Englishहिन्दीമലയാളംதமிழ்తెలుగు

ಬಾಲ್ಯ ಗೆಳತಿ ಅನುಭೂತಿ ವರಿಸಿದ ಪಿಯೂಷ್

Posted by:
Updated: Sunday, December 1, 2013, 13:41 [IST]
 

ಮೊರ್ದಾಬಾದ್, ಡಿ.1: ಭಾರತದ ಲೆಗ್-ಸ್ಪಿನ್ನರ್ ಪಿಯೂಷ್ ಚಾವ್ಲಾ ಅವರು ತಮ್ಮ ಬಾಲ್ಯ ಸ್ನೇಹಿತೆ ಅನುಭೂತಿ ಚೌಹಾಣ್ ಅವರೊಂದಿಗೆ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ನೆರೆ-ಹೊರೆಯವರಾದ ಪಿಯೂಷ್ ಹಾಗೂ ಅನುಭೂತಿ ಶುಕ್ರವಾರ ರಾತ್ರಿ ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಉಪಸ್ಥಿತಿಯಲ್ಲಿ ವಿವಾಹವಾದರು.

ಎಂಬಿಎ ಪದವೀಧರೆ ಅನುಭೂತಿ ಅವರು ಮೀರತ್ ನ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಅಮೀರ್ ಸಿಂಗ್ ಚೌಹಾಣ್ ಅವರ ಪುತ್ರಿ. 'ಕಳೆದ ಕೆಲವು ವರ್ಷಗಳಿಂದ ನನ್ನ ಮಗ ಹಾಗೂ ಅನುಭೂತಿ ಸ್ನೇಹಿತರಾಗಿದ್ದರು. ಇದೀಗ ಎರಡೂ ಕುಟುಂಬಗಳ ನಡುವಿನ ಸ್ನೇಹವು ಸಂಬಂಧವಾಗಿ ಬದಲಾಗಿದೆ' ಎಂದು ಪಿಯೂಷ್ ತಂದೆ ಪ್ರಮೋದ್ ಕುಮಾರ್ ಚಾವ್ಲಾ ಅವರು ಪಿಟಿಐ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.

ಬಾಲ್ಯ ಗೆಳತಿ ಅನುಭೂತಿ ವರಿಸಿದ ಪಿಯೂಷ್

ಚಾವ್ಲಾ ವಿವಾಹ ಸಮಾರಂಭಕ್ಕೆ ಚಾವ್ಲಾರ ಉತ್ತರ ಪ್ರದೇಶ ಸಹ ಆಟಗಾರರಾದ ವೇಗದ ಬೌಲರ್ ಇರ್ಫಾನ್ ಪಠಾಣ್, ಭುವನೇಶ್ವರ ಕುಮಾರ್ ಹಾಗೂ ಜ್ಞಾನೇಂದ್ರ ಪಾಂಡೆ ಹಾಜರಿದ್ದರು. ವಿಶೇಷ ಅತಿಥಿಯಾಗಿ ಆಹ್ವಾನಿಸಲ್ಪಟ್ಟಿದ್ದ ಮಾಜಿ ಟೆಸ್ಟ್ ನಾಯಕ ಹಾಗೂ ಸಂಸದ ಮುಹಮ್ಮದ್ ಅಜರುದ್ದೀನ್ ಸಮಾರಂಭಕ್ಕೆ ಗೈರು ಹಾಜರಾಗಿದ್ದರು. ಪಿಯೂಷ್ ಭಾರತದ ಪರ 3 ಟೆಸ್ಟ್, 25 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ 5 ವಿಕೆಟ್‌ಗಳನ್ನು ಕಬಳಿಸಿರುವ ಚಾವ್ಲಾ ಏಕದಿನದಲ್ಲಿ 32 ವಿಕೆಟ್ ಪಡೆದಿದ್ದಾರೆ.

Story first published:  Sunday, December 1, 2013, 13:35 [IST]
English summary
Moradabad: Indian leg-spinner Piyush Chawla has tied the nuptial knot with his long-time friend Anubhuti Chauhan in a grand ceremony here.
ಅಭಿಪ್ರಾಯ ಬರೆಯಿರಿ