Englishहिन्दीമലയാളംதமிழ்తెలుగు

ಮಾ.2: ಭಾರತ- ಪಾಕಿಸ್ತಾನ ಹಣಾಹಣಿ

Posted by:
Updated: Thursday, January 16, 2014, 17:27 [IST]
 

ಮಾ.2: ಭಾರತ- ಪಾಕಿಸ್ತಾನ ಹಣಾಹಣಿ
 

ಢಾಕಾ, ಜ.16: ಮುಂಬರುವ ಏಷ್ಯಾ ಕಪ್ ವೇಳಾಪಟ್ಟಿ ಹೊರಬಿದ್ದಿದೆ. ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಫೆ.26ರಂದು ಆತಿಥೇಯ ಬಾಂಗ್ಲಾದೇಶದ ವಿರುದ್ಧ ಆಡಲಿದೆ. ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಮಾ.2ರಂದು ಕಾದಾಡಲಿದೆ.

ಐದು ರಾಷ್ಟ್ರಗಳ 50 ಓವರ್ ಗಳ ಅಂತಾರಾಷ್ಟ್ರೀಯ ಟೂರ್ನಿಮೆಂಟ್ ಬಾಂಗ್ಲಾದೇಶದ ವಿವಿಧ ಕ್ರೀಡಾಂಗಣಗಳಲ್ಲಿ ಫೆ.25 ರಿಂದ ಮಾ.8ರ ತನಕ ನಡೆಯಲಿದೆ ಎಂದು ಏಷ್ಯಾದ ಕ್ರಿಕೆಟ್ ಕೌನ್ಸಿಲ್ (ACC) ಗುರುವಾರ ಪ್ರಕಟಿಸಿದೆ.

ಏಷ್ಯಾ ಕಪ್ 2014ರ ಆರಂಭ ಪಂದ್ಯದಲ್ಲಿ ಪಾಕಿಸ್ತಾನ ತಂಡ ಶ್ರೀಲಂಕಾ ತಂಡವನ್ನು ಫತುಲ್ಲಾ ಎಂಬಲ್ಲಿ ಎದುರಿಸಲಿದೆ. 2012ರಲ್ಲಿ ಕಳೆದ ಬಾರಿ ಏಷ್ಯಾ ಕಪ್ ನಡೆಸಲಾಗಿತ್ತು. ಪಾಕಿಸ್ತಾನ ಕಪ್ ಗೆದ್ದಿತ್ತು. ಅದೇ ಟೂರ್ನಿಯಲ್ಲಿ ಸಚಿನ್ ತೆಂಡೂಲ್ಕರ್ ಅವರು ತಮ್ಮ ವೃತ್ತಿ ಜೀವನದ 100ನೇ ಶತಕವನ್ನು ಬಾಂಗ್ಲಾದೇಶ ವಿರುದ್ಧ ದಾಖಲಿಸಿದ್ದರು.

ಏಷ್ಯಾ ಕಪ್ 2014 ವೇಳಾಪಟ್ಟಿ ಇಂತಿದೆ:
* ಫೆ. 25 (ಮಂಗಳವಾರ): ಪಾಕಿಸ್ತಾನ ವಿರುದ್ಧ ಶ್ರೀಲಂಕಾ, ಫಾತುಲ್ಲಾ

* ಫೆ. 26 (ಬುಧವಾರ) : ಭಾರತ ವಿರುದ್ಧ ಬಾಂಗ್ಲಾದೇಶ, ಫಾತುಲ್ಲಾ
* ಫೆ. 27 (ಗುರುವಾರ) : ಪಾಕಿಸ್ತಾನ ವಿರುದ್ಧ ಅಫ್ಘಾನಿಸ್ತಾನ, ಫಾತುಲ್ಲಾ
* ಫೆ. 28 (ಶುಕ್ರವಾರ) ಭಾರತ ವಿರುದ್ಧ ಶ್ರೀಲಂಕಾ, ಫಾತುಲ್ಲಾ
* ಮಾ. 1 (ಶನಿವಾರ) : ಬಾಂಗ್ಲಾದೇಶ ವಿರುದ್ಧ ಅಫ್ಘಾನಿಸ್ತಾನ, ಫಾತುಲ್ಲಾ

* ಮಾ. 2 (ಭಾನುವಾರ) : ಪಾಕಿಸ್ತಾನ ವಿರುದ್ಧ ಭಾರತ, ಮಿರ್ ಪುರ್
* ಮಾ. 3 (ಸೋಮವಾರ) : ಅಫ್ಘಾನಿಸ್ತಾನ ವಿರುದ್ಧ ಶ್ರೀಲಂಕಾ, ಢಾಕಾ
* ಮಾ. 4 (ಮಂಗಳವಾರ) : ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ, ಢಾಕಾ
* ಮಾ. 5 (ಬುಧವಾರ) : ಅಫ್ಘಾನಿಸ್ತಾನ ವಿರುದ್ಧ ಭಾರತ, ಢಾಕಾ
* ಮಾ. 6 (ಗುರುವಾರ) : ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ, ಢಾಕಾ
* ಮಾ. 8 (ಶನಿವಾರ) : ಫೈನಲ್, ಮಿರ್ ಪುರ್
ದಟ್ಸ್ ಕ್ರಿಕೆಟ್

Story first published:  Thursday, January 16, 2014, 17:06 [IST]
English summary
Asia Cup 2014: India to face Pakistan on March 2: India will open their Asia Cup 2014 campaign against hosts Bangladesh on February 26.
ಅಭಿಪ್ರಾಯ ಬರೆಯಿರಿ