದ ಬಾಂಗ್ಲಾದೇಶದಲ್ಲಿ ಏಷ್ಯಾ ಕಪ್ ಪಂದ್ಯಾವಳಿ ಆರಂಭಗೊಳ್ಳಲಿದೆ. [ವಿವರ ಇಲ್ಲಿ ಓದಿ]

ದಟ್ಸ್ ಕ್ರಿಕೆಟ್

English summary
India captain MS Dhoni has been ruled out of the Asia Cup this month due to a left side-strain injury. He sustained a Grade I left side-strain injury during the course of the second Test against New Zealand. He will be undergoing rehabilitation for ten days
ಅಭಿಪ್ರಾಯ ಬರೆಯಿರಿ