Englishहिन्दीമലയാളംதமிழ்తెలుగు

ಇಂಡಿಯನ್ ಟೈಗರ್ಸ್ ಕಟ್ಟಿ ಹಾಕಿದ ಹರಿಣ ಪಡೆ

Posted by:
Updated: Friday, December 6, 2013, 0:57 [IST]
 

ಜೋಹಾನ್ಸ್ ಬರ್ಗ್, ಡಿ.5: ಇತ್ತೀಚಿಗೆ ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ದಕ್ಷಿಣ ಆಫ್ರಿಕಾ ತಂಡ ಇಂದು ಇಲ್ಲಿ ನಡೆದ ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಆಟ ಪ್ರದರ್ಶಿಸಿದೆ. ಗೆಲ್ಲಲು 359 ರನ್ ಸ್ಕೋರ್ ಮಾಡಬೇಕಿದ್ದ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ. ಸರಣಿಯಿಂದ ಸರಣಿಗೆ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಟೀಂ ಇಂಡಿಯಾ ವಿರುದ್ಧ ಸರಣಿಯ ಮೊದಲ ಪಂದ್ಯದಲ್ಲೇ 141 ರನ್ ಗಳ ಅಂತರದ ಜಯ ದಾಖಲಿಸಿದ ದಕ್ಷಿಣ ಆಫ್ರಿಕಾ ತಂಡ ಜಯದ ನಗೆ ಬೀರಿದೆ.

20 ವರ್ಷ ವಯಸ್ಸಿನ ಆರಂಭಿಕ ಆಟಗಾರ ಕ್ವಿಂಟಾನ್ ಡಿ ಕಾಕ್ ಅಮೋಘ ಶತಕ, ಹಶೀಂ ಆಮ್ಲಾ, ನಾಯಕ ಎಬಿ ಡಿವಿಲೆಯರ್ಸ್, ಜೆಪಿ ಡುಮನಿ ಅರ್ಧ ಶತಕ ಮೆಕ್ ಲೆರನ್, ಸ್ಟೇನ್ ಬೌಲಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಜಯ ದಾಖಲಿಸಿದೆ. 50 ಓವರ್ ಗಳಲ್ಲಿ 358/4 ಸ್ಕೋರ್ ಮಾಡಿತ್ತು. ಟೀಂ ಇಂಡಿಯಾ 41 ಓವರ್ ಗಳಲ್ಲಿ 217 ಸ್ಕೋರ್ ಮಾಡಿ ಆಲೌಟ್ ಆಗಿದೆ. ಧೋನಿ ಭರ್ಜರಿ ಆಟ ಹೊರತು ಪಡಿಸಿದರೆ ಟೀಂ ಇಂಡಿಯಾ ಸಾಧನೆ ಸೊನ್ನೆ. ಪಂದ್ಯದ ಮುಖ್ಯಾಂಶ ಇಂತಿದೆ:

ಸ್ಕೋರ್ ಕಾರ್ಡ್ ನೋಡಿ

ದಕ್ಷಿಣ ಆಫ್ರಿಕಾ : ಬೌಂಡರಿ : 34, ಸಿಕ್ಸರ್ : 13
ಭಾರತ : ಸಿಕ್ಸರ್ :1 ; ಬೌಂಡರಿ :30
ಟಾಪ್ ಸ್ಕೋರರ್ :  ಕ್ವಿಂಟಾನ್ ಡಿ ಕಾಕ್ 135 (121 ಎಸೆತ, 18x4, 3x6), ಭಾರತ : ಎಂಎಸ್ ಧೋನಿ: 65 (71 ಎ, 8 ಬೌಂಡರಿ, 1 ಸಿಕ್ಸರ್)
ಯಶಸ್ವಿ ಬೌಲರ್ : ಭಾರತ: ಮಹಮ್ಮದ್ ಶಮಿ 3/68, 10 ಓವರ್ಸ್, ದಕ್ಷಿಣ ಆಫ್ರಿಕಾ : ಡೇಲ್ ಸ್ಟೇನ್ 25/3, 8 ಓವರ್ಸ್, ಮೆಕ್ಲೆರನ್ 49/3, 8 ಓವರ್ಸ್
# ಧೋನಿ ಬಿಟ್ಟರೆ ವಿರಾಟ್ ಕೊಹ್ಲಿ 31 ರನ್ (35 ಎ, 5 ಬೌಂಡರಿ) ಮಾಡಿ ರನ್ ಗತಿ ಹೆಚ್ಚಿಸಲು ಯತ್ನಿಸಿದರು.
# ಕೊಹ್ಲಿ ಔಟಾದ ನಂತರ ಬಂದ ಯುವರಾಜ್ ಸಿಂಗ್ 2 ಎಸೆತ ಎದುರಿಸಿ ಶೂನ್ಯಕ್ಕೆ ಔಟಾದರು.
# ರೋಹಿತ್ ಶರ್ಮ ಎಚ್ಚರಿಕೆಯ ಆಟವಾಡಿ 43 ಎಸೆತಗಳಲ್ಲಿ 18 ರನ್ ಗಳಿಸಿದರು.

ಇಂಡಿಯನ್ ಟೈಗರ್ಸ್ ಕಟ್ಟಿ ಹಾಕಿದ ಹರಿಣ ಪಡೆ

# ಎಂಎಸ್ ಧೋನಿ 18 ರನ್ ಮಾಡಿದ್ದಾಗ ಸೊಸೊಬೆ ಬೌಲಿಂಗ್ ನಲ್ಲಿ ನೀಡಿದ್ದ ಕ್ಯಾಚನ್ನು ಡೇವಿಡ್ ಮಿಲ್ಲರ್ ಕೈ ಚೆಲ್ಲಿದರು.
# ದಕ್ಷಿಣ ಆಫ್ರಿಕಾದ ವೇಗಿಗಳ ಎಸೆತಗಳನ್ನು ಎದುರಿಸಲಾಗದೆ ಟೀಂ ಇಂಡಿಯಾ ತತ್ತರಿಸಿತು. 17 ಎಸೆತಗಳ ನಂತರ ರೋಹಿತ್ ಶರ್ಮ ಖಾತೆ ತೆರೆದರು.
# ವಿರಾಟ್ ಕೊಹ್ಲಿ 2 ರನ್ ಆಗಿದ್ದಾಗ ಕೀಪರ್ ಡಿ ಕಾಕ್ ಕ್ಯಾಚ್ ಬಿಟ್ಟಿದ್ದರು.
# 2006ರಲ್ಲಿ 157 ರನ್ ಗಳ ಅಂತರದ ಸೋಲು ಕಂಡಿದ್ದ ಭಾರತಕ್ಕೆ ಇದು ಎರಡನೇ ಅತಿ ದೊಡ್ಡ ಅಂತರ ಸೋಲಾಗಿದೆ.
# ಎರಡನೇ ಪಂದ್ಯ ಡರ್ಬನ್ ನಲ್ಲಿ ಭಾನುವಾರ(ಡಿ.8) ಮಧ್ಯಾಹ್ನ1.30 IST ಆರಂಭವಾಗಲಿದೆ.

# ಸುಮಾರು 17 ಏಕದಿನ ಪಂದ್ಯಗಳ ನಂತರ ಹರಿಣಗಳ ತಂಡ 350 ಸ್ಕೋರ್ ಗಡಿ ದಾಟಿದೆ.
# ಆರಂಭಿಕ ಜೋಡಿ 152 ರನ್ ಗಳ ಜೊತೆಯಾಟ(29.3 ಓವರ್ಸ್) ಪ್ರದರ್ಶಿಸಿತು. ಆಮ್ಲಾ 23ನೇ ಏಕದಿನ ಅರ್ಧಶತಕ ಬಾರಿಸಿದರು.
# ಎಡಗೈ ಆಟಗಾರ ಡಿ ಕಾಕ್ ತಮ್ಮ ಎರಡನೇ ಶತಕವನ್ನು 101 ಎಸೆತಗಳಲ್ಲಿ ಪೂರೈಸಿದರು.
# ನಾಯಕ ಎಬಿ ಡಿವಿಲೆಯರ್ಸ್ 47 ಎಸೆತಗಳಲ್ಲಿ 77 ರನ್ ( 6X4, 4X6) ಚೆಚ್ಚಿದರು.
# ಜೆಪಿ ಡುಮಿನಿ 29 ಎಸೆತಗಳಲ್ಲಿ 59 ರನ್ ( 2X4, 5X6) ಬಾರಿಸಿದರು.
# ಡುಮಿನಿ-ಎಬಿ ಡಿವಿಲೆಯರ್ಸ್ 4ನೇ ವಿಕೆಟ್ ಗೆ 7.4 ಓವರ್ ಗಳಲ್ಲಿ 105 ರನ್ ಕಲೆ ಹಾಕಿದರು.
# ದ.ಅಫ್ರಿಕಾ ತಂಡ ಕೊನೆ 5 ಓವರ್ ಗಳಲ್ಲಿ 84ರನ್ ಬಾರಿಸಿತು.
# ಭಾರತ ವಿರುದ್ಧ ದಾಖಲಿಸಿದ ಅತಿ ಕಿರಿಯ ಆಟಗಾರರ ಪೈಕಿ 20 ವರ್ಷದ ಡಿ ಕಾಕ್ ನಾಲ್ಕನೇಯವರಾಗಿದ್ದಾರೆ. ಈ ಮುಂಚೆ ಶಹೀದ್ ಅಫ್ರಿದಿ, ಸಲ್ಮಾನ್ ಬಟ್(ಇಬ್ಬರು ಪಾಕಿಸ್ತಾನ), ದಿನೇಶ್ ಚಾಂಡಿಮಲ್ (ಶ್ರೀಲಂಕಾ), ರಿಕಾರ್ಡೊ ಪೊವೆಲ್ (ವೆಸ್ಟ್ ಇಂಡೀಸ್) ಶತಕ ಬಾರಿಸಿದ್ದರು.
# ಡಿ ಕಾಕ್ 21 ರನ್ ಮಾಡಿದ್ದಾಗ ಮೋಹಿತ್ ಬೌಲಿಂಗ್ ನಲ್ಲಿ ಕ್ಯಾಚಿತ್ತಿದ್ದನ್ನು ಶಮಿ ಕೈ ಚೆಲ್ಲಿದರು. ಆಮ್ಲಾ 8 ರನ್ ಗಳಿಸಿದ್ದಾಗ ರೋಹಿತ್ ಶರ್ಮ ಕ್ಯಾಚ್ ಬಿಟ್ಟಿದ್ದರು.

Story first published:  Thursday, December 5, 2013, 21:28 [IST]
English summary
Indian batsmen were rattled by pace, bounce and swing on their first day of international cricket in South Africa. The home team marched to a crushing 141-run victory to take a 1-0 lead in the three-match ODI series here on Thursday.
ಅಭಿಪ್ರಾಯ ಬರೆಯಿರಿ