Englishहिन्दीമലയാളംதமிழ்తెలుగు

ಇಂಗ್ಲೆಂಡಿಗೆ ಹಿಗ್ಗಾ ಮುಗ್ಗಾ ಬೈದ ಬಾಯ್ಕಾಟ್

Posted by:
Updated: Monday, January 6, 2014, 17:20 [IST]
 

ಸಿಡ್ನಿ, ಜ.6:- ಪ್ರತಿಷ್ಠಿತ ಆಷಸ್ ಸರಣಿಯಲ್ಲಿ ಮೈಕೆಲ್ ಕ್ಲಾರ್ಕ್ ನೇತೃತ್ವದ ಪಡೆ ಪಟ್ಟು ಬಿಡದೆ ಜಯದ ಕೇಕೆ ಹಾಕಿದ್ದು, 5-0 ಅಂತರದಿಂದ ಇಂಗ್ಲೆಂಡ್ ತಂಡ ವೈಟ್ ‌ವಾಷ್ ಆಗಿದೆ. ಇದು ಅತ್ಯಂತ ಹೀನಾಯ ಸೋಲು, ಅತ್ಯಂತ ಕಳಪೆ ಪ್ರದರ್ಶನ ಎಂದು ಮಾಜಿ ನಾಯಕ ಜೆಫ್ರಿ ಬಾಯ್ಕಾಟ್ ಅಭಿಪ್ರಾಯಪಟ್ಟಿದ್ದಾರೆ.

ಸಂಡೇ ಟೆಲಿಗ್ರಾಫ್ ನ ತಮ್ಮ ಅಂಕಣದಲ್ಲಿ ಇಂಗ್ಲೆಂಡ್ ತಂಡವನ್ನು ಹಿಗ್ಗಾ ಮುಗ್ಗಾ ಬೈದಿರುವ ಬಾಯ್ಕಾಟ್, ಸಿಡ್ನಿ ಪಂದ್ಯ ಕಳೆದುಕೊಂಡಿದ್ದು ಅಭಿಮಾನಿಗಳಿಗೆ ತೀವ್ರ ನೋವುಂಟು ಮಾಡಿದೆ. ಮೈಕಲ್ ಕ್ಲಾರ್ಕ್ ಅವರ ನಾಯಕತ್ವದಲ್ಲಿ ಆಸೀಸ್ ತಂಡ ಸಮರ್ಥವಾಗಿ ಆಡಿ ಅರ್ಹ ಜಯ ಸಂಪಾದಿಸಿದೆ ಎಂದು ಬಾಯ್ಕಾಟ್ ಹೇಳಿದ್ದಾರೆ.

ಇಂಗ್ಲೆಂಡಿಗೆ ಹಿಗ್ಗಾ ಮುಗ್ಗಾ ಬೈದ ಬಾಯ್ಕಾಟ್

ಆಸ್ಟ್ರೇಲಿಯಾದ ತಂಡದಲ್ಲೂ ನ್ಯೂನ್ಯತೆಗಳಿತ್ತು. ಮಿಚೆಲ್ ಜಾನ್ಸನ್ ಬಿಟ್ಟರೆ ಸಮರ್ಥ ವೇಗಿ ನನಗೆ ಕಾಣಿಸಿಲ್ಲ. ಆದರೆ, ಇಂಗ್ಲೆಂಡ್ ತಂಡ 200 ರನ್ ಗಡಿ ದಾಟಲು ಸಾಧ್ಯವಾಗದಿರುವುದು ಘೋರ ಎಂದಿದ್ದಾರೆ. 2006-07 ರ ವೈಟ್ ವಾಶ್ ಗಿಂತ ಈ ಸರಣಿಯಲ್ಲಿ ಆಗಿರುವ ಹೀನಾಯ ಸೋಲು ಇಂಗ್ಲೆಂಡ್ ತಂಡಕ್ಕೆ ದೊಡ್ಡ ಪಾಠವಾಗಲಿದೆ ಎಂದರು.

ಸಿಡ್ನಿಯಲ್ಲಿ ನಡೆದ ಅಂತಿಮ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ 281 ರನ್ ಗಳ ಅಂತರದಲ್ಲಿ ಭಾರೀ ಗೆಲುವು ಕಂಡಿದ್ದು, ಈ ಮೂಲಕ ಆಷಸ್ ಸರಣಿ ಗೆದ್ದ ನಾಯಕ ಎನ್ನುವ ಸಾಧನೆಗೆ ಮೈಕೆಲ್ ಕ್ಲಾರ್ಕ್ ಪಾತ್ರರಾಗಿದ್ದಾರೆ. ಅಂತಿಮ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ತಂಡ 326 ರನ್ ಗಳಿಸಿತ್ತು.

ಇದಕ್ಕೆ ಪ್ರತಿಯಾಗಿ ಇಂಗ್ಲೆಂಡ್ ಬ್ಯಾಟಿಂಗ್ ಆರಂಭಿಸಿ ಕೇವಲ 155ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಅಗ್ರ ಕ್ರಮಾಂಕದಲ್ಲಿ ಕುಕ್, ಕಾರ್ಬೆರಿ, ಆಂಡರ್ಸನ್, ಬೆಲ್ ಮತ್ತು ಪಿರ್ಸನ್ ಎರಡಂಕಿ ದಾಟಲಾಗದೆ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದರು.

ಕೊನೆಯಲ್ಲಿ ಸ್ಟೋಕ್ಸ್ (47) ಹಾಗೂ ಬ್ರಾಡ್ ಅಜೇಯ 30 ರನ್ ಗಳಿಸಿ ತಂಡದ ಮೊತ್ತ 150 ರನ್ ದಾಟಲು ನೆರವಾಗಿದ್ದರು. ದ್ವಿತೀಯ ಇನ್ನಿಂಗ್ಸ್ ನಲ್ಲಿ ರೋಜರ್ಸ್ ಸಿಡಿಸಿದ ಶತಕ (119)ದ ನೆರವಿನಿಂದ ಆಸ್ಟ್ರೇಲಿಯಾ ತಂಡ 276 ರನ್ ಗಳಿಸಿ ಇಂಗ್ಲೆಂಡ್‌ಗೆ ಗೆಲ್ಲಲು 337 ರನ್‌ಗಳ ಗುರಿ ನೀಡಿತ್ತು.

ಆದರೆ, ಇಂಗ್ಲೆಂಡ್ ಕೇವಲ 166 ರನ್ ‌ಗಳಿಗೆ ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಂಡು 281 ರನ್ ಗಳ ಸೋಲು ಅನುಭವಿಸಿತು. ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ ಆಸ್ಟ್ರೇಲಿಯಾದ ಜಾನ್ಸನ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Story first published:  Monday, January 6, 2014, 14:49 [IST]
English summary
Former England batsman Geoffrey Boycott has described the current team's 0-5 drubbing in the Ashes series by Australia as "depressing and humiliating".
ಅಭಿಪ್ರಾಯ ಬರೆಯಿರಿ