Englishहिन्दीമലയാളംதமிழ்తెలుగు

ಟೆಸ್ಟ್ ಸರಣಿ ಕಿವೀಸ್ ಕೈವಶ; ಧೋನಿ ಪಡೆಗೆ ನಿರಾಶೆ

Posted by:
Published: Tuesday, February 18, 2014, 19:26 [IST]
 

ವೆಲ್ಲಿಂಗ್ಟನ್, ಫೆ.18: ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಮೂಲಕ ಸೋಲಿನ ಭೀತಿಯಿಂದ ಬಚಾವಾದ ಧೋನಿ ಪಡೆ ನ್ಯೂಜಿಲೆಂಡ್ ಕೈಗೆ ಟೆಸ್ಟ್ ಸರಣಿ ಒಪ್ಪಿಸಿ ನಿರಾಸೆಯಿಂದ ಪೆವಿಲಿಯನ್ ಗೆ ಮರಳಿದೆ. ಮಂಗಳವಾರ ಅಂತ್ಯಗೊಂಡ ಎರಡನೇ ಟೆಸ್ಟ್ ಪಂದ್ಯ ಡ್ರಾ ಆಗುವ ಮೂಲಕ ಕಿವೀಸ್ ಪಡೆ 1-0 ಅಂತರದಿಂದ ಪ್ರವಾಸಿ ಭಾರತ ತಂಡವನ್ನು ಮಣಿಸಿ ಶಾಂಪೇನ್ ಚಿಮ್ಮಿಸಿದೆ.

ನೆಲದಲ್ಲೂ ಧೋನಿ ಪಡೆಯ ಸರಣಿ ಸೋಲು ಮುಂದುವರೆದಿದೆ. ಇಂದು ಅಂತ್ಯಗೊಂಡ ಎರಡು ಟೆಸ್ಟ್ ಸರಣಿಯನ್ನು ನ್ಯೂಜಿಲೆಂಡ್ ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ನ್ಯೂಜಿಲೆಂಡ್ ನಾಯಕ ಬ್ರೆಂಡನ್ ಮೆಕಲಮ್ ದಾಖಲಿಸಿದ 302 ರನ್ ಕಿವಿಸ್ ಪಡೆಯನ್ನು ಪಾರು ಮಾಡಿದರೆ 2ನೇ ಇನ್ನಿಂಗ್ಸ್ ‌ನಲ್ಲಿ ಟೀಂ ಇಂಡಿಯಾದ ಉಪನಾಯಕ ವಿರಾಟ್ ಕೊಹ್ಲಿ ಸಿಡಿಸಿದ ಶತಕ ವ್ಯರ್ಥವಾಯಿತು. ನಾಲ್ಕನೇ ದಿನದ ಅಂತ್ಯಕ್ಕೆ ಆರು ವಿಕೆಟ್ ಕಳೆದುಕೊಂಡು 571 ರನ್ ಗಳಿಸಿದ್ದ ನ್ಯೂಜಿಲೆಂಡ್ 5ನೇ ದಿನದ ಆರಂಭದಿಂದಲೂ ಮಂದಗತಿಯ ಬ್ಯಾಟಿಂಗ್ ಮಾಡಿ ಎಂಟು ವಿಕೆಟ್ ಕಳೆದುಕೊಂಡು 680 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.

ನಾಯಕ ಮೆಕಲಮ್ 559 ಚೆಂಡುಗಳನ್ನು ಎದುರಿಸಿ 32 ಬೌಂಡರಿ, 4 ಸಿಕ್ಸರ್ ಸಮೇತ 302 ರನ್ ಬಾರಿಸಿ ಜಹೀರ್ ಖಾನ್ ಬೌಲಿಂಗ್ ‌ನಲ್ಲಿ ಧೋನಿಗೆ ಕ್ಯಾಚ್ ನೀಡಿದರು. ಆನಂತರ ಬಂದ ಟಿಂ ಸೌಥಿ 11 ರನ್ ಗಳಿಸಿದರು. ಅಲ್ಲಿಗೆ ನ್ಯೂಜಿಲೆಂಡ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಮತ್ತೊಂದು ತುದಿಯಲ್ಲಿ ನೀಶಮ್ 154 ಚೆಂಡುಗಳಲ್ಲಿ 137 ರನ್ ಸಿಡಿಸಿ ಅಜೇಯರಾಗಿ ಉಳಿದರು. ಭಾರತದ ಪರ ಜಹೀರ್ ಖಾನ್ 5, ಮೊಹಮ್ಮದ್ ಶಮಿ 2 ಮತ್ತು ರವೀಂದ್ರ ಜಡೇಜ ಒಂದು ವಿಕೆಟ್ ಪಡೆದರು.

ಟೆಸ್ಟ್ ಸರಣಿ ಕಿವೀಸ್ ಕೈವಶ; ಧೋನಿ ಪಡೆಗೆ ನಿರಾಶೆ

ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡಕ್ಕೆ ಪಂದ್ಯ ಗೆಲ್ಲುವುದಕ್ಕಿಂತಲೂ ಡ್ರಾ ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು. ಕೇವಲ 2 ರನ್ ಗಳಿಸಿದ್ದ ಶಿಖರ್ ಧವನ್ ಪೆವಿಲಿಯನ್ ಹಾದಿ ಹಿಡಿದರೆ 7 ರನ್ ಗಳಿಸಿದ್ದ ಮುರುಳಿ ವಿಜಯ್ ನಂತರದ ಓವರ್ ನಲ್ಲಿ ವಿಕೆಟ್ ಒಪ್ಪಿಸಿದರು. 17 ರನ್ ಗಳಿಸಿದ್ದ ಪೂಜಾರ್ ಕೂಡ ತಂಡದ ಮೊತ್ತ 54 ರನ್ ಗಳಾಗಿದ್ದಾಗ ವಾಟ್ಲಿಂಗ್ ಗೆ ಕ್ಯಾಚ್ ನೀಡಿ ಹೊರನಡೆದರು. ದಿಢೀರನೆ ೩ವಿಕೆಟ್ ಬೀಳುತ್ತಿದ್ದಂತೆ ಭಾರತದ ಗೆಲುವಿನ ಯತ್ನಕ್ಕೆ ಬ್ರೇಕ್ ಬಿತ್ತು. 4ನೇ ವಿಕೆಟ್ ‌ಗೆ ಜೊತೆಗೂಡಿದ ಕೊಹ್ಲಿ ಮತ್ತು ರೋಹಿತ್ ಶರ್ಮ(30) ಮಂದಗತಿಯ ಬ್ಯಾಟಿಂಗ್ ಮಾಡಿದರು.

ಕೊನೆ ಕೊನೆಯಲ್ಲಿ ಕೊಹ್ಲಿ (105) ಶತಕ ದಾಖಲಿಸಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರಾದರೂ ಇನ್ನು 10ಕ್ಕೂ ಹೆಚ್ಚು ಓವರ್ ‌ಗಳು ಬಾಕಿ ಇದ್ದಂತೆ ಎರಡೂ ತಂಡಗಳ ನಾಯಕರು ಪಂದ್ಯ ಡ್ರಾ ಮಾಡಿಕೊಳ್ಳಲು ಒಪ್ಪಿಕೊಂಡರು. ಅಲ್ಲಿಗೆ ಭಾರತದ ಹೋರಾಟ ಅಂತ್ಯಗೊಂಡಿತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ಕಳೆದುಕೊಂಡು ಭಾರತ 165 ರನ್ ಗಳಿಸಿತು. ನ್ಯೂಜಿಲೆಂಡ್ ಪರ ಟಿಂ ಸೌತಿ 2, ಬೋಲ್ಟ್ 1 ವಿಕೆಟ್ ಗಳಿಸಿದರು. ತ್ರಿಶತಕ ದಾಖಲಿಸಿದ ಬ್ರೆಂಡನ್ ಮೆಕಲಮ್ ಪಂದ್ಯ ಪುರುಷ ಹಾಗೂ ಸರಣಿ ಶ್ರೇಷ್ಠ ಎನಿಸಿದರು.

English summary
India ended the ignominious tour of New Zealand by drawing the second and final Test after home team skipper Brendon McCullum became the first Kiwi batsman to hit a triple-century and stage an incredible turnaround to clinch the the two-match series 1-0, here today(Feb.18).
ಅಭಿಪ್ರಾಯ ಬರೆಯಿರಿ