Englishहिन्दीമലയാളംதமிழ்తెలుగు

ಧೋನಿ ಬಾಯ್ಸ್ ಗೆ ಎಬಿಡಿ ಸಕತ್ ಚಾಲೆಂಜ್

Posted by:
Updated: Monday, December 9, 2013, 12:35 [IST]
 

ಜೋಹಾನ್ಸ್ ಬರ್ಗ್, ಡಿ.4: ಸರಣಿಯಿಂದ ಸರಣಿಗೆ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಟೀಂ ಇಂಡಿಯಾ ಗುರುವಾರದಿಂದ ಆರಂಭಗೊಳ್ಳಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಆದರೆ, ಹರಿಣಗಳ ನಾಡಲ್ಲಿ ಧೋನಿ ಪಡೆಗೆ ಸೋಲುಣಿಸಲು ನಾವು ಸಿದ್ಧ ಎಂದು ದಕ್ಷಿಣ ಆಫ್ರಿಕಾ ನಾಯಕ ಎಬಿ ಡಿವಿಲೆಯರ್ಸ್ ಹೇಳಿದ್ದಾರೆ.

ಸಚಿನ್ ತೆಂಡೂಲ್ಕರ್ ನಿವೃತ್ತಿಯ ನಂತರ ಭಾರತ ತಂಡ ಮೊದಲ ಬಾರಿಗೆ ವಿದೇಶಿ ನೆಲದಲ್ಲಿ ಸರಣಿಯೊಂದಕ್ಕೆ ಭಾರತ ಸಜ್ಜಾಗಿದೆ. ಮೂರು ಏಕದಿನ ಪಂದ್ಯಗಳ ನಂತರ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲೂ 'ಧೋನಿ' ಪಡೆ ಹೋರಾಟ ನಡೆಸಲಿದೆ.

ಧೋನಿ ಬಾಯ್ಸ್ ಗೆ ಎಬಿಡಿ ಸಕತ್ ಚಾಲೆಂಜ್

ಆಗಸ್ಟ್ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ಭಾರತ 'ಎ' ತಂಡದಲ್ಲಿದ್ದ ಆರು ಆಟಗಾರರು ಪ್ರಸಕ್ತ ತಂಡದಲ್ಲಿರುವುದು ಭಾರತಕ್ಕೆ ವರದಾನವಾಗಿದೆ. ದಕ್ಷಿಣ ಆಫ್ರಿಕಾದ ಬೌನ್ಸಿ ಪಿಚ್ ಗಳಲ್ಲಿ ಆಡುವುದು ಹೇಗೆ ಎಂಬುದರ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿದೆ. ಧೋನಿ ತಂಡವನ್ನು ವೇಗದ ಬೌಲಿಂಗ್ ಅಷ್ಟೇ ಅಲ್ಲ ಸ್ಪಿನ್ ಮೂಲಕ ಕಟ್ಟಿ ಹಾಕಲು ಎಬಿ ಡಿವಿಲೆಯರ್ಸ್ ತಂತ್ರ ರೂಪಿಸಿದ್ದಾರೆ.

ಆದರೆ, ಇತ್ತೀಚಿಗೆ ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಬ್ಯಾಟಿಂಗ್ ವೈಫಲ್ಯ ಕಂಡಿದ್ದು, ಭಾರತ ವಿರುದ್ಧ ಉತ್ತಮ ಪ್ರದರ್ಶನ ನೀಡಲು ಕಠಿಣ ಅಭ್ಯಾಸ ನಡೆಸಿದೆ.

''ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ಆಟಗಾರರ ನಡುವಿನ ಸಂಬಂಧ ಉತ್ತಮವಾಗಿಯೇ ಇದೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯವಿದ್ದರೆ ಅದು ಕ್ರಿಕೆಟನ್ನು ಇನ್ನೂ ಕುತೂಹಲದ ಕಡೆಗೆ ಕೊಂಡೊಯ್ಯುತ್ತದೆ,'' ಎಂದು ಧೋನಿ ಹೇಳಿದ್ದಾರೆ.

ಬ್ಯಾಟ್, ಬಾಲ್ ಗಳ ಘರ್ಷಣೆಯ ಶಬ್ದಗಳ ನಾಳೆ ಮಳೆ ಬೀಳುವ ಸಾಧ್ಯತೆಯಿದೆ ಎನ್ನಲಾಗಿದೆ. ಯುವರಾಜ್ ಸಿಂಗ್, ಸುರೇಶ್ ರೈನಾ ಸ್ಥಾನದ ಬಗ್ಗೆ ಅನುಮಾನಗಳಿದ್ದು ಅಂಬಟಿ ರಾಯುಡು ಅಥವಾ ಅಜಿಂಕ್ಯ ರಹಾನೆ ಆಡುವ XI ನಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ.

ತಂಡಗಳು:
ಭಾರತ: ಎಂಎಸ್ ಧೋನಿ(ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಸುರೇಶ್ ರೈನಾ, ಆರ್ ಅಶ್ವಿನ್, ರವೀಂದ್ರ ಜಡೇಜ, ಮಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಇಶಾಂತ್ ಶರ್ಮ, ಅಮಿತ್ ಮಿಶ್ರಾ, ಅಂಬಟಿ ರಾಯುಡು, ಅಂಜಿಕ್ಯ ರಹಾನೆ

ದಕ್ಷಿಣ ಆಫ್ರಿಕಾ: ಎಬಿ ಡಿವಿಲೆಯರ್ಸ್(ನಾಯಕ), ಹಶೀಂ ಅಮ್ಲಾ, ಕ್ವಿಂಟನ್ ಡಿ ಕಾಕ್, ಜೆಪಿ ಡುಮನಿ, ಇಮ್ರಾನ್ ತಾಹಿರ್, ಜಾಕ್ ಕಾಲಿಸ್, ರಾಯ್ನ್ ಮೆಕ್ ಲಾರೆನ್, ಡೇವಿಡ್ ಮಿಲ್ಲರ್, ಮಾರ್ನೆ ಮಾರ್ಕೆಲ್, ವಾಯ್ನೆ ಪಾರ್ನೆಲ್, ವೆರ್ನಾನ್ ಫಿಲಾಂಡರ್, ಗ್ರಹಾಂ ಸ್ಮಿತ್, ಡೇಲ್ ಸ್ಟೈನ್, ಲೊನ್ವಾಬೊ ಸೊಸೊಬೆ

ಮೊದಲ ಪಂದ್ಯ ಆರಂಭದ ಸಮಯ ಸಂಜೆ 5 ಗಂಟೆ(IST)
ಎರಡನೇ ಪಂದ್ಯ ಡಿ.8: ಡರ್ಬನ್ ನಲ್ಲಿ (1.30 IST)
ಮೂರನೇ ಪಂದ್ಯ ಡಿ.11: ಸೆಂಚೂರಿಯನ್ (5 IST)
ಪಿಟಿಐ

Story first published:  Wednesday, December 4, 2013, 18:16 [IST]
English summary
Gaining in confidence with every series, India's in-form young batsmen are set to be put through their sternest test this season when the team takes on the mighty South Africa in a three-match ODI series starting here tomorrow.
ಅಭಿಪ್ರಾಯ ಬರೆಯಿರಿ