Englishहिन्दीമലയാളംதமிழ்తెలుగు

ಕರ್ನಾಟಕಕ್ಕೆ ರಾಬಿನ್, ಕರುಣ್ ಶತಕದಾಸರೆ

Posted by:
Updated: Thursday, January 9, 2014, 18:28 [IST]
 

ಬೆಂಗಳೂರು, ಜ.8: ಗಾಯಗೊಂಡು ತಂಡದಿಂದ ಒಂದು ತಿಂಗಳ ಕಾಲ ದೂರವಿದ್ದ ಸ್ಟಾರ್ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ ಅವರು ಮತ್ತೆ ಘರ್ಜಿಸಿದ್ದಾರೆ. ಉತ್ತರ ಪ್ರದೇಶ ವಿರುದ್ಧ ನಡೆದಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕದ ಪರ ಮೊದಲ ದಿನವೇ ರಾಬಿನ್ ಕರುಣ್ ಶತಕ ಗಳಿಸಿದ್ದಾರೆ

ಡಿಸೆಂಬರ್ 1 ರಂದು ಕಟಕ್ ನಲ್ಲಿ ಒಡಿಶಾ ವಿರುದ್ಧ ಪಂದ್ಯವಾಡಿದ್ದ ರಾಬಿನ್ ಉತ್ತಪ್ಪ ಹೊಸ ವರ್ಷದ ಆರಂಭವನ್ನು ಉತ್ತಮವಾಗಿ ಆಚರಿಸಿದ್ದಾರೆ. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭರವಸೆ ಆಟಗಾರ ಕೆಎಲ್ ರಾಹುಲ್ ಬೇಗನೇ ಪೆವಿಲಿಯನ್ ಮರಳಿದ ಮೇಲೆ ಕರ್ನಾಟಕ ತಂಡದ ಸ್ಕೋರ್ ಹೆಚ್ಚಿಸುವ ಜವಾಬ್ದಾರಿ ಹೊತ್ತ ರಾಬಿನ್ 100ರನ್ (230 ನಿಮಿಷ, 160 ಎಸೆತ, 19 X4) ಗಳಿಸಿ ಔಟಾದರು.

ಕರ್ನಾಟಕಕ್ಕೆ ರಾಬಿನ್, ಕರುಣ್ ಶತಕದಾಸರೆ

ಉತ್ತಪ್ಪ ಶತಕ ಹಾಗೂ ಸಿಎಂ ಗೌತಮ್, ಕರುಣ್ ನಾಯರ್ ಅರ್ಧಶತಕದ ನೆರವಿನಿಂದ ಕರ್ನಾಟಕ ಮೊದಲ ದಿನ ಮೊದಲ ಇನ್ನಿಂಗ್ಸ್ ನಲ್ಲಿ 75 ಓವರ್ ಗಳ ನಂತರ 230/4 ಗಳಿಸಿದೆ. ರಾಬಿನ್ ವಿಕೆಟ್ ಪತನ ನಂತರ ಇನ್ನಿಂಗ್ಸ್ ಕಟ್ಟಿದ ಕರುಣ್ ನಾಯರ್ ಹಾಗೂ ಸಿಎಂ ಗೌತಮ್ ತಂಡದ ಮೊತ್ತವನ್ನು ಹೆಚ್ಚಿಸಿದರು. [ಎರಡನೇ ದಿನದ ವರದಿ ಓದಿ]

ದಿನದ ಅಂತ್ಯಕ್ಕೆ ಕರ್ನಾಟಕ 297/5 ಸ್ಕೋರ್
ಮಾಡಿ ಸುಸ್ಥಿತಿ ತಲುಪಿದೆ. ಸಿಎಂ ಗೌತಮ್ 89ರನ್ ಗಳಿಸಿ ನಾಟೌಟ್ ಆಗಿದ್ದರೆ, ಕರುಣ್ ನಾಯರ್ ಅವರು 100 ರನ್ (14x4s, 1x6s) ಗಳಿಸಿ ದಿನದ ಕೊನೆಯಲ್ಲಿ ವಿಕೆಟ್ ಒಪ್ಪಿಸಿ ಬಿಟ್ಟರು.

ದಿನದ ಆರಂಭದಲ್ಲಿ ಉತ್ತರಪ್ರದೇಶ ನಾಯಕ ಆರ್ ಪಿ ಸಿಂಗ್ ಅವರು ಟಾಸ್ ಗೆದ್ದರೂ ಫೀಲ್ಡಿಂಗ್ ಆಯ್ಕೆಮಾಡಿಕೊಂಡಿದ್ದು ಫಲ ನೀಡಿತು. ಕರ್ನಾಟಕ 15/3 ಸ್ಕೋರಿಗೆ ಕುಸಿಯಿತು. 28 ವರ್ಷ ವಯಸ್ಸಿನ ಉತ್ತಪ್ಪ ಅವರು 14ನೇ ಪ್ರಥಮ ದರ್ಜೆ ಶತಕ ಸಿಡಿಸಿ ಕರ್ನಾಟಕಕ್ಕೆ ಬಲ ತಂದರು.

ಸೀಸನ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಕೆಎಲ್ ರಾಹುಲ್ ಮೊದಲ ಬಾರಿಗೆ ಬೇಗನೇ ಕೈ ಕೊಟ್ಟರು. ನಂತರ ಬಂದ ಪಿ ಸಮರ್ಥ್ ಹಾಗೂ ಮನೀಶ್ ಪಾಂಡೆ ಯಾವುದೇ ಸ್ಕೋರ್ ಮಾಡದೆ ಪೆವಿಲಿಯನ್ ಗೆ ಮರಳಿದ್ದು ಆತಂಕ ಮೂಡಿಸಿತ್ತು. ಶತಕ ಸಿಡಿಸಿದ ಉತ್ತಪ್ಪ ಕೊನೆಗೆ ಎಡಗೈ ಸ್ಪಿನ್ನರ್ ಅಲಿ ಮುರ್ತಜಾ ಬೌಲಿಂಗ್ ನಲ್ಲಿ ಸ್ಟಂಪ್ ಔಟ್ ಆದರು. ಬೆಂಗಳೂರಿನ ಹಸಿರು ಪಿಚ್ ನಾಳೆ ಬೆಳಗ್ಗೆ ಕೂಡಾ ವೇಗಿಗಳಿಗೆ ಸಹಾಯಕವಾಗುವ ಲಕ್ಷಣಗಳು ಕಂಡು ಬಂದಿದೆ.

ದಟ್ಸ್ ಕ್ರಿಕೆಟ್

Story first published:  Wednesday, January 8, 2014, 16:10 [IST]
English summary
For more than a month, Robin Uthappa was sidelined due to a hamstring injury. And the day he returned to cricket, he proved what he is capable of. The right-handed opener rescued Karnataka with a superb century on the first day of the Ranji Trophy quarter-final against Uttar Pradesh here today.
ಅಭಿಪ್ರಾಯ ಬರೆಯಿರಿ