Englishहिन्दीമലയാളംதமிழ்తెలుగు

ಇರಾನಿ ಕಪ್ : ಕರ್ನಾಟಕಕ್ಕೆ ಸಿಕ್ತು ಬಿನ್ನಿ, ಶರತ್ ಬಲ

Posted by:
Updated: Thursday, February 6, 2014, 20:35 [IST]
 

ಬೆಂಗಳೂರು, ಫೆ.6: ಇರಾನಿ ಕಪ್ ಗಾಗಿ ಶೇಷ ಭಾರತ ತಂಡದ ವಿರುದ್ಧ ಸೆಣುವ ರಣಜಿ ಚಾಂಪಿಯನ್ ಕರ್ನಾಟಕ ತಂಡವನ್ನು ಗುರುವಾರ ಸಂಜೆ ಪ್ರಕಟಿಸಲಾಗಿದೆ. ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ, ವೇಗಿ ಶರತ್ ಅವರು ತಂಡಕ್ಕೆ ಮರಳಿದ್ದು ರಾಜ್ಯ ತಂಡಕ್ಕೆ ಆನೆಬಲ ಸಿಕ್ಕಿದ್ದಂತಾಗಿದೆ.

ಇತರೆ ಭಾರತ ತಂಡವನ್ನು ಹರ್ಭಜನ್ ಸಿಂಗ್ ಮುನ್ನಡೆಸಲಿದ್ದಾರೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೆ.9 ರಿಂದ 13ರ ತನಕ ಇರಾನಿ ಕಪ್ ನಡೆಯಲಿದೆ. 2012-13ರಲ್ಲಿ ಮುಂಬೈ ವಿರುದ್ಧದ ಇರಾನಿ ಕಪ್ ನಲ್ಲಿ ಶೇಷ ಭಾರತ ತಂಡವನ್ನು ಮುನ್ನಡೆಸಿದ್ದ ಹರ್ಭಜನ್ ಇದೀಗ ಸತತ ಎರಡನೆ ವರ್ಷವೂ ನಾಯಕತ್ವವನ್ನು ವಹಿಸಿಕೊಂಡಿರುವುದು ವಿಶೇಷ.

ನ್ಯೂಜಿಲೆಂಡ್ ನಲ್ಲಿ ಏಕದಿನ ಸರಣಿ ಆಡಲು ಟೀಂ ಇಂಡಿಯಾ ಸೇರಿದ್ದ ಸ್ಟುವರ್ಟ್ ಬಿನ್ನಿ ರಾಜ್ಯಕ್ಕೆ ಮರಳಿದ್ದಾರೆ. ಮಹಾರಾಷ್ಟ್ರ ವಿರುದ್ಧ 3 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದ ಕರ್ನಾಟಕದ ತಂಡದಿಂದ ದೂರವುಳಿದಿದ್ದ ಬಿನ್ನಿ ಈಗ ಇರಾನಿ ಕಪ್ ಪಂದ್ಯಕ್ಕೆ ಲಭ್ಯರಾಗಿದ್ದಾರೆ. ಇನ್ನೂ ಭುಜದ ಗಾಯದಿಂದ ಬಳಲುತ್ತಿದ್ದ ಮಂಡ್ಯದ ವೇಗಿ ಶರತ್ ಅವರು ಗುಣಮುಖರಾಗಿದ್ದು ಇರಾನಿ ಕಪ್ ಗಾಗಿ ತಂಡಕ್ಕೆ ಮರಳಿದ್ದಾರೆ. ರಣಜಿ ತಂಡದಲ್ಲಿದ್ದ ಸ್ಪಿನ್ನರ್ ಕೆಪಿ ಅಪ್ಪಣ್ಣ ಅವರು ಇಂದು ಪ್ರಕಟಗೊಂಡ ತಂಡದಿಂದ ಹೊರಬಿದ್ದಿದ್ದಾರೆ.

ಇರಾನಿ ಕಪ್ : ಕರ್ನಾಟಕಕ್ಕೆ ಸಿಕ್ತು ಬಿನ್ನಿ, ಶರತ್ ಬಲ

ಕರ್ನಾಟಕ ತಂಡ ಇಂತಿದೆ: ಆರ್ ವಿನಯ್ ಕುಮಾರ್ (ನಾಯಕ), ರಾಬಿನ್ ಉತ್ತಪ್ಪ, ಗಣೇಶ್ ಸತೀಶ್, ಮನೀಶ್ ಪಾಂಡೆ, ಸ್ಟುವರ್ಟ್ ಬಿನ್ನಿ, ಸಿಎಂ ಗೌತಮ್ (ಉಪ ನಾಯಕ, ವಿಕೆಟ್ ಕೀಪರ್), ಕರುಣ್ ನಾಯರ್, ಶ್ರೇಯಸ್ ಗೋಪಾಲ್, ಅಭಿಮನ್ಯು ಮಿಥುನ್, ಅಮಿತ್ ವರ್ಮ, ಮಾಯಾಂಕ್ ಅಗರವಾಲ್, ಎಸ್ ಅರವಿಂದ್, ಎಚ್ ಎಸ್ ಶರತ್, ರೋನಿತ್ ಮೋರೆ, ಅಬ್ರಾರ್ ಕಾಜಿ, ಬ್ಯಾಟಿಂಗ್ ಕೋಚ್ : ಜೆ ಅರುಣ್ ಕುಮಾರ್, ಬೌಲಿಂಗ್ ಕೋಚ್ : ಮನ್ಸೂರ್ ಆಲಿ ಖಾನ್

ಇತರೆ ಭಾರತ ತಂಡ ಇಂತಿದೆ: ಹರ್ಭಜನ್ ಸಿಂಗ್(ನಾಯಕ),ಜೀವನ್‌ಜೋತ್ ಸಿಂಗ್, ಗೌತಮ್ ಗಂಭೀರ್, ಬಾಬಾ ಅಪರಾಜಿತ್, ಕೇದಾರ್ ಜಾಧವ್, ಅಂಕಿತ್ ಭಾವ್ನೆ ದಿನೇಶ್ ಕಾರ್ತಿಕ್(ವಿಕೆಟ್ ‌ಕೀಪರ್), ಅಮಿತ್ ಮಿಶ್ರಾ, ಪಂಕಜ್ ಸಿಂಗ್, ಅಶೋಕ್ ದಿಂಡಾ, ವರುಣ್ ಅರೋನ್ , ಪರ್ವೀಝ್ ರಸೂಲ್, ಅನುರೀತ್ ಸಿಂಗ್, ನಟರಾಜ್ ಬೆಹ್ರಾ ಹಾಗೂ ಮನ್ ‌ದೀಪ್ ಸಿಂಗ್.

Story first published:  Thursday, February 6, 2014, 20:20 [IST]
English summary
Stuart Binny and HS Sharath have returned to Karnataka squad for the Irani Cup match against Rest of India from Februar 9 to 13 here at M Chinnaswamy Stadium.
ಅಭಿಪ್ರಾಯ ಬರೆಯಿರಿ