Englishहिन्दीമലയാളംதமிழ்తెలుగు

ಟೀಂ ಇಂಡಿಯಾಗೆ ವಿರಾಟ್ ಕೊಹ್ಲಿ ಶತಕದಾಸರೆ

Posted by:
Updated: Wednesday, December 18, 2013, 22:30 [IST]
 

ಜೋಹಾನ್ಸ್ ಬರ್ಗ್, ಡಿ.17: ವಿರಾಟ್ ಕೊಹ್ಲಿ ಅಮೋಘ ಶತಕದ ನೆರವಿನಿಂದ ಭಾರತ ತಂಡ ಮೊದಲ ಟೆಸ್ಟ್ ನ ಮೊದಲ ದಿನದ ಗೌರವ ಉಳಿಸಿಕೊಂಡಿದೆ. ಕಳೆದ ೨೪ ವರ್ಷಗಳಿಂದ ನಂ.4 ಸ್ಥಾನವನ್ನು ಅಲಂಕರಿಸಿದ್ದ ಸಚಿನ್ ತೆಂಡೂಲ್ಕರ್ ಸ್ಥಾನವನ್ನು ವಿರಾಟ್ ಕೊಹ್ಲಿ ಸಮರ್ಥವಾಗಿ ತುಂಬಿದ್ದಾರೆ. ಮೊದಲ ದಿನವೇ ಶತಕ ದಾಖಲಿಸಿ ಟೀಂ ಇಂಡಿಯಾ ಕುಸಿತವನ್ನು ತಡೆಗಟ್ಟಿದ್ದಾರೆ.

ವಿರಾಟ್ ಕೊಹ್ಲಿ ಅವರು 119 ರನ್ (181 ಎಸೆತ, 18X4) ನೆರವಿನಿಂದ ದಿನದ ಅಂತ್ಯಕ್ಕೆ 90 ಓವರ್ ಗಳಲ್ಲಿ 255/5 ಸ್ಕೋರ್ ಮಾಡಿತ್ತು. ಎರಡನೇ ಟೆಸ್ಟ್ ಆಡುತ್ತಿರುವ ಅಜಿಂಕ್ಯ ರಹಾನೆ 43 ರನ್ ಹಾಗೂ ನಾಯಕ ಧೋನಿ 17 ರನ್ ಗಳಿಸ ನಾಟೌಟ್ ಆಗಿ ಉಳಿದಿದ್ದಾರೆ.

ಸ್ಕೋರ್ ಕಾರ್ಡ್ ನೋಡಿ


ದಿನದ ಮೊದಲಾರ್ಧದ ವರದಿ: ದಕ್ಷಿಣ ಆಫ್ರಿಕ ಮತ್ತು ಭಾರತ ಕ್ರಿಕೆಟ್ ತಂಡಗಳ ನಡುವಿನ 2 ಟೆಸ್ಟ್ ಗಳ ಸರಣಿಯ ಮೊದಲ ಪಂದ್ಯ ಬುಧವಾರ ಆರಂಭಗೊಂಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಧೋನಿ ಪಡೆ ಆರಂಭದಲ್ಲೇ ಮುಗ್ಗರಿಸಿದೆ.
200ನೇ ಟೆಸ್ಟ್ ಬಳಿಕ ಸಚಿನ್ ತೆಂಡೂಲ್ಕರ್ ನಿವೃತ್ತಿ ಘೋಷಿಸಿದ ಮೇಲೆ ಮೊದಲ ಬಾರಿಗೆ ಟೀಂ ಇಂಡಿಯಾ ಸಚಿನ್ ಇಲ್ಲದೆ ಕಣಕ್ಕಿಳಿದಿದೆ. ಲಂಚ್ ವಿರಾಮಕ್ಕೆ ಭಾರತ ಎರಡು ವಿಕೆಟ್ ಕಳೆದು ಕೊಂಡು 70 ರನ್ ಸ್ಕೋರ್ ಮಾಡಿದೆ. ಕೊಹ್ಲಿ 32 ಹಾಗೂ ಪೂಜಾರಾ 18 ರನ್ ಗಳಿಸಿ ಆಡುತ್ತಿದ್ದರು. ಚಹಾ ವಿರಾಮದ ವೇಳೆಗೆ ಭಾರತ 164/4 ಸ್ಕೋರ್ ಮಾಡಿತ್ತು.

ಟೀಂ ಇಂಡಿಯಾಗೆ ವಿರಾಟ್ ಕೊಹ್ಲಿ ಶತಕದಾಸರೆ

ಭಾರತ: ಮಹೇಂದ್ರ ಸಿಂಗ್ ಧೋನಿ (ನಾಯಕ), ಶಿಖರ್ ಧವನ್, ಮುರಳಿ ವಿಜಯ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ, ಆರ್.ಅಶ್ವಿನ್, ಜಹೀರ್ ಖಾನ್, ಇಶಾಂತ್ ಶರ್ಮಾ, ಮೊಹ್ಮದ್ ಶಮಿ,

ದಕ್ಷಿಣ ಆಫ್ರಿಕಾ : ಗ್ರೇಮ್ ಸ್ಮಿತ್ (ನಾಯಕ), ಆಲ್ವಿರೊ ಪೀಟರ್ಸನ್, ಎಬಿ ಡಿವಿಲಿಯರ್ಸ್, ಹಶೀಂ ಆಮ್ಲಾ, ಜೆ.ಪಿ ಡುಮಿನಿ, ಫಫ್ ಡುಪ್ಲೆಸಿಸ್, ಇಮ್ರಾನ್ ತಾಹೀರ್, ಜಾಕ್ ಕಾಲಿಸ್, ಮಾರ್ನ್ ಮಾರ್ಕೆಲ್, ವೆರ್ನಾನ್ ಫಿಲ್ಯಾಂಡರ್, ಡೇಲ್ ಸ್ಟೇಯ್ನ್,

#ಎಂ.ಎಸ್.ಧೋನಿ ನಾಯಕನಾಗಿ 50ನೆ ಟೆಸ್ಟ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಭಾರತ ತಂಡವನ್ನು ಮುನ್ನಡೆಸಿದ ಭಾರತದ ಮೊದಲ ನಾಯಕ ಎಂಬ ದಾಖಲೆಯನ್ನು ಬರೆಯಲಿದ್ದಾರೆ. ಸೌರವ್ ಗಂಗೂಲಿ ದಾಖಲೆ ಅಳಿಸಿದ್ದಾರೆ.

# ಜಾಕ್ ಕಾಲಿಸ್ 102 ಅರ್ಧ ಶತಕ ದಾಖಲಿಸಿದ್ದಾರೆ. ಟೆಸ್ಟ್ ನಲ್ಲಿ ಗರಿಷ್ಠ ಅರ್ಧ ಶತಕ ದಾಖಲಿಸಿದ ಆಟಗಾರರಲ್ಲಿ 2ನೆ ಸ್ಥಾನ ಗಿಟ್ಟಿಸಿಕೊಳ್ಳಲು ಅವರಿಗೆ 2 ಅರ್ಧಶತಕಗಳ ಅಗತ್ಯತೆ ಇದೆ. ಸಚಿನ್ 119 ಅರ್ಧಶತಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ. ರಿಕಿ ಪಾಂಟಿಂಗ್ (103 ) ಎರಡನೆ ಸ್ಥಾನದಲ್ಲಿದ್ದಾರೆ.

# ಕಾಲಿಸ್ 22 ಶತಕಗಳನ್ನು ತವರಲ್ಲಿ ದಾಖಲಿಸಿದ್ದಾರೆ. ಪಾಂಟಿಂಗ್ ತವರಲ್ಲಿ ದಾಖಲಿಸಿರುವ 23 ಶತಕಗಳನ್ನು ಸರಿಗಟ್ಟಲು ಕಾಲಿಸ್ ಇನ್ನು ಒಂದು ಶತಕ ದಾಖಲಿಸಬೇಕಾಗಿದೆ.

# ಡೇಲ್ ಸ್ಟೇಯ್ನಗೆ 200 ವಿಕೆಟ್ ಗಳ ದಾಖಲೆಗೆ ಇನ್ನೂ 8 ವಿಕೆಟ್ ಉಡಾಯಿಸಬೇಕಾಗಿದೆ.

# ಕಾಲಿಸ್ 200 ಕ್ಯಾಚ್ ಗಳ ದಾಖಲೆ ಬರೆಯಲಿದ್ದಾರೆ.
# ಗ್ರೇಮ್ ಸ್ಮಿತ್ ಭಾರತದ ವಿರುದ್ಧದ ಟೆಸ್ಟ್‌ನಲ್ಲಿ 801 ರನ್ ಗಳಿಸಿದ್ದಾರೆ. 1000 ರನ್ ಪೂರೈಸಲು ಅವರಿಗೆ 199 ರನ್ ಗಳ ಆವಶ್ಯಕತೆ ಇದೆ.

# ಜಹೀರ್ ಖಾನ್ ಈಗಾಗಲೇ ಟೆಸ್ಟ್‌ನಲ್ಲಿ 295 ವಿಕೆಟ್ ಪಡೆದಿದ್ದಾರೆ. ಇನ್ನೂ 5 ವಿಕೆಟ್ ಪಡೆದರೆ 300 ವಿಕೆಟ್ ಪಡೆದ ಬೌಲರ್ ಎನಿಸಿಕೊಳ್ಳಲಿದ್ದಾರೆ.

Story first published:  Wednesday, December 18, 2013, 16:44 [IST]
English summary
Virat Kohli struck a superb century as India and South Africa shared honours on the opening day of the first Test here at the Wanderers Stadium on Wednesday(Dec.18).
ಅಭಿಪ್ರಾಯ ಬರೆಯಿರಿ