Englishहिन्दीമലയാളംதமிழ்తెలుగు

ಟೀಂ ಇಂಡಿಯಾ ವಿಶಿಷ್ಟ ದಾಖಲೆ, ಧೋನಿ ಡಬ್ಬಲ್ ಟ್ರೀಟ್

Posted by:
Updated: Tuesday, December 3, 2013, 17:55 [IST]
 

ಬೆಂಗಳೂರು,ಡಿ. 3: ಅತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಗುರುವಾರ ಆರಂಭಗೊಳ್ಳಲಿರುವ ಪ್ರಥಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗಳಿಸುವ ಮೊದಲ ರನ್ ಏಕದಿನ ಇತಿಹಾಸದಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದೆ. ಭಾರತ ಹಾಗೂ ಆಸ್ಟ್ರೇಲಿಯಾ ಜಂಟಿಯಾಗಿ ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಸ್ಕೋರ್ ಮಾಡಿದ ತಂಡಗಳೆನಿಸಲಿವೆ.

ಭಾರತ ಮತ್ತು ಆಸ್ಟ್ರೇಲಿಯ ಎರಡೂ ತಂಡಗಳು ಈವರೆಗೆ 1,82,881 ರನ್ ಪೇರಿಸಿವೆ. ಭಾರತ 841 ಪಂದ್ಯಗಳಿಂದ, ಆಸ್ಟ್ರೇಲಿಯ 825 ಪಂದ್ಯಗಳಿಂದ ಈ ರನ್ ದಾಖಲೆ ಬರೆದಿವೆ. ಪಾಕಿಸ್ಥಾನ 1,71,982 ರನ್ನುಗಳೊಂದಿಗೆ ಮೂರನೇ ಸ್ಥಾನದಲ್ಲಿದೆ (807 ಪಂದ್ಯ). 4ನೇ ಹಾಗೂ 5ನೇ ಸ್ಥಾನದಲ್ಲಿರುವ ತಂಡಗಳೆಂದರೆ ಶ್ರೀಲಂಕಾ (1,46,365 ರನ್) ಮತ್ತು ವೆಸ್ಟ್ ಇಂಡೀಸ್ (1,45,260 ರನ್).

ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಗುರುವಾರ ಜೊಹಾನ್ಸ್ ಬರ್ಗ್‌ನಲ್ಲಿ ಭಾರತ ಮೊದಲ ಏಕದಿನ ಪಂದ್ಯವಾಡಲಿದೆ. ಈ ವಿಶ್ವದಾಖಲೆಯನ್ನು ಇನ್ನೂ ಕೆಲ ಕಾಲ ತನ್ನ ಹೆಸರಲ್ಲಿ ಉಳಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳು ಟೀಂ ಇಂಡಿಯಾಗಿದೆ. ದಕ್ಷಿಣ ಆಫ್ರಿಕಾ ಸರಣಿ ಬಳಿಕ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳ ಏಕದಿನ ಸರಣಿ ಆಡಲಿದೆ. ಸದ್ಯ ಆಸ್ಟ್ರೇಲಿಯ ತಂಡ ಆಷ್ಯಸ್ ಟೆಸ್ಟ್ ಸರಣಿ ಬಳಿಕ ಇಂಗ್ಲೆಂಡ್ ವಿರುದ್ಧ 5 ಏಕದಿನ ಪಂದ್ಯಗಳನ್ನು ಆಡಲಿದೆ.

ಟೀಂ ಇಂಡಿಯಾ ವಿಶಿಷ್ಟ ದಾಖಲೆ, ಧೋನಿ ಡಬ್ಬಲ್ ಟ್ರೀಟ್

ಧೋನಿ ಡಬ್ಬಲ್ ದಾಖಲೆ: ದಕ್ಷಿಣ ಆಫ್ರಿಕಾ ಸರಣಿ ವೇಳೆ ಟೀಮ್ ಇಂಡಿಯಾ ನಾಯಕ ಎಂಎಸ್ ಧೋನಿ ಕೂಡ 2 ಪ್ರಮುಖ ವೈಯಕ್ತಿಕ ದಾಖಲೆಗಳನ್ನು ನಿರ್ಮಿಸುವ ಸಾಧ್ಯತೆ ಇದೆ. ಭಾರತವನ್ನು ಅತೀ ಹೆಚ್ಚು ಏಕದಿನ ಪಂದ್ಯಗಳಲ್ಲಿ ಗೆಲ್ಲಿಸಿದ ಹಾಗೂ ಅತ್ಯಧಿಕ ರನ್ ಗಳಿಸಿದ ಭಾರತೀಯ ನಾಯಕನೆಂಬ ದಾಖಲೆ ಧೋನಿ ಪಾಲಾಗುವ ಸಾಧ್ಯತೆಯಿದೆ.

ಧೋನಿ ಈವರೆಗೆ ನಾಯಕತ್ವ ವಹಿಸಿದ 151 ಪಂದ್ಯಗಳಿಂದ 5,213 ರನ್‌ ಗಳಿಸಿದ್ದಾರೆ. ಅವರು ಈ ದಾಖಲೆಯಲ್ಲಿ ಮೊಹಮ್ಮದ್ ಅಜರುದ್ದೀನ್ ಗಿಂತ ಕೇವಲ 26 ರನ್ ಹಿಂದಿದ್ದಾರೆ.(174 ಪಂದ್ಯಗಳಿಂದ 5,239 ರನ್).

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು 3-0 ಅಂತರದಿಂದ ಗೆದ್ದರೆ ಧೋನಿ ನಾಯಕತ್ವದಲ್ಲಿ ಭಾರತಕ್ಕೆ ಒಟ್ಟು 91 ಗೆಲುವು ಒಲಿದಂತಾಗುತ್ತದೆ. ಅಜರ್ 88 ಗೆಲುವುಗಳನ್ನು ಕಂಡಿದ್ದಾರೆ. ಧೋನಿ ರನ್ ಗಳಿಕೆಯಲ್ಲಿ ಅಜರ್ ರನ್ನು ಮೀರಿಸುವ ನಿರೀಕ್ಷೆ ಇಟ್ಟುಕೊಳ್ಳಬಹುದಾದರೂ ಹರಿಣಗಳ ವಿರುದ್ಧ ಸರಣಿ ಕ್ಲೀನ್ ಸ್ವೀಪ್ ಮಾಡುವುದು ಅಷ್ಟು ಸುಲಭವಲ್ಲ(ಪಿಟಿಐ)

Story first published:  Tuesday, December 3, 2013, 17:52 [IST]
English summary
When the Indian cricket team scores the first run on December 5 against South Africa in the first one-day international (ODI) match in Johannesburg, it will become the highest-run scoring team in the 50-over format.
ಅಭಿಪ್ರಾಯ ಬರೆಯಿರಿ