Englishहिन्दीമലയാളംதமிழ்తెలుగు

ಕರ್ನಾಟಕ ವೇಗಿಗಳ ದಾಳಿಗೆ ಉ.ಪ್ರ ತತ್ತರ

Posted by:
Updated: Thursday, January 9, 2014, 18:25 [IST]
 

ಬೆಂಗಳೂರು, ಜ.9: ಕರ್ನಾಟಕ ಮೂರು ಭರ್ಜರಿ ಶತಕ ಹಾಗೂ ವೇಗಿಗಳ ಕರಾರುವಾಕ್ ಬೌಲಿಂಗ್ ನೆರವಿನಿಂದ ಉತ್ತರ ಪ್ರದೇಶ ವಿರುದ್ಧ ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹಿಡಿತ ಸಾಧಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ 349 ರನ್ ಕಲೆ ಹಾಕಿದ ಕರ್ನಾಟಕ ತಂಡಕ್ಕೆ ಉತ್ತರವಾಗಿ ಆರ್ ಪಿ ಸಿಂಗ್ ನೇತೃತ್ವದ ತಂಡ ಕರ್ನಾಟಕದ ವೇಗಿಗಳ ದಾಳಿಗೆ ತತ್ತರಿಸಿಬಿಟ್ಟಿತು.

ಅಭಿಮನ್ಯು ಮಿಥುನ್ (4/70), ನಾಯಕ ಆರ್ ವಿನಯ್ ಕುಮಾರ್ (3/49) ಎಚ್ ಎಸ್ ಶರತ್ (1/20), ರಾಬಿನ್ ಉತ್ತಪ್ಪ (1/0) ಬೌಲಿಂಗ್ ನೆರವಿನಿಂದ ಉತ್ತರ ಪ್ರದೇಶ ತಂಡವನ್ನು ದಿನದ ಅಂತ್ಯಕ್ಕೆ 221/9 ಸ್ಕೋರಿಗೆ ನಿಯಂತ್ರಿಸಿದರು. ಉತ್ತರ ಪ್ಪ್ರದೇಶಕ್ಕೆ ಮುನ್ನಡೆ ಪಡೆಯಲು ಇನ್ನೂ 128 ರನ್ ಗಳಿಸಬೇಕಾಗಿದೆ. ಒಟ್ಟಾರೆ ಎರಡನೇ ದಿನ 14 ವಿಕೆಟ್ ಗಳು ವೇಗಿಗಳ ಪಾಲಿಗಿದ್ದು ವಿಶೇಷ.

ಕರ್ನಾಟಕ ವೇಗಿಗಳ ದಾಳಿಗೆ ಉ.ಪ್ರ ತತ್ತರ

ಪ್ರಥಮ ಇನ್ನಿಂಗ್ಸ್ ಆರಂಭಿಸಿದ ಆರ್.ಪಿ.ಸಿಂಗ್ ನೇತೃತ್ವದ ಉತ್ತರ ಪ್ರದೇಶ ತಂಡ ಮಿಥುನ್ ದಾಳಿಗೆ ತತ್ತರಿಸಿ ಆರಂಭದಲ್ಲೇ 5 ವಿಕೆಟ್ ‌ಗಳನ್ನು ಕಳೆದುಕೊಂಡಿತು.

ಕರ್ನಾಟಕ ಮೊದಲ ಇನಿಂಗ್ಸ್ 349/10 (ರಾಬಿನ್ ಉತ್ತಪ್ಪ 100, ಕರುಣ್ ನಾಯರ್ 100, ಸಿಎಂ ಗೌತಮ್ 100, ಅಬ್ರಾರ್ ಕಾಜಿ 23 ರನ್ - ಅಮಿತ್ ಮಿಶ್ರಾ 106/6, ಅಂಕಿತ್ ರಾಜಪೂತ್ 49/2, ಆಲಿ ಮುರ್ತಾಜಾ 92/2)

ಉತ್ತರಪ್ರದೇಶ ಮೊದಲ ಇನಿಂಗ್ಸ್ 221/9 (ಪರ್ವಿಂದರ್ ಸಿಂಗ್ 92, ಪೀಯುಶ್ ಚಾವ್ಲಾ 56, ತನ್ಮಯ್ ಶ್ರೀವಾಸ್ತವ 32 ರನ್ - ಅಭಿಮನ್ಯು ಮಿಥುನ್ 70/4, ವಿನಯ್ ಕುಮಾರ್ 49/3)

ಉತ್ತರಪ್ರದೇಶ ತಂಡ ಕೇವಲ 65 ರನ್ ಗಳ ಅಂತರದಲ್ಲಿ 5 ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡು ತತ್ತರಿಸಿತ್ತು. ಆರಂಭಿಕ ಇನ್ನಿಂಗ್ಸ್ ನ ಮುನ್ನಡೆಯೊಂದಿಗೆ ಕ್ವಾರ್ಟರ್ ಫೈನಲ್ ಪಂದ್ಯವನ್ನು ಗೆದ್ದುಕೊಳ್ಳುವ ಹುಮ್ಮಸ್ಸಿನಲ್ಲಿ ವಿನಯ್ ‌ಕುಮಾರ್ ಪಡೆ ಇದೆ.

ಮೊದಲ ದಿನದ ಅಂತ್ಯದಲ್ಲಿ ರಾಬಿನ್‌ಉತ್ತಪ್ಪ ಹಾಗೂ ಕೆ.ನಾಯರ್ ಅವರ ಶತಕಗಳ ನೆರವಿನಿಂದ ಉತ್ತಮ ಮೊತ್ತವನ್ನು ಕೂಡಿ ಹಾಕಿದ್ದ ಕರ್ನಾಟಕ ಇಂದು ಸಿ.ಎಂ.ಗೌತಮ್ ಅವರ (100) ಶತಕದ ಹೊರತಾಗಿಯೂ 349 ರನ್ ‌ಗಳಿಗೆ ತನ್ನೆಲ್ಲಾ ವಿಕೆಟ್ ಒಪ್ಪಿಸಿತು. ಕರ್ನಾಟಕದ ಇನ್ನಿಂಗ್ಸ್‌ನಲ್ಲಿ ಐವರು ಶೂನ್ಯ ಸುತ್ತಿದ್ದು ವಿಶೇಷವಾಗಿತ್ತು.ಉತ್ತರ ಪ್ರದೇಶ ಪರ ವೇಗಿ ಅಮಿತ್ ಮಿಶ್ರಾ 6 ಹಾಗೂ ರಜಪೂತ್ ಮತ್ತು ಮುರ್ತೋಜ ತಲಾ ಎರಡು ವಿಕೆಟ್ ಗಳಿಸಿದರು. ಆರ್ ಪಿ ಸಿಂಗ್ ಗಾಯಗೊಂಡಿರುವುದು ಉತ್ತರಪ್ರದೇಶಕ್ಕೆ ಮುಳುವಾಯಿತು.

Story first published:  Thursday, January 9, 2014, 18:15 [IST]
English summary
Pacemen put Karnataka in command against Uttar Pradesh on the second day of the five-day Ranji Trophy quarter-final here Thursday.
ಅಭಿಪ್ರಾಯ ಬರೆಯಿರಿ