Englishहिन्दीമലയാളംதமிழ்తెలుగు

ರಣಜಿ: ಕರ್ನಾಟಕ vs ಮಹಾರಾಷ್ಟ್ರ ಫೈನಲ್

Posted by:
Published: Wednesday, January 22, 2014, 18:36 [IST]
 

ಮೊಹಾಲಿ, ಜ.22 : ರಣಜಿ ಟ್ರೋಫಿ ಅಂತಿಮ ಹಣಾಹಣಿಯಲ್ಲಿ ಮಹಾರಾಷ್ಟ್ರ ತಂಡವನ್ನು ಕರ್ನಾಟಕ ಪಡೆ ಎದುರಿಸಲಿದೆ. ಫೈನಲ್ ಪಂದ್ಯಾವಳಿ ಹೈದರಾಬಾದಿನಲ್ಲಿ ಜ.29ರಿಂದ ಆರಂಭಗೊಳ್ಳಲಿದೆ.

ಪಂಜಾಬ್ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದ್ದು, ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದ ಮೇಲೆ ವಿನಯ್ ಕುಮಾರ್ ಪಡೆ ಫೈನಲ್ ತಲುಪಿದೆ. ಪಂಜಾಬ್ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆದ ಪಂದ್ಯದ ನಾಲ್ಕನೇ ದಿನವಾದ ಮಂಗಳವಾರ ಮಂದ ಬೆಳಕಿನ ಕಾರಣ 36.1 ಓವರುಗಳ ಆಟ ಮಾತ್ರ ಸಾಧ್ಯವಾಯಿತು. ಪಂಜಾಬ್ ಮೊದಲ ಇನಿಂಗ್ಸ್ ಮೊತ್ತ 270 ರನ್ ಗಳಿಗೆ ಆಟ ನಿಂತಾಗ ಕರ್ನಾಟಕ ತಂಡ ತನ್ನ ಮೊದಲ ಇನಿಂಗ್ಸ್ನಲ್ಲಿ 5 ವಿಕೆಟ್ ನಷ್ಟಕ್ಕೆ 447 ರನ್ ಗಳಿಸಿ 177ರನ್ ಮುನ್ನಡೆ ಪಡೆದಿತ್ತು.

ರಣಜಿ: ಕರ್ನಾಟಕ vs ಮಹಾರಾಷ್ಟ್ರ ಫೈನಲ್

ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳಾದ ಕರುಣ್ ನಾಯರ್ ಶತಕ (ಅಜೇಯ 151, 296 ಎಸೆತ, 12 ಬೌಂಡರಿ) ಹಾಗೂ ಎಡಗೈ ಬ್ಯಾಟ್ಸ್ ಮನ್ ಅಮಿತ್ ವರ್ಮಾ ಶತಕ (114ರನ್, 265 ಎಸೆತ, 17 ಬೌಂಡರಿ) ನಾಯಕ ವಿನಯ್ ಕುಮಾರ್ ಬೌಲಿಂಗ್ ಕರ್ನಾಟಕವನ್ನು ಫೈನಲ್ ಹಾದಿ ಸುಗಮಗೊಳಿಸಿತು.

2009-10ರಲ್ಲಿ ಮೈಸೂರಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮುಂಬೈ ವಿರುದ್ಧ ಸೋಲು ಕಂಡಿದ್ದ ಕರ್ನಾಟಕ ಈ ಬಾರಿ ಪ್ರಶಸ್ತಿ ಗೆಲ್ಲುವ ಫೇವರೀಟ್ ಎನಿಸಿದೆ. ಕರ್ನಾಟಕ ಕೋಚ್ ಗಳಾದ ಜೆ ಅರುಣ್ ಕುಮಾರ್ (ಬ್ಯಾಟಿಂಗ್) ಹಾಗೂ ಮುನ್ಸೂರ್ ಅಲಿ ಖಾನ್ (ಬೌಲಿಂಗ್) ಅವರು ಈ ಹಿಂದೆ ರಣಜಿ ಗೆದ್ದ ತಂಡದ ಸದಸ್ಯರಾಗಿದ್ದರು ಈಗ ಕೋಚ್ ಗಳಾಗಿ ಪ್ರಶಸ್ತಿ ಗೆಲ್ಲಿಸಿಕೊಡುವ ಉತ್ಸಾಹದಲ್ಲಿದ್ದಾರೆ.ಕರ್ನಾಟಕ ಹಾಗೂ ಮಹಾರಾಷ್ಟ್ರ ಎರಡು ದಶಕಗಳ ನಂತರ ರಣಜಿ ಫೈನಲ್ ತಲುಪಿದ್ದು, ರೋಚಕ ಪಂದ್ಯವನ್ನು ನಿರೀಕ್ಷಿಸಬಹುದು.

English summary
Karnataka will meet Maharashtra in the final of the Ranji Trophy starting from January 29 in Hyderabad.
ಅಭಿಪ್ರಾಯ ಬರೆಯಿರಿ