Englishहिन्दीമലയാളംதமிழ்తెలుగు

ಭಾರತಕ್ಕೆ ಹೀನಾಯ ಸೋಲುಣಿಸಿದ ಕಿವೀಸ್

Posted by:
Published: Wednesday, January 22, 2014, 17:58 [IST]
 

ಹ್ಯಾಮಿಲ್ಟನ್, ಜ.22: ಟೀಂ ಇಂಡಿಯಾ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡಕ್ಕಿಂತ ಹೆಚ್ಚಿನ ರನ್ ಗಳಿಸಿದರೂ ಪಂದ್ಯ ಸೋತಿದೆ. ಅರೇ ಇದು ಹೇಗೆ ಸಾಧ್ಯ ಎಂದು ಹುಬ್ಬೇರಿಸಬೇಡಿ. ಡಕ್ ವರ್ಥ್/ ಲೂಯಿಸ್ ಪದ್ಧತಿಗೆ ಶರಣು ಶರಣಾರ್ಥಿ ಎನ್ನಿ. ಮಳೆ, ಮಂದ ಬೆಳಕಿನ ಕಾರಣ 42 ಓವರ್ ಗಳಿಗೆ ಪಂದ್ಯ ಎಂದು ನಿಗದಿಯಾದಾಗಲೇ ಶನಿ ಧೋನಿ ಬೆನ್ನು ಏರಿದ್ದ. 271/7 ರನ್ ಗಳಿಸಿದ್ದ ಕಿವೀಸ್ ತಂಡ ಕೊನೆ ಡಿ/ಎಲ್ ಪದ್ಧತಿಯಿಂದಾಗಿ 297 ಟಾರ್ಗೆಟ್ ಆಗಿ ಬಿಟ್ಟಿತು.

ವಿರಾಟ್ ಕೊಹ್ಲಿ ಹಾಗೂ ಎಂಎಸ್ ಧೋನಿ ಅವರು ಅರ್ಧ ಶತಕ ಬಾರಿಸಿದರೂ ಗೆಲುವು ಸಾಧ್ಯವಾಗಲಿಲ್ಲ. 41.3 ಓವರ್ ಗಳಲ್ಲಿ 277/9 ಸ್ಕೋರ್ ಮಾಡಿದ ಭಾರತಕ್ಕೆ ಮಳೆರಾಯ ಮತ್ತೆ ಅಡ್ಡಿಪಡಿಸಿಬಿಟ್ಟ. ಸ್ಕೋರ್ ಕಾರ್ಡ್ ನೋಡಿದರೆ ಕಿವೀಸ್ 271 ರನ್ ಭಾರತ 277 ರನ್ ಆದರೆ, ಗೆದ್ದಿದ್ದು ಕಿವೀಸ್ ಹೇಗಿದೆ ನೋಡಿ ಡಿ/ಎಲ್ ಪದ್ಧತಿ ಲೆಕ್ಕಾಚಾರ.

ಭಾರತಕ್ಕೆ ಹೀನಾಯ ಸೋಲುಣಿಸಿದ ಕಿವೀಸ್

ಎರಡನೇ ಪಂದ್ಯವನ್ನು 15 ರನ್ ಗಳಿಂದ ಗೆದ್ದ ಕಿವೀಸ್ ಪಡೆ ಸರಣಿಯಲ್ಲಿ 2-0 ಅಂತರ ಮುನ್ನಡೆ ಪಡೆದುಕೊಂಡಿದೆ. ಇನ್ನೂ ಮೂರು ಪಂದ್ಯಗಳು ಬಾಕಿ ಉಳಿದಿದೆ. ಈ ಪಂದ್ಯದ ಸೋಲಿನಿಂದ ಏಕದಿನ ಕ್ರಿಕೆಟ್ ನಲ್ಲಿ ಭಾರತ ನಂಬರ್ ಒನ್ ಸ್ಥಾನ ಕೂಡಾ ಕಳೆದುಕೊಂಡಿದೆ. ಆಸ್ಟ್ರೇಲಿಯಾಗೆ ನಂಬರ್ ಒನ್ ಪಟ್ಟ ಬಿಟ್ಟುಕೊಟ್ಟಿದೆ.

ಪಂದ್ಯದ ಸಂಕ್ಷಿಪ್ತ ಸ್ಖೊರ್ :

ನ್ಯೂಜಿಲೆಂಡ್ 42 ಓವರ್ 271/7 (ಕೇನ್ ವಿಲಿಯಮ್ಸನ್ 77, ರಾಸ್ ಟೇಲರ್ 57, ಕೋರಿ ಆಂಡರ್ಸನ್ 44, ಮಾರ್ಟಿನ್ ಗುಪ್ಟಿಲ್ 44 ರನ್ - ಮೊಹಮ್ಮದ್ ಶಮಿ 55/3) ಭಾರತ 41.3 ಓವರ್ 277/9 (ಡಿ/ಎಲ್ ಮೂಲಕ ಟಾರ್ಗೆಟ್ 42 ಓವರ್ ನಲ್ಲಿ 297 ರನ್) (ವಿರಾಟ್ ಕೊಹ್ಲಿ 78, ಎಂಎಸ್ ಧೋನಿ 56, ಅಜಿಂಕ್ಯ ರಹಾನೆ 36, ಸುರೇಶ್ ರೈನಾ 35 ರನ್ - ಟಿಮ್ ಸೌಥೀ 72/4, ಕೋರಿ ಆಂಡರ್ಸನ್ 67/3)

ಪಂದ್ಯದ ಮುಖ್ಯಾಂಶಗಳು ನಿರೀಕ್ಷಿಸಿ..

English summary
India scored more runs than New Zealand in the second One Day International but still ended up on the losing side thanks to rain and Duckworth/Lewis method.
ಅಭಿಪ್ರಾಯ ಬರೆಯಿರಿ