Englishहिन्दीമലയാളംதமிழ்తెలుగు

ಗೆಲುವಿಗಾಗಿ ಆಡದ ಆಫ್ರಿಕಾ ಮೇಲೆ ಕೊಹ್ಲಿ ಮುನಿಸು

Posted by:
Updated: Monday, December 23, 2013, 12:37 [IST]
 

ಜೋಹಾನ್ಸ್ ಬರ್ಗ್, ಡಿ.22: ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಮತ್ತು ಫಾಪ್ ಡು ಪ್ಲೆಸಿಸ್ ಆಕರ್ಷಕ ಶತಕದ ನಡುವೆಯೂ ದಕ್ಷಿಣ ಆಫ್ರಿಕಾ ಗೆಲುವಿಗಾಗಿ ಯತ್ನಿಸಿದೆ ಡ್ರಾ ಗೆ ತೃಪ್ತಿಪಟ್ಟುಕೊಂಡಿರುವುದು ಶಾಕ್ ಆಗಿದೆ ಎಂದು ಭಾರತದ ಯುವ ಆಟಗಾರ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.

ಮೊದಲ ಟೆಸ್ಟ್ ಪಂದ್ಯದ ಐದನೇ ಹಾಗೂ ಅಂತಿಮ ದಿನ ಎರಡನೇ ಇನಿಂಗ್ಸ್ ನಲ್ಲಿ ಗೆಲ್ಲಲು 458 ರನ್ ಮಾಡಬೇಕಿದ್ದ ಆಫ್ರಿಕ ನಿಗದಿತ 136 ಓವರ್ ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 450 ರನ್ ಗಳಿಸಿ ಸೋಲಿನ ದವಡೆಯಿಂದ ಪಾರಾಯಿತು ಎಂದೇ ಎಲ್ಲರೂ ಭಾವಿಸಿದ್ದಾರೆ. ಆದರೆ, ಧೋನಿ ಪಡೆಯ ಸತತ ಕರಾರುವಾಕ್ ದಾಳಿ ನಡುವೆ ಗೆಲುವನ್ನು ನಿರಾಕರಿಸಿದ ಸ್ಮಿತ್ ಪಡೆ ಮೇಲೆ ಕೊಹ್ಲಿ ಮುನಿಸಿಕೊಂಡಿದ್ದಾರೆ.

ಪಂದ್ಯದ ಸ್ಕೋರ್ ಕಾರ್ಡ್

ನಿಜಕ್ಕೂ ನಾನಷ್ಟೇ ಅಲ್ಲ ಟೀಂ ಇಂಡಿಯಾ ಶಾಕ್ ನಲ್ಲಿದೆ. ಪ್ರತಿ ಓವರ್ ಗೆ 8 ರನ್ ನಂತೆ ಹೊಡೆಯುವುದು ದಕ್ಷಿಣ ಅಫ್ರಿಕಾ ತಂಡಕ್ಕೆ ಕಷ್ಟವಾಗಿರಲಿಲ್ಲ. ಆದರೆ, ಗೆಲುವಿಗಾಗಿ ಅವರು ಪ್ರಯತ್ನಿಸಲಿಲ್ಲ. ನಮ್ಮ ಬೌಲರ್ ಗಳು ಉತ್ತಮ ಬೌಲಿಂಗ್ ಮೂಲಕ ಪಂದ್ಯಕ್ಕೆ ಉತ್ತಮ ಫಿನಿಶಿಂಗ್ ಕೊಟ್ಟರು ಎಂದು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ನಾಲ್ಕನೆ ದಿನದಾಟದಂತ್ಯಕ್ಕೆ 45 ಓವರ್ ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 138 ರನ್ ಗಳಿಸಿದ್ದ ದಕ್ಷಿಣ ಆಫ್ರಿಕ ತಂಡ ಒಂದು ಹಂತದಲ್ಲಿ ಸೋಲಿನ ಭೀತಿಗೆ ಸಿಲುಕಿದ್ದು ನಿಜ.ಆದರೆ, ಪ್ಲೆಸಿಸ್ 134 ರನ್(309ಎ, 15ಬೌ) ಮತ್ತು ಡಿ ವಿಲಿಯರ್ಸ್ 103 ರನ್(168ಎ, 12ಬೌ) ಗಳಿಸಿ ಪಾರು ಮಾಡಿದರು.

124ನೆ ಓವರ್ ನ ಮೊದಲ ಎಸೆತದಲ್ಲಿ ಡಿ ವಿಲಿಯರ್ಸ್ ರನ್ನು ಇಶಾಂತ್ ಶರ್ಮ ಬೌಲ್ಡ್ ಮಾಡಿ ಭಾರತಕ್ಕೆ ತಡವಾಗಿ ಯಶಸ್ಸು ಸಿಕ್ಕಿತು. ಡುಮಿನಿ(5) ಬೇಗನೆ ಔಟಾದರು. ಬಂಡೆಯಂತೆ ನಿಂತಿದ್ದ ಪ್ಲೆಸಿಸ್ 132.5ನೆ ಓವರ್‌ನಲ್ಲಿ ರನೌಟಾದರು. ಆಗ ಮತ್ತೆ ಭಾರತ ಗೆಲುವಿಗಾಗಿ ಹೋರಾಟ ನಡೆಸಿದರೆ, ದಕ್ಷಿಣ ಆಫ್ರಿಕದ ಆಟಗಾರರು ಸೋಲು ತಪ್ಪಿಸಲು ಹೋರಾಟ ನಡೆಸಿದರು. ಅಂತಿಮವಾಗಿ ಫಿಲ್ಯಾಂಡರ್ ಔಟಾಗದೆ 25 ಮತ್ತು ಡೇಲ್ ಸ್ಟೇಯ್ನ್ 6 ರನ್ ಗಳಿಸಿ ತಂಡದ ಸೋಲನ್ನು ತಪ್ಪಿಸಿದರು. ಪಂದ್ಯ ರೋಚಕ ಡ್ರಾದಲ್ಲಿ ಅಂತ್ಯಗೊಂಡಿತು. ಭಾರತದ ಪರ ಶಮಿ 107ಕ್ಕೆ 3, ಝಹೀರ್ ಖಾನ್ ಮತ್ತು ಇಶಾಂತ್ ಶರ್ಮ ತಲಾ 1 ವಿಕೆಟ್ ಪಡೆದರು.ಸಂಕ್ಷಿಪ್ತ ಸ್ಕೋರ್

ಭಾರತ ಪ್ರಥಮ ಇನಿಂಗ್ಸ್: 280

ದಕ್ಷಿಣ ಆಫ್ರಿಕ ಪ್ರಥಮ ಇನಿಂಗ್ಸ್: 75.3 ಓವರ್‌ಗಳಲ್ಲಿ 244.

ಭಾರತ ದ್ವಿತೀಯ ಇನಿಂಗ್ಸ್: 120.4 ಓವರ್‌ಗಳಲ್ಲಿ 421

ದಕ್ಷಿಣ ಆಫ್ರಿಕ ದ್ವಿತೀಯ ಇನಿಂಗ್ಸ್ 136 ಓವರ್‌ಗಳಲ್ಲಿ 7 ವಿಕೆಟ್‌ಗೆ 450

ಜೋಹಾನ್ಸ್ ಬರ್ಗ್ ನಡೆದ ಮೊದಲ ಟೆಸ್ಟ್ ಪಂದ್ಯದ ಚಿತ್ರಗಳು

ಜಹೀರ್ 300 ವಿಕೆಟ್ : 35 ಹೆಯದ ಝಹೀರ್ ಖಾನ್ ತನ್ನ 89ನೆ ಟೆಸ್ಟ್‌ನಲ್ಲಿ ಇಂದು ದಕ್ಷಿಣ ಆಫ್ರಿಕದ ಆಲ್‌ರೌಂಡರ್ ಜಾಕ್ ಕಾಲಿಸ್(44)ರನ್ನು 60.4ನೆ ಓವರ್‌ನಲ್ಲಿ ಎಲ್‌ಬಿಡಬ್ಲು ಬಲೆಗೆ ಬೀಳಿಸಿ ತಾನು ಟೆಸ್ಟ್ ಕ್ರಿಕೆಟ್‌ನಲ್ಲಿ ಸಂಪಾದಿಸಿದ ವಿಕೆಟ್‌ಗಳ ಸಂಖ್ಯೆಯನ್ನು 300ಕ್ಕೆ ಏರಿಸಿದರು.

ಜೋಹಾನ್ಸ್ ಬರ್ಗ್ ನಡೆದ ಮೊದಲ ಟೆಸ್ಟ್ ಪಂದ್ಯದ ಚಿತ್ರಗಳು

ಭಾತದ ಬೌಲರ್ ಗಳಾದ ಕಪಿಲ್ ದೇವ್(434), ಅನಿಲ್ ಕುಂಬ್ಳೆ(619) ಮತ್ತು ಹರ್ಭಜನ್ ಸಿಂಗ್(413) ಈ ಹಿಂದೆ 300 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ 2000, ನ.10ರಿಂದ 13ರ ತನಕ ಢಾಕಾದಲ್ಲಿ ನಡೆದ ಬಾಂಗ್ಲಾ ವಿರುದ್ಧದ ಟೆಸ್ಟ್‌ನ ಲ್ಲಿ ಆಡುವ ಮೂಲಕ ಜಹೀರ್ ಖಾನ್ ಟೆಸ್ಟ್ ಕ್ರಿಕೆಟ್ ಪ್ರವೇಶಿಸಿದ್ದರು.

ಜೋಹಾನ್ಸ್ ಬರ್ಗ್ ನಡೆದ ಮೊದಲ ಟೆಸ್ಟ್ ಪಂದ್ಯದ ಚಿತ್ರಗಳು

ಭಾರತ -ದ. ಅಫ್ರಿಕಾ ರೋಚಕ ಡ್ರಾ

ಜೋಹಾನ್ಸ್ ಬರ್ಗ್ ನಡೆದ ಮೊದಲ ಟೆಸ್ಟ್ ಪಂದ್ಯದ ಚಿತ್ರಗಳು

ಭಾರತ -ದ. ಅಫ್ರಿಕಾ ರೋಚಕ ಡ್ರಾ

ಭಾರತ -ದ. ಅಫ್ರಿಕಾ ರೋಚಕ ಡ್ರಾ

ಜೋಹಾನ್ಸ್ ಬರ್ಗ್ ನಡೆದ ಮೊದಲ ಟೆಸ್ಟ್ ಪಂದ್ಯದ ಚಿತ್ರಗಳು

ಭಾರತ -ದ. ಅಫ್ರಿಕಾ ರೋಚಕ ಡ್ರಾ

ಜೋಹಾನ್ಸ್ ಬರ್ಗ್ ನಡೆದ ಮೊದಲ ಟೆಸ್ಟ್ ಪಂದ್ಯದ ಚಿತ್ರಗಳು

ಭಾರತ -ದ. ಅಫ್ರಿಕಾ ರೋಚಕ ಡ್ರಾ

ಜೋಹಾನ್ಸ್ ಬರ್ಗ್ ನಡೆದ ಮೊದಲ ಟೆಸ್ಟ್ ಪಂದ್ಯದ ಚಿತ್ರಗಳು

Story first published:  Monday, December 23, 2013, 12:32 [IST]
English summary
Young Indian batsman Virat Kohli has said the Indian team was 'shocked' that the hosts did not go for victory in the dying moments of the match, which ended in an exciting draw.
ಅಭಿಪ್ರಾಯ ಬರೆಯಿರಿ