Englishहिन्दीമലയാളംதமிழ்తెలుగు

ಬೆಂಗಳೂರಿನಲ್ಲೇ ನಡೆಯಲಿದೆ ಐಪಿಎಲ್7 ಹರಾಜು

Posted by:
Updated: Monday, January 13, 2014, 18:47 [IST]
 

ಬೆಂಗಳೂರು, ಜ.13:ಕುತೂಹಲ ಕೆರಳಿಸಿರುವ ಇಂಡಿಯನ್ ಪ್ರಿಮಿಯರ್ ಲೀಗ್ ನ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ಫೆಬ್ರವರಿ 12 ಹಾಗೂ 13 ರಂದು ನಡೆಯಲಿದೆ. ಈ ವರೆಗೂ ಸುಮಾರು 24 ಆಟಗಾರರನ್ನು ಫ್ರಾಂಚೈಸಿಗಳು ಉಳಿಸಿಕೊಂಡಿದ್ದರೆ, ಡೆಲ್ಲಿ ಡೇರ್ ಡೆವಿಲ್ಸ್ ಮಾತ್ರ ಯಾವ ಸ್ಟಾರ್ ಆಟಗಾರರನ್ನು ಉಳಿಸಿಕೊಂಡಿಲ್ಲ.

ಒಂದು ಫ್ರಾಂಚೈಸಿ 5 ಹಳೆ ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ಪ್ರತಿ ತಂಡ 27 ಮಂದಿ ಆಟಗಾರರನ್ನು ಹೊಂದಬಹುದಾಗಿದ್ದು 16 ಆಟಗಾರರು ಕನಿಷ್ಠ ಇರಲೇ ಬೇಕು 9 ವಿದೇಶಿ ಆಟಗಾರರನ್ನು ಸೇರಿಸಿಕೊಳ್ಳಬಹುದು. ತಂಡಗಳ ವರಮಾನ 60 ಕೋಟಿ ರು ಪ್ರತಿ ವರ್ಷಕ್ಕೆ ಎಂದು ನಿಗಗಿ ಪಡಿಸಲಾಗಿದೆ.

ಬೆಂಗಳೂರಿನಲ್ಲೇ ನಡೆಯಲಿದೆ ಐಪಿಎಲ್7 ಹರಾಜು

ಎರಡು ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್ ತಂಡ ಎಲ್ಲಾ ಐದು ಆಟಗಾರರನ್ನು ಉಳಿಸಿಕೊಂಡಿದೆ. ಒಟ್ಟಾರೆ 24 ಹಳೆ ಆಟಗಾರರು ಅದೇ ತಂಡಗಳಲ್ಲಿ ಆಡಲಿದ್ದಾರೆ. ಈ ಪೈಕಿ 14 ಭಾರತೀಯ ಆಟಗಾರ(ಮೂವರು ಹೊಸಬರು) 10 ಮಂದಿ ವಿದೇಶಿ ಆಟಗಾರರಾಗಿದ್ದಾರೆ. ಡೆಲ್ಲಿ ಡೇರ್ ಡೆವಿಲ್ಸ್ ತಂಡ ಯಾವುದೇ ಹಳೆ ಆಟಗಾರರನ್ನು ಉಳಿಸಿಕೊಂಡಿಲ್ಲ.

ಹಳೆ ತಂಡದಲ್ಲೇ ಉಳಿದ ಆಟಗಾರರ ವಿವರ:
ಚೆನ್ನೈ ಸೂಪರ್ ಕಿಂಗ್ಸ್ (5)
* ಎಂಎಸ್ ಧೋನಿ, ಆರ್ ಅಶ್ವಿನ್, ರವೀಂದ್ರ ಜಡೇಜ, ಡ್ವಾನೆ ಬ್ರಾವೋ, ಸುರೇಶ್ ರೈನಾ

ಮುಂಬೈ ಇಂಡಿಯನ್ಸ್ (5)
* ರೋಹಿತ್ ಶರ್ಮ, ಲಸಿಂಗ್ ಮಾಲಿಂಗ, ಅಂಬಟಿ ರಾಯುಡು, ಹರ್ಭಜನ್ ಸಿಂಗ್, ಕಿರೋನ್ ಪೊಲ್ಲಾರ್ಡ್

ರಾಜಸ್ಥಾನ್ ರಾಯಲ್ಸ್ (5)
* ಶೇನ್ ವ್ಯಾಟ್ಸನ್, ಜೇಮ್ಸ್ ಫಾಲ್ಕರ್, ಸಂಜು ಸ್ಯಾಮ್ಸನ್, ಸ್ಟುವರ್ಟ್ ಬಿನ್ನಿ, ಅಜಿಂಕ್ಯ ರಹಾನೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು(3)
* ವಿರಾಟ್ ಕೊಹ್ಲಿ, ಕ್ರಿಸ್ ಗೇಲ್, ಎಬಿ ಡಿ ವಿಲ್ಲೆಯರ್ಸ್

ಸನ್ ರೈಸರ್ಸ್ ಹೈದರಾಬಾದ್ (2)
* ಡೇಲ್ ಸ್ಟೇನ್, ಶಿಖರ್ ಧವನ್

ಕಿಂಗ್ಸ್ XI ಪಂಜಾಬ್(2)
* ಡೇವಿಡ್ ಮಿಲ್ಲರ್, ಮನ್ನನ್ ವೋಹ್ರಾ

ಕೋಲ್ಕತ್ತಾ ನೈಟ್ ರೈಡರ್ಸ್(2)
* ಗೌತಮ್ ಗಂಭೀರ್, ಸುನೀಲ್ ನಾರಾಯಣ್

Story first published:  Monday, January 13, 2014, 18:40 [IST]
English summary
The players auction for the seventh edition of the Indian Premier League (IPL 7) will be held in Bangalore on February 12 and 13 (Wednesday and Thursday). Here are the list of players who are retained
ಅಭಿಪ್ರಾಯ ಬರೆಯಿರಿ