Englishहिन्दीമലയാളംதமிழ்తెలుగు

ಐಪಿಎಲ್ 7 : ಮಲ್ಯ ಅವರ ಕ್ರಿಕೆಟ್ 'ಕುದುರೆ'ಗಳು

Posted by:
Updated: Thursday, February 13, 2014, 17:52 [IST]
 

ಬೆಂಗಳೂರು, ಫೆ.13: ಇಂಡಿಯನ್ ಪ್ರಿಮಿಯರ್ ಲೀಗ್ 7 ಹರಾಜಿನಲ್ಲಿ ಅತ್ಯಂತ ಗರಿಷ್ಠ ಮೊತ್ತಕ್ಕೆ ಮಾರಾಟವಾದ ಯುವರಾಜ್ ಸಿಂಗ್ ಗಳಿಸಿಕೊಂಡ ಹೆಮ್ಮೆಯ ಜತೆಗೆ ಕೊರಗು ಕೂಡಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಲ್ಯ ಹೊತ್ತಿದ್ದಾರೆ. 10 ಕೋಟಿ ರು ಬದಲಿಗೆ 14 ಕೋಟಿ ರು ನೀಡಿ ಯುವಿ ಖರೀದಿಸಿದ ಮಲ್ಯ ಎರಡು ದಿನಗಳಲ್ಲಿ ಒಟ್ಟಾರೆ 18 ಆಟಗಾರರನ್ನು ತನ್ನ ಸೇನೆಗೆ ಸೇರಿಸಿಕೊಂಡಿದೆ.

ಐಪಿಎಲ್ ನಿಯಮದ ಪ್ರಕಾರ ಒಂದು ಫ್ರಾಂಚೈಸಿ 5 ಹಳೆ ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ಪ್ರತಿ ತಂಡ 27 ಮಂದಿ ಆಟಗಾರರನ್ನು ಹೊಂದಬಹುದಾಗಿದ್ದು 16 ಆಟಗಾರರು ಕನಿಷ್ಠ ಇರಲೇ ಬೇಕು 9 ವಿದೇಶಿ ಆಟಗಾರರನ್ನು ಸೇರಿಸಿಕೊಳ್ಳಬಹುದು. ತಂಡಗಳ ವರಮಾನ 60 ಕೋಟಿ ರು ಪ್ರತಿ ವರ್ಷಕ್ಕೆ ಎಂದು ನಿಗದಿ ಪಡಿಸಲಾಗಿದೆ. ಆರ್ ಸಿಬಿ ತಂಡ ಮೂವರು ಆಟಗಾರರನ್ನು ಉಳಿಸಿಕೊಂಡಿತ್ತು ಉಳಿದ 18 ಆಟಗಾರರ ಪಟ್ಟಿ ಇಂತಿದೆ:

ಸೂಚನೆ: ಮಲ್ಯ ಅವರ ತಂಡದಲ್ಲಿ ಕರ್ನಾಟಕದ ಯಾವುದೇ ಆಟಗಾರರು ಸ್ಥಾನ ಪಡೆದುಕೊಂಡಿಲ್ಲ. ಬೆಂಗಳೂರು ತಂಡಕ್ಕೆ ಆಟಗಾರರನ್ನು ಹರಾಜಿನಲ್ಲಿ ಕೊಳ್ಳಲು ಅಸಲಿಗೆ ಮಲ್ಯ ಬಳಿ ‌ದುಡ್ಡು ಕಡಿಮೆ ಇತ್ತು.

ತಂಡದ ಬಲ : 21 ; 60 ಕೋಟಿ ರು ಬಳಕೆ; ಕ್ರಿಸ್ ಗೇಲ್, ಎಬಿ ಡಿವಿಲೆಯರ್ಸ್, ವಿರಾಟ್ ಕೊಹ್ಲಿ ಮೂವರು ಆಟಗಾರರನ್ನು ಉಳಿಸಿಕೊಳ್ಳಲು 29.5 ಕೋಟಿ ರು ಖರ್ಚು ಮಾಡಿದ್ದಾರೆ ಮಲ್ಯ. ಬ್ಯಾಟ್ಸ್ ಮನ್ : 6; ಬೌಲರ್ : 11, ಆಲ್ ರೌಂಡರ್ಸ್: 3; ವಿಕೆಟ್ ಕೀಪರ್ : 1

ಐಪಿಎಲ್ 7 : ಮಲ್ಯ ಅವರ ಕ್ರಿಕೆಟ್ 'ಕುದುರೆ'ಗಳು

1. ವಿರಾಟ್ ಕೊಹ್ಲಿ (ನಾಯಕ, ಬ್ಯಾಟ್ಸ್ ಮನ್, ಭಾರತ)
2. ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್, ಬ್ಯಾಟ್ಸ್ ಮನ್)
3. ಎಬಿ ಡಿವಿಲೇಯರ್ಸ್ (ದಕ್ಷಿಣ ಅಫ್ರಿಕಾ, ಬ್ಯಾಟ್ಸ್ ಮನ್)
4. ಯುವರಾಜ್ ಸಿಂಗ್ (ಭಾರತ, ಆಲ್ ರೌಂಡರ್) 15 ಕೋಟಿ ರು
5. ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ, ಎಡಗೈ ವೇಗಿ) 5 ಕೋಟಿ ರು
6. ಆಲ್ಬಿ ಮಾರ್ಕೆಲ್ (ದಕ್ಷಿಣ ಆಫ್ರಿಕಾ, ಆಲ್ ರೌಂಡರ್) 2.4 ಕೋಟಿ ರು
7. ವರುಣ್ ಅರೋನ್ (ಭಾರತ, ಮಧ್ಯಮ ವೇಗಿ ) 2 ಕೋಟಿ ರು
8. ಅಶೋಕ್ ದಿಂಡಾ (ಭಾರತ, ಮಧ್ಯಮ ವೇಗಿ) 1.5 ಕೋಟಿ ರು
9. ಪಾರ್ಥೀವ್ ಪಟೇಲ್ (ಭಾರತ, ವಿಕೆಟ್ ಕೀಪರ್) 1.4 ಕೋಟಿ ರು
10. ಮುತ್ತಯ್ಯ ಮರಳೀಧರನ್ (ಶ್ರೀಲಂಕಾ, ಸ್ಪಿನ್ನರ್) 1 ಕೋಟಿ ರು
11. ರವಿ ರಾಂಪಾಲ್ (ವೆಸ್ಟ್ ಇಂಡೀಸ್, ವೇಗಿ) 90 ಲಕ್ಷ ರು
12. ನಿಕ್ ಮಾಡಿಸನ್(ಆಸ್ಟ್ರೇಲಿಯಾ, ಬ್ಯಾಟ್ಸ್ ಮನ್) 50 ಲಕ್ಷ ರು
13. ಹರ್ಷಲ್ ಪಟೇಲ್ (ಭಾರತ, ವೇಗಿ) 40 ಲಕ್ಷ ರು
14. ವಿಜಯ್ ಜೋಲ್ (ಭಾರತ, ಬ್ಯಾಟ್ಸ್ ಮನ್) 30 ಲಕ್ಷ ರು
15. ಅಬು ನೆಚಿಮ್ ಅಹ್ಮದ್ (ಭಾರತ, ಮಧ್ಯಮ ವೇಗಿ) 30 ಲಕ್ಷ ರು
16. ಶಬಾದ್ ಜಕಾತಿ (ಭಾರತ, ಎಡಗೈ ಸ್ಪಿನ್ನರ್ ) 20 ಲಕ್ಷ ರು
17. ಸಚಿನ್ ರಾಣಾ (ಭಾರತ, ಮಧ್ಯಮ ವೇಗಿ) 20 ಲಕ್ಷ ರು
18. ಸಂದೀಪ್ ವಾರಿಯರ್ಸ್ (ಭಾರತ, ಮಧ್ಯಮ ವೇಗಿ) 10 ಲಕ್ಷ ರು
19. ಯುಜುವೇಂದ್ರ ಚಾಹಲ್ (ಭಾರತ, ಲೆಗ್ ಸ್ಪಿನ್ನರ್) 10 ಲಕ್ಷ ರು
20. ತನ್ಮಯ್ ಮಿಶ್ರಾ (ಕೀನ್ಯಾ, ಬ್ಯಾಟ್ಸ್ ಮನ್) 10 ಲಕ್ಷ ರು
21. ಯೋಗೇಶ್ ತಾಕಾವಾಲೆ (ಭಾರತ, ವಿಕೆಟ್ ಕೀಪರ್) 10 ಲಕ್ಷ ರು

ದಟ್ಸ್ ಕ್ರಿಕೆಟ್

Read in English: IPL 7: Meet the RCB squad

Story first published:  Thursday, February 13, 2014, 17:30 [IST]
English summary
IPL 7: Meet the Royal Challengers Bangalore Squad. Yuvraj Singh was the costliest player of IPL 7 Auction and the left-hander will be seen in Royal Challengers Bangalore colours this season.
ಅಭಿಪ್ರಾಯ ಬರೆಯಿರಿ