Englishहिन्दीമലയാളംதமிழ்తెలుగు

ಐಪಿಎಲ್ 7 : ಶ್ರೇಯಸ್ ,ಸಿಎಂ ಗೌತಮ್ ಮುಂಬೈಗೆ

Posted by:
Updated: Thursday, February 13, 2014, 12:34 [IST]
 

ಬೆಂಗಳೂರು, ಫೆ.13: ಭಾರಿ ಕುತೂಹಲ ಕೆರಳಿಸಿರುವ ಇಂಡಿಯನ್ ಪ್ರಿಮಿಯರ್ ಲೀಗ್ ನ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ಎರಡನೇ ದಿನಕ್ಕೆ ಕಾಲಿಟ್ಟಿದೆ. ಮೊದಲ ದಿನ ಟೀಂ ಇಂಡಿಯ ಸ್ಟಾರ್ ಆಟಗಾರ ಯುವರಾಜ್ ಅವರು ಮಲ್ಯ ಅವರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದ್ದರು

ಈ ವರೆಗೂ ಸುಮಾರು 24 ಆಟಗಾರರನ್ನು ಫ್ರಾಂಚೈಸಿಗಳು ಉಳಿಸಿಕೊಂಡಿದ್ದರೆ, ಡೆಲ್ಲಿ ಡೇರ್ ಡೆವಿಲ್ಸ್ ಮಾತ್ರ ಯಾವ ಸ್ಟಾರ್ ಆಟಗಾರರನ್ನು ಉಳಿಸಿಕೊಂಡಿಲ್ಲ. ಸುಮಾರು 514 ಆಟಗಾರರು ಈ ಬಾರಿ ಹರಾಜಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರೆ.

ಒಂದು ಫ್ರಾಂಚೈಸಿ 5 ಹಳೆ ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ಪ್ರತಿ ತಂಡ 27 ಮಂದಿ ಆಟಗಾರರನ್ನು ಹೊಂದಬಹುದಾಗಿದ್ದು 16 ಆಟಗಾರರು ಕನಿಷ್ಠ ಇರಲೇ ಬೇಕು 9 ವಿದೇಶಿ ಆಟಗಾರರನ್ನು ಸೇರಿಸಿಕೊಳ್ಳಬಹುದು. ತಂಡಗಳ ವರಮಾನ 60 ಕೋಟಿ ರು ಪ್ರತಿ ವರ್ಷಕ್ಕೆ ಎಂದು ನಿಗದಿ ಪಡಿಸಲಾಗಿದೆ.

ಐಪಿಎಲ್ 7 : ಶ್ರೇಯಸ್ ,ಸಿಎಂ ಗೌತಮ್ ಮುಂಬೈಗೆ

12.31 : ಹೆಂಡ್ರಿಕ್ಸ್ 1.80 ಕೋಟಿ ರುಗೆ ಪಂಜಾಬ್ ಪಾಲು
12.28: 40 ಲಕ್ಷ ರು ಗೆ ಪ್ರತಾಪ್ ಸಿಂಗ್ ಕೆಕೆಆರ್ ಪಾಲು
12.27: ಹರ್ಷಲ್ ಪಟೇಲ್ 40 ಲಕ್ಷ ರು ಗೆ ಆರ್ ಸಿಬಿನಲ್ಲೇ ಉಳಿಕೆ
12.25: ಸಿದ್ದಾರ್ಥ್ ವಾರಿಯರ್ 10 ಲಕ್ಷ ರು ಗೆ ಆರ್ ಸಿಬಿಗೆ
12.21: ರೋನಿತ್ ಮೋರೆ 10 ಲಕ್ಷ ರು ಗೆ ಚೆನೈ ಪಾಲು
12.19: ಜಲಜ್ ಸಕ್ಸೇನಾ 90 ಲಕ್ಷ ರು ಗೆ ಮುಂಬೈ ಪಾಲಿ
12.11: ವಿಜಯ್ ಶಂಕರ್ 10 ಲಕ್ಷ ರು ಗೆ ಚೆನ್ನೈ ಪಾಲು
12.10: ಅಕ್ಷರ್ ಪಟೇಲ್ 20 ಲಕ್ಷ ರು ಗೆ ಕಿಂಗ್ಸ್ ‍XI ಪಂಜಾಬ್ ಪಾಲು
12.01: ಅಪೂರ್ವ ಪುನಿಕರ್ 20 ಲಕ್ಷ ರು ಗೆ ಸನ್ ರೈಸರ್ಸ್ ಪಾಲು
11.57: ಕರಣ್ ನಾಯರ್ 75 ಲಕ್ಷ ರು ಗೆ ರಾಜಸ್ಥಾನ ಪಾಲು
11.52: ಕರಣ್ ಶರ್ಮ 3.75 ಕೋಟಿ ರು ಗೆ ಹೈದರಾಬಾದಿಗೆ ಸೇರ್ಪಡೆ
11.47: ಶ್ರೇಯಸ್ ಗೋಪಾಲ್ 10 ಲಕ್ಷ ರು ಗೆ ಮುಂಬೈ ಪಾಲು

11.43: ಶಬಾಜ್ ನದೀಂ 85 ಲಕ್ಷ ಕ್ಕೆ ಡೆಲ್ಲಿಯಲ್ಲೇ ಉಳಿಕೆ
11.50 : ಪ್ರವೀಣ್ ತಾಂಬೆ ರಾಜಸ್ಥಾನ್ ರಾಯಲ್ಸ್ ತಂಡದಲ್ಲೇ ಉಳಿಕೆ
11.40: ಜಕಾತಿಗೆ 20 ಲಕ್ಷ ರು ಕೊಟ್ಟು ಖರೀದಿಸಿದ ಆರ್ ಸಿಬಿ
11.39: ವೈ ಸಿಂಗ್ ಯಾದವ್ 10 ಲಕ್ಷ ರು ಗೆ ಆರ್ ಸಿಬಿ ಪಾಲು
11.38: ಕೆ ಸಿಂಗ್ ಯಾದವ್ 40 ಲಕ್ಷ ರು ಗೆ ಕೆಕೆಆರ್
11.33: ಈಶ್ವರ್ ಪಾಂಡೆ(10 ಲಕ್ಷ ಮೂಲ ಮೌಲ್ಯ) 1.50 ಕೋಟಿ ರು ಗೆ ಚೆನ್ನೈ ಪಾಲು
11.32: ಸಿದ್ದಾರ್ಥ್ ಕೌಲ್ 45 ಲಕ್ಷ ರು ಗೆ ಡೆಲ್ಲಿ ತಂಡಕ್ಕೆ ಸೇರ್ಪಡೆ
11.30 : ಅಹ್ಮದ್ 30 ಲಕ್ಷ ರು ಗೆ ಆರ್ ಸಿಬಿ ಪಾಲು
11.28: ಪರಮೇಶ್ವರನ್ 30 ಲಕ್ಷ ರು ಗೆ ಸನ್ ರೈಸರ್ಸ್ ಹೈದರಾಬಾದಿಗೆ
11.25: ಸಂದೀಪ್ ಶರ್ಮ 85 ಲಕ್ಷ ರು ಗೆ ಪಂಜಾಬ್ ತಂಡಕ್ಕೆ ಸೇರ್ಪಡೆ
11.21: ಜಸ್ಪ್ರೀತ್ ಬುಮ್ರಾ 1.20 ಕೋಟಿ ರು ಗೆ ಮುಂಬೈಗೆ ಸೇರ್ಪಡೆ
11.20: ಅನುರೀತ್ ಸಿಂಗ್ 20 ಲಕ್ಷ ರು ಗೆ ಕಿಂಗ್ಸ್ ‍XI ಪಂಜಾಬ್ ಗೆ
11.19: ರಾಹುಲ್ ಶುಕ್ಲಾ 40 ಲಕ್ಷ ರು ಗೆ ಡೆಲ್ಲಿ ತಂಡ ಪಾಲು
11.07 ಇಕ್ಬಾಲ್ ಅಬ್ದುಲ್ಲಾ 65 ಲಕ್ಷ ರು ಗೆ ರಾಜಸ್ಥಾನ ಪಾಲು
11.05 ಮಿಥುನ್ ಮಿನಾಸ್ 30 ಲಕ್ಷ ರು ಗೆ ಚೆನ್ನೈ ಪಾಲು
11.04: ಟೆನ್ ಡೆಸ್ಕೇಟ್ ಕೆಕೆಆರ್ ನಲ್ಲೇ ಉಳಿಕೆ 1 ಕೋಟಿ ರು ಗೆ ಖರೀದಿ
11.03: ಕೆವನ್ ಕೂಪರ್ ರಾಜಸ್ಥಾನ್ ರಾಯಲ್ಸ್ 30 ಲಕ್ಷ ರು ಗೆ ರಾಜಸ್ಥಾನಕ್ಕೆ
10.59: ಪರ್ವೇಜ್ ರಸೂಲ್ 95 ಲಕ್ಷ ರು ಗೆ ಸನ್ ರೈಸರ್ಸ್ ಹೈದರಾಬಾದಿಗೆ

10.54 : ರಿಷಿ ಧವನ್ ಗೆ(20 ಲಕ್ಷ ರು ಮೂಲ ಮೌಲ್ಯ) 3 ಕೋಟಿ ರು ಗೆ ಪಂಜಾಬ್ ಪಾಲು
10.53; ಮನದೀಪ್ ಸಿಂಗ್ 80 ಲಕ್ಷ ರು ಗೆ ಕಿಂಗ್ಸ್ XI ಪಂಜಾಬ್ ಗೆ
10.50: ರಜತ್ ಭಾಟಿಯಾ 1.70 ಕೋಟಿ ರು ಗೆ ರಾಜಸ್ಥಾನ ಪಾಲು
10.39: ಅಂಕುಶ್ ಬೈನ್ಸ್ 10 ಲಕ್ಷ ರು ಗೆ ರಾಜಸ್ಥಾನ ಪಾಲು
10.37 : ಸಿಎಂ ಗೌತಮ್ 20 ಲಕ್ಷ ರು ಗೆ ಮುಂಬೈ ಪಾಲು
10.33: ಮನ್ವಿಂದರ್ ಬಿಸ್ಲಾ ಕೆಕೆಆರ್ ನಲ್ಲೇ ಉಳಿದರು 60 ಲಕ್ಷಕ್ಕೆ ಖರೀದಿ
10.26 : ಮಾಯಾಂಕ್ ಅಗರವಾಲ್ 1.60 ಕೋಟಿ ರು ಗೆ ಡೆಲ್ಲಿ ಪಾಲು
10.25: ಸೂರ್ಯಕುಮಾರ್ ಯಾದವ್ 70 ಲಕ್ಷ ರು ಗೆ ಕೆಕೆಆರ್ ಪಾಲು
10.20: ಕೆಎಲ್ ರಾಹುಲ್ 1 ಕೋಟಿ ರು ಗೆ ಸನ್ ರೈಸರ್ಸ್ ಹೈದರಾಬಾದ್ ಪಾಲು

ಐಪಿಎಲ್ 7 : ಶ್ರೇಯಸ್ ,ಸಿಎಂ ಗೌತಮ್ ಮುಂಬೈಗೆ

10.17: ಕೇದಾರ್ ಜಾಧವ್ 2 ಕೋಟಿ ರು ಗೆ ಡೆಲ್ಲಿ ತಂಡಕ್ಕೆ
10.16: ಮನ್ ಪ್ರೀತ್ ಜುನೇಜಾ 10 ಲಕ್ಷ ರು ಗೆ ಸನ್ ರೈಸರ್ಸ್ ಹೈದರಾಬಾದಿಗೆ
10.16: ಮನ್ ಪ್ರೀತ್ ಜುನೇಜಾ 10 ಲಕ್ಷ ರು ಗೆ ಸನ್ ರೈಸರ್ಸ್ ಹೈದರಾಬಾದಿಗೆ
10.15: ಮನೀಶ್ ಪಾಂಡೆ 1.75 ಕೋಟಿ ರು ಗೆ ಕೋಲ್ಕತ್ತಾ ಪಾಲು
10.13 : ಉನ್ಮುಕ್ತ್ ಚಂದ್ ರಾಜಸ್ಥಾನ ರಾಯಲ್ಸ್ ಪಾಲು
10.07 : ಗುರ್ ಕೀರತ್ ಸಿಂಗ್ 1.30 ಕೋಟಿ ರು ಗೆ ಕಿಂಗ್ಸ್ XI ಪಂಜಾಬ್ ಪಾಲು
10.06 : ಬಾಬಾ ಅಪರಾಜಿತ್ 10 ಲಕ್ಷಕ್ಕೆ ಚೆನ್ನೈ ಸೂಪರ್ ಕಿಂಗ್ ಗೆ
10.05 : ವಿಜಯ್ ಜೋಲ್ 30 ಲಕ್ಷ ರುಗೆ ಆರ್ ಸಿಬಿಗೆ
10.00: ಅನಿರುದ್ಧ ಶ್ರೀಕಾಂತ್ 20 ಲಕ್ಷ ರು ಗೆ ಸನ್ ರೈಸರ್ಸ್ ಹೈದರಾಬಾದಿಗೆ

Story first published:  Thursday, February 13, 2014, 10:18 [IST]
English summary
It is second and final day of the IPL 7 Players' Auction here today at the ITC Gardenia Hotel. On the first day, Yuvraj Singh was the biggest gainer at Rs 14 crores. The left-hander went to Royal Challengers Bangalore.
ಅಭಿಪ್ರಾಯ ಬರೆಯಿರಿ