Englishहिन्दीമലയാളംதமிழ்తెలుగు

ಇಂಡಿಯನ್ ಹುಲಿಗಳ ಬಗ್ಗು ಬಡಿದ ಕಿವೀಸ್ ಗೆ ಸರಣಿ

Posted by:
Published: Tuesday, January 28, 2014, 14:15 [IST]
 

ಹ್ಯಾಮಿಲ್ಟನ್, ಜ.28: ಪ್ರವಾಸಿ ಭಾರತ ತಂಡದ ವಿರುದ್ಧದ ನಾಲ್ಕನೇ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ ಐದು ಪಂದ್ಯಗಳ ಏಕದಿನ ಸರಣಿಯನ್ನು 0-3 ಅಂತರದಿಂದ ಅತಿಥೇಯ ನ್ಯೂಜಿಲೆಂಡ್ ತಂಡ ಕೈವಶ ಮಾಡಿಕೊಂಡಿದೆ. ರಾಸ್ ಟೇಲರ್ ಆಕರ್ಷಕ ಶತಕದ ನೆರವಿನಿಂದ ಭಾರತ ಒಡ್ಡಿದ್ದ 279 ರನ್ ಗಳ ಮೊತ್ತವನ್ನು 48.1 ಓವರ್ ಗಳಲ್ಲೇ ಕಿವೀಸ್ ದಾಟಿ ಸಂಭ್ರಮಿಸಿತು.

ಸ್ಕೋರ್ ಕಾರ್ಡ್ ನೋಡಿ

ತಮ್ಮ ಏಕದಿನ ವೃತ್ತಿ ಜೀವನದ 9ನೇ ಶತಕ ಸಿಡಿಸಿದ ರಾಸ್ ಟೇಲರ್ 112 ರನ್( 127 ಎ, 15 ಬೌಂ) ಹಾಗೂ ಕೇನ್ ವಿಲಿಯಂ ಸನ್ ಅರ್ಧಶತಕ 60 ರನ್(82 ಎ, 2 ಬೌಂಡರಿ) ಸಮಯೋಚಿತ ಆಟದ ನೆರವಿನಿಂದ ನ್ಯೂಜಿಲೆಂಡ್ ಸುಲಭ ಜಯ ಸಾಧಿಸಿದೆ. ಮೊನಚು ಕಳೆದುಕೊಂಡಿರುವ ಭಾರತದ ಬೌಲಿಂಗ್ ಎದುರು ಕಿವೀಸ್ ಆಟಗಾರರು ಲೀಲಾಜಾಲವಾಗಿ ಆಡಿದರು.

ಇಂಡಿಯನ್ ಹುಲಿಗಳ ಬಗ್ಗು ಬಡಿದ ಕಿವೀಸ್ ಗೆ ಸರಣಿ

ಮಾರ್ಟೀನ್ ಗಪ್ಟಿಲ್ 35 ರನ್ ಗಳಿಸಿದರೆ, ನಾಯಕ ಬ್ರೆಂಡನ್ ಮೆಕಲಮ್ ಅಜೇಯ 49 ರನ್(4 ಬೌಂ, 3 ಸಿಕ್ಸ್) ಗಳಿಸಿ ತಂಡದ ಗೆಲುವಿಗೆ ತಮ್ಮ ಕೊಡುಗೆ ನೀಡಿದರು. ಭಾರತದ ಪದ ಶಮಿ, ಅರೋನ್ ತಲಾ 1 ವಿಕೆಟ್ ಕಿತ್ತರು. ಪ್ರಪ್ರಥಮ ಪಂದ್ಯವಾಡಿದ ಕನ್ನಡಿಗ ಸ್ಟುವರ್ಟ್ ಬಿನ್ನಿಗೆ ಸಿಕ್ಕಿದ್ದು ಕೇವಲ 1 ಓವರ್ ಮಾತ್ರ.

English summary
Ross Taylor hit a fine century as New Zealand defeated India by seven wickets to clinch the five-match ODI series 3-0 here Tuesday(Jan.28).
ಅಭಿಪ್ರಾಯ ಬರೆಯಿರಿ