Englishहिन्दीമലയാളംதமிழ்తెలుగు

ಮುಂಬೈ ಗೆಲುವಿನ ಓಟಕ್ಕೆ ವಿನಯ್ ಪಡೆ ಬ್ರೇಕ್

Posted by:
Updated: Thursday, December 26, 2013, 12:30 [IST]
 

ಬೆಂಗಳೂರು, ಡಿ.26: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ ‘ಎ' ಗುಂಪಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ತಂಡವನ್ನು 160 ರನ್ಗಳಿಂದ ಮಣಿಸಿದ ಕರ್ನಾಟಕ ಸತತ ನಾಲ್ಕನೇ ಗೆಲುವು ಸಾಧಿಸಿ ಐತಿಹಾಸಿಕ ದಾಖಲೆ ಬರೆದಿದೆ.

ಕಳೆದ 22 ಪಂದ್ಯಗಳ ನಂತರ ಇದೇ ಮೊದಲ ಬಾರಿ ಮುಂಬೈಯನ್ನು ಕರ್ನಾಟಕ ತಂಡ ಸೋಲಿಸಿದೆ. ಬುಧವಾರ ಪಂಯದ 4ನೇ ದಿನ ಮುಂಬೈ ತಂಡಕ್ಕೆ ಗೆಲ್ಲಲು 83 ಓವರ್ ಗಳಲ್ಲಿ 282 ರನ್ ಗುರಿ ಬೇಕಿತ್ತು. ಆದರೆ, ಕರ್ನಾಟಕದ ವೇಗಿಗಳಾದ ನಾಯಕ ವಿನಯ್ ಕುಮಾರ್, ಅಭಿಮನ್ಯು ಮಿಥುನ್ ಹಾಗೂ ಶರತ್ ದಾಳಿಗೆ ತತ್ತರಿಸಿದ ಮುಂಬೈ ತಂಡ 51.3 ಓವರ್ ಗಳಲ್ಲಿ 121 ರನ್ ಗೆ ಆಲೌಟಾಯಿತು.

ಡಿ.2006ರಲ್ಲಿ ಹೈದರಾಬಾದ್ ವಿರುದ್ಧ ಸೋತ ನಂತರ ಮುಂಬೈ ಆರು ವರ್ಷಗಳ ಬಳಿಕ ಸೋಲು ಕಾಣದೆ ಭರ್ಜರಿ ಬೇಟೆ ನಡೆಸಿತ್ತು. ಮುಂಬೈ ಪರಾಕ್ರಮವನ್ನು ವಿನಯ್ ಕುಮಾರ್ ಪಡೆ ಬಗ್ಗು ಬಡಿದಿದೆ. ಈ ಗೆಲುವಿನ ಮೂಲಕ ಕರ್ನಾಟಕ ಆರು ಅಂಕ ಪಡೆದು ಎ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲೆ ಮುಂದುವರೆದಿದೆ.

ಕರ್ನಾಟಕದ ದಾಳಿಗೆ ತತ್ತರಿಸಿ ಮುಂಬೈಯ ಯಾವೊಬ್ಬ ಬ್ಯಾಟ್ಸ್‌ಮನ್ 30 ರನ್ ದಾಟಲು ವಿಫಲರಾದರು. ಮೊದಲ ಇನಿಂಗ್ಸ್ ನಲ್ಲಿ 18 ರನ್ ಗಳ ಹಿನ್ನಡೆ ಅನುಭವಿಸಿದ್ದ ಕರ್ನಾಟಕ ತಂಡ 2ನೆ ಇನಿಂಗ್ಸ್‌ನಲ್ಲಿ 299 ರನ್ ಗಳಿಸಿ ಮುಂಬೈಗೆ 282 ರನ್ ಗುರಿ ನೀಡಿತ್ತು.

ಕರ್ನಾಟಕದ ಪರ ಎರಡನೇ ಇನ್ನಿಂಗ್ಸ್ ನಲ್ಲಿ ಆರ್ ವಿನಯ್ ಕುಮಾರ್ (3/32), ಎಚ್ ಎಸ್ ಶರತ್ (3/12) ಭರ್ಜರಿ ಬೌಲಿಂಗ್ ಪ್ರದರ್ಶಿಸಿದರು. ಶರತ್ ಒಟ್ಟಾರೆ ಈ ಪಂದ್ಯದಲ್ಲಿ (5/57 ಹಾಗೂ 3/12) ಅಮೋಘ ಬೌಲಿಂಗ್ ಪ್ರದರ್ಶನ ನೀಡಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

ಮುಂಬೈ ವಿರುದ್ಧದ ಪಂದ್ಯದಲ್ಲಿ ಕರ್ನಾಟಕದ ಚೊಚ್ಚಲ ಪಂದ್ಯವಾಡಿದ ಸಮರ್ಥ್ ಹಾಗೂ ಗೋಪಾಲ್ ಪ್ರದರ್ಶನ ಮೆಚ್ಚುಗೆ ಗಳಿಸಿತು.

ಸಂಕ್ಷಿಪ್ತ ಸ್ಕೋರ್ ವಿವರ
ಕರ್ನಾಟಕ ಮೊದಲ ಇನಿಂಗ್ಸ್ 251.
ಮುಂಬೈ ಮೊದಲ ಇನಿಂಗ್ಸ್: 269
ಕರ್ನಾಟಕ ದ್ವಿತೀಯ ಇನಿಂಗ್ಸ್:299 ರನ್
ಮುಂಬೈ ದ್ವಿತೀಯ ಇನಿಂಗ್ಸ್: 51.3 ಓವರ್ ಗಳಲ್ಲಿ 121 ರನ್
(ಷಾ 28, ವಿನಯ್‌ಕುಮಾರ್ 3-32, ಶರತ್ 3-12, ಮಿಥುನ್ 2-28, ಗೋಪಾಲ್ 2-13)

[ಚಿತ್ರಕೃಪೆ: ಅಪ್ರಮೇಯ. ಸಿ]

ಮುಂಬೈ ಗೆಲುವಿನ ಓಟಕ್ಕೆ ವಿನಯ್ ಪಡೆ ಬ್ರೇಕ್

ಬೆಂಗಳೂರು, ಡಿ.26: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ ‘ಎ' ಗುಂಪಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ತಂಡವನ್ನು 160 ರನ್ಗಳಿಂದ ಮಣಿಸಿದ ಕರ್ನಾಟಕ ಸತತ ನಾಲ್ಕನೇ ಗೆಲುವು ಸಾಧಿಸಿ ಐತಿಹಾಸಿಕ ದಾಖಲೆ ಬರೆದಿದೆ. [ಚಿತ್ರಕೃಪೆ: ಅಪ್ರಮೇಯ. ಸಿ]

ಮುಂಬೈ ಗೆಲುವಿನ ಓಟಕ್ಕೆ ವಿನಯ್ ಪಡೆ ಬ್ರೇಕ್

ಬೆಂಗಳೂರು, ಡಿ.26: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ ‘ಎ' ಗುಂಪಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ತಂಡವನ್ನು 160 ರನ್ಗಳಿಂದ ಮಣಿಸಿದ ಕರ್ನಾಟಕ ಸತತ ನಾಲ್ಕನೇ ಗೆಲುವು ಸಾಧಿಸಿ ಐತಿಹಾಸಿಕ ದಾಖಲೆ ಬರೆದಿದೆ.[ಚಿತ್ರಕೃಪೆ: ಅಪ್ರಮೇಯ. ಸಿ]

ಮುಂಬೈ ಗೆಲುವಿನ ಓಟಕ್ಕೆ ವಿನಯ್ ಪಡೆ ಬ್ರೇಕ್

ಬೆಂಗಳೂರು, ಡಿ.26: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ ‘ಎ' ಗುಂಪಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ತಂಡವನ್ನು 160 ರನ್ಗಳಿಂದ ಮಣಿಸಿದ ಕರ್ನಾಟಕ ಸತತ ನಾಲ್ಕನೇ ಗೆಲುವು ಸಾಧಿಸಿ ಐತಿಹಾಸಿಕ ದಾಖಲೆ ಬರೆದಿದೆ.[ಚಿತ್ರಕೃಪೆ: ಅಪ್ರಮೇಯ. ಸಿ]

ಮುಂಬೈ ಗೆಲುವಿನ ಓಟಕ್ಕೆ ವಿನಯ್ ಪಡೆ ಬ್ರೇಕ್

ಬೆಂಗಳೂರು, ಡಿ.26: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ ‘ಎ' ಗುಂಪಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ತಂಡವನ್ನು 160 ರನ್ಗಳಿಂದ ಮಣಿಸಿದ ಕರ್ನಾಟಕ ಸತತ ನಾಲ್ಕನೇ ಗೆಲುವು ಸಾಧಿಸಿ ಐತಿಹಾಸಿಕ ದಾಖಲೆ ಬರೆದಿದೆ.[ಚಿತ್ರಕೃಪೆ: ಅಪ್ರಮೇಯ. ಸಿ]

Story first published:  Thursday, December 26, 2013, 12:20 [IST]
English summary
Karnataka outplayed reigning Ranji Trophy champions Mumbai by 160 runs at the M. Chinnaswamy Stadium here Wednesday (December 25). It was the first outright win for Karnataka against the visitors in 22 attempts.
ಅಭಿಪ್ರಾಯ ಬರೆಯಿರಿ