Englishहिन्दीമലയാളംதமிழ்తెలుగు

ರಣಜಿ: ಕರ್ನಾಟಕಕ್ಕೆ 'ಮಹಾ' ವಿಕೆಟ್ ಮೇಲೆ ಕಣ್ಣು

Posted by:
Published: Wednesday, January 29, 2014, 13:55 [IST]
 

ಹೈದರಾಬಾದ್, ಜ.29: ರಣಜಿ ಟ್ರೋಫಿಯನ್ನು ಏಳನೇ ಬಾರಿ ಎತ್ತಿಹಿಡಿಯುವ ಕನಸು ಹೊತ್ತಿರುವ ವಿನಯ್ ಕುಮಾರ್ ನೇತೃತ್ವದ ಕರ್ನಾಟಕ ತಂಡ 72 ವರ್ಷಗಳ ನಂತರ ಪ್ರಶಸ್ತಿ ಜಯಿಸುವ ಕನಸು ಕಾಣುತ್ತಿರುವ ಮಹಾರಾಷ್ಟ್ರ ವಿರುದ್ಧ ಮುಖಾಮುಖಿಯಾಗಿದೆ. ಬುಧವಾರ ಇಲ್ಲಿ ಆರಂಭವಾಗಿರುವ ರಣಜಿ ಟ್ರೋಫಿ ಫೈನಲ್ ನಲ್ಲಿ ಟಾಸ್ ಸೋತ ಕರ್ನಾಟಕ ಲಂಚ್ ವೇಳೆಗೆ ಮೂರು ವಿಕೆಟ್ ಉದುರಿಸುವಲ್ಲಿ ಯಶಸ್ವಿಯಾಗಿದೆ.

ಭೋಜನ ವಿರಾಮದ ವೇಳೆಗೆ 95/3 ಗಳಿಸಿದ್ದ ಮಹಾರಾಷ್ಟ್ರ ಇತ್ತೀಚಿನ ವರದಿ ಬಂದಾಗ(ಸಮಯ 1.40) 50 ಓವರ್ ಗಳಲ್ಲಿ 144/4 ಸ್ಕೋರ್ ಮಾಡಿದೆ.

ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣಾದಲ್ಲಿ ಮಹರಾಷ್ಟ್ರದ ನಾಯಕ ರೋಹಿತ್ ಮೋತ್ವಾನಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಕೇದಾರ್ ಜಾಧವ್ 37 ರನ್(44 ಎಸೆತ) ವಿಕೆಟ್ ಅಭಿಮನ್ಯು ಮಿಥುನ್ ಪಾಲಾಯಿತು. ಅಂಡರ್ 19 ವಿಶ್ವಕಪ್ ಟೀಂ ಇಂಡಿಯಾ ಕ್ಯಾಂಪಿನಲ್ಲಿದ್ದ ವಿಜಯ್ ಜೋಲ್ ಕೇವಲ 5 ರನ್ ಗಳಿಸಿ ವಿಕೆಟ್ ಕೀಪರ್ ಗೌತಮ್ ಗೆ ಕ್ಯಾಚಿತ್ತು ಎಸ್ ಅರವಿಂದ್ ಗೆ ಬಲಿಯಾದರು. ಆರಂಭಿಕ ಆಟಗಾರ ಹರ್ಷರ್ ಖಾದಿವಾಲ್(15) ಅವರನ್ನು ನಾಯಕ ವಿನಯ್ ಕುಮಾರ್ ಎಲ್ ಬಿ ಬಲೆಗೆ ಕೆಡವಿಕೊಂಡರು.

 ರಣಜಿ: ಕರ್ನಾಟಕಕ್ಕೆ 'ಮಹಾ' ವಿಕೆಟ್ ಮೇಲೆ ಕಣ್ಣು

ಕರ್ನಾಟಕ ಈ ತನಕ ಆರು ಬಾರಿ ರಣಜಿ ಟ್ರೋಫಿಯನ್ನು ಜಯಿಸಿದ್ದು, 1998-99ರಲ್ಲಿ ಕೊನೆಯ ಬಾರಿ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. 2009-10ರಲ್ಲಿ ಮೈಸೂರಿನಲ್ಲಿ ಮುಂಬೈ ವಿರುದ್ಧ ಕೇವಲ ಆರು ರನ್‌ನಿಂದ ಸೋತು ರನ್ನರ್-ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. ಅಂದು ಆ ತಂಡದಲ್ಲಿದ್ದ 8 ಆಟಗಾರರು ಇಂದಿನ ಪಂದ್ಯದಲ್ಲಿರುವುದು ವಿಶೇಷ.

ಕರ್ನಾಟಕ : ವಿನಯ್‌ಕುಮಾರ್ (ನಾಯಕ), ರಾಬಿನ್ ಉತ್ತಪ್ಪ, ಕೆ.ಎಲ್. ರಾಹುಲ್, ಮನೀಷ್ ಪಾಂಡೆ, ಕರುಣ್ ನಾಯರ್, ಸಿ.ಎಂ. ಗೌತಮ್ (ವಿಕೆಟ್ ಕೀಪರ್), ಶ್ರೇಯಸ್ ಗೋಪಾಲ್, ಅಭಿಮನ್ಯು ಮಿಥುನ್, ಗಣೇಶ್ ಸತೀಶ್, ಅಮಿತ್ ವರ್ಮಾ, ಶ್ರೀನಾಥ್ ಅರವಿಂದ್.


ಮಹಾರಾಷ್ಟ್ರ: ರೋಹಿತ್ ಮೋಟ್ವಾನಿ (ನಾಯಕ), ಹರ್ಷದ್ ಖಡಿವಾಲೆ, ಚಿರಾಗ್ ಖುರಾನಾ, ಕೇದಾರ್ ಜಾಧವ್, ವಿಜಯ್ ಜೋಲ್, ಅಂಕಿತ ಬಾವ್ನೆ, ಸಮದ್ ಫಲ್ಹಾ, ಅನುಪಮ್ ಸಕ್ಲೇಚಾ, ಅಕ್ಷಯ್ ದಾರೇಕರ್, ಡಾಮಿನಿಕ್ ಜೋಸೆಫ್, ಶ್ರೀಕಾಂತ್ ಮುಂಡೆ.

English summary
After losing the toss, Karnataka went into the lunch break as a happy lot as they dismissed three Maharashtra batsmen for 95 on the opening day of the Ranji Trophy final here Wednesday.
ಅಭಿಪ್ರಾಯ ಬರೆಯಿರಿ