Englishहिन्दीമലയാളംதமிழ்తెలుగు

ಲಾರ ಸಮಕ್ಕೆ ನಿಂತ ಸಂಗಕ್ಕಾರ ಮುಂದೆ ಬ್ರಾಡ್ಮನ್

Posted by:
Published: Thursday, February 6, 2014, 17:27 [IST]
 

ಚಿತ್ತಗಾಂಗ್, ಫೆ.6: ಬಾಂಗ್ಲಾದೇಶ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಜೀವನ ಶ್ರೇಷ್ಠ 319 ರನ್ ಸಿಡಿಸಿದ ಶ್ರೀಲಂಕಾದ ಬ್ಯಾಟ್ಸ್ ಮನ್ ಕುಮಾರ ಸಂಗಕ್ಕರ ತ್ವರಿತವಾಗಿ 11,000 ರನ್ ಕ್ಲಬ್ ಗೆ ಸೇರ್ಪಡೆಯಾಗಿದ್ದಾರೆ. ಇದಲ್ಲದೆ 9ನೇ ದ್ವಿಶತಕ ಸಿಡಿಸಿದ ಕೂಡಲೇ ಬ್ರಿಯಾನ್ ಲಾರಾ ಸಮಕ್ಕೆ ನಿಂತಿದ್ದಾರೆ ಈಗ ಇವರ ಮುಂದೆ ಡಾನ್ ಬ್ರಾಡ್ಮನ್ ಮಾತ್ರ ಇದ್ದಾರೆ.

ಮೊದಲ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಹಾಗೂ 248 ರನ್ ‌ಗಳಿಂದ ಗೆದ್ದುಕೊಂಡಿದ್ದ ಶ್ರೀಲಂಕಾ ತಂಡ ಎರಡನೆ ದಿನದಾಟವಾದ ಇಂದು ಟೀ ವಿರಾಮದ ವೇಳೆಗೆ ಮೊದಲ ಇನಿಂಗ್ಸ್ ‌ನಲ್ಲಿ 587 ರನ್ ‌ಗೆ ಆಲೌಟಾಯಿತು.

ಚೊಚ್ಚಲ ತ್ರಿಶತಕವನ್ನು ಸಿಡಿಸಿದ ಸಂಗಕ್ಕರ 9ನೆ ಬಾರಿ 200 ಪ್ಲಸ್ ಸ್ಕೋರನ್ನು ದಾಖಲಿಸಿದ ವಿಶ್ವದ ಎರಡನೆ ಬ್ಯಾಟ್ಸ್ ‌ಮನ್ ಎಂಬ ಕೀರ್ತಿಗೆ ಭಾಜನರಾದರು. ಆಸ್ಟ್ರೇಲಿಯದ ದಂತಕತೆ ಡಾನ್ ಬ್ರಾಡ್ಮನ್ 12 ಬಾರಿ 200 ಕ್ಕೂ ಅಧಿಕ ರನ್ ಗಳಿಸಿದ್ದಾರೆ.

ಲಾರ ಸಮಕ್ಕೆ ನಿಂತ ಸಂಗಕ್ಕಾರ ಮುಂದೆ ಬ್ರಾಡ್ಮನ್

122ನೆ ಟೆಸ್ಟ್ ಪಂದ್ಯವನ್ನಾಡಿದ 36ರ ಹರೆಯದ ಸಂಗಕ್ಕರ 11,000 ರನ್ ತಲುಪಿದ 9ನೆ ಟೆಸ್ಟ್ ಬ್ಯಾಟ್ಸ್ ‌ಮನ್ ಎನಿಸಿಕೊಂಡರು. ಇದೀಗ ಸಂಗಕ್ಕರ 11,046 ರನ್ ಕಲೆ ಹಾಕಿದ್ದಾರೆ. ಭಾರತದ ಸಚಿನ್ ತೆಂಡೂಲ್ಕರ್(15,921) ಸಾರ್ವಕಾಲಿಕ ಶ್ರೇಷ್ಠ ಸ್ಕೋರರ್ ‌ಗಳ ಪಟ್ಟಿಯಲ್ಲಿ ಮೊದಲನೆ ಸ್ಥಾನದಲ್ಲಿದ್ದಾರೆ. ಸಂಗಕ್ಕಾರ 319 ರನ್ (32 ಬೌಂಡರಿ, 8 ಸಿಕ್ಸರ್) ಗಳನ್ನು ಸಿಡಿಸಿದರು. ಸಂಗಕ್ಕರ -ನುವಾನ್ ಪ್ರದೀಪ್ ಜೋಡಿ 10ನೆ ವಿಕೆಟ್ ‌ಗೆ 54 ರನ್ ಜೊತೆಯಾಟ ನಡೆಸಿದರು. ಸಂಗಕ್ಕರ ಕೊನೆಯ ಮೂವರು ಬ್ಯಾಟ್ಸ್ ‌ಮನ್ ‌ಗಳೊಂದಿಗೆ 116 ರನ್ ಸೇರಿಸಿದರು.

ಸಂಗಕ್ಕಾರ ಶತಕ ದಾಖಲಿಸಿದ ಕೂಡಲೇ ಸುನಿಲ್ ಗವಾಸ್ಕರ್ ಹಾಗೂ ಬ್ರಿಯಾನ್ ಲಾರಾ ಸಮಕ್ಕೆ ನಿಂತು ಹೆಚ್ಚು ಶತಕ ದಾಖಲಿಸಿದ ಪಟ್ಟಿಗೆ ಸೇರಿದರು. ದ್ವಿಶತಕ ದಾಖಲಿಸಿ ಗವಾಸ್ಕರ್ ದಾಖಲೆ ಮುರಿದು ಲಾರಾ ಸಮಕ್ಕೆ ಬಂದರು. 208 ಇನ್ನಿಂಗ್ಸ್ ನಲ್ಲಿ 11 ಸಾವಿರ ರನ್ ಕ್ಲಬ್ ಸೇರಿದರು. 36 ವರ್ಷದ ಸಂಗಕ್ಕಾರ ಈಗ ಡಾನ್ ಅವರ 12 ದ್ವಿಶತಕ ದಾಖಲೆ ಮುರಿಯುವ ಉತ್ಸಾಹದಲ್ಲಿದ್ದಾರೆ.

* ಡಾನ್ ಬ್ರಾಡ್ಮನ್ : 12 ದ್ವಿಶತಕ
* ಕುಮಾರ ಸಂಗಕ್ಕಾರ, ಬ್ರಿಯಾನ್ ಲಾರಾ: 9
* ವಾಲಿ ಹಮ್ಮಂಡ್, ಮಹೇಲ ಜಯವರ್ಧನೆ : 7
* ಮಾರ್ವನ್ ಅಟಪಟ್ಟು, ವೀರೇಂದ್ರ ಸೆಹ್ವಾಗ್, ಜಾವೇದ್ ಮಿಯಾಂದಾದ್, ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್ : 6

* ಗ್ರಹಾಂ ಸ್ಮಿತ್, ರಾಹುಲ್ ದ್ರಾವಿಡ್: 5
ದಟ್ಸ್ ಕ್ರಿಕೆಟ್

English summary
Sri Lanka's Kumar Sangakkara has joined Brian Lara by scoring his 9th double century in Test cricket and moved a step closer to Don Bradman, on Wednesday.
ಅಭಿಪ್ರಾಯ ಬರೆಯಿರಿ