Englishहिन्दीമലയാളംதமிழ்తెలుగు

ಮಾಜಿ ಕ್ರಿಕೆಟರ್ ವಿನೋದ್ ಕಾಂಬ್ಳಿಗೆ ಹೃದಯಾಘಾತ

Posted by:
Updated: Sunday, December 1, 2013, 15:12 [IST]
 

ಮಾಜಿ ಕ್ರಿಕೆಟರ್ ವಿನೋದ್ ಕಾಂಬ್ಳಿಗೆ ಹೃದಯಾಘಾತ
 

ಮುಂಬೈ, ನ.29: ಮಾಸ್ಟರ್ ಬ್ಲಾಸ್ಟರ್ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಬಾಲ್ಯದ ಗೆಳೆಯ, ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರಿಗೆ ಹೃದಯಾಘಾತವಾಗಿದೆ. ಅವರನ್ನು ಮುಂಬೈಯ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿನ್ನೆ ಬಾಂದ್ರಾ ದಿಂದ ಚೆಂಬೂರು ಕಡೆಗೆ ವಾಹನ ಚಾಲನೆಯ ವೇಳೆ ಅವರಿಗೆ ಹೃದಯಾಘಾತವಾದ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ವಿಷಯವನ್ನು ರಹಸ್ಯವಾಗೇ ಇಡಲಾಗಿದ್ದು ಇಂದು ವಿಷಯ ಬಹಿರಂಗಗೊಂಡಿದೆ ಎನ್ನಲಾಗಿದೆ.

42 ವರ್ಷದ ಕಾಂಬ್ಳಿ ಅವರಿಗೆ ಈ ಹಿಂದೆ ಕೂಡಾ ಎರಡು ಬಾರಿ ಹೃದಯದ ತೊಂದರೆ ಕಾಣಿಸಿಕೊಂಡಿದ್ದು , ಅಪಧಮನಿಗಳಲ್ಲಿ ರಕ್ತಹೆಪ್ಪುಗಟ್ಟಿದ್ದನ್ನು ಆಂಜಿಯೋಪ್ಲಾಸ್ಟಿ ಮೂಲಕ ಸರಿಪಡಿಸಲಾಗಿತ್ತು. ಕಾಂಬ್ಳಿ ಅವರನ್ನು ಒಬ್ಬರು ಮಹಿಳಾ ಸಂಚಾರಿ ಪೊಲೀಸ್ ಅಧಿಕಾರಿಯೊಬ್ಬರು ಆಸ್ಪತ್ರೆಗೆ ಕರೆದೊಯ್ದರು ಎಂದು ತಿಳಿದು ಬಂದಿದೆ. ಐಸಿಯುನಲ್ಲಿರುವ ಕಾಂಬ್ಳಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ ಎಂದು ಡಾ. ನರೇಂದ್ರ ತ್ರಿವೇದಿ ಹೇಳಿದ್ದಾರೆ.

1988ರಲ್ಲಿ ತಮ್ಮ ಶಾಲಾ ದಿನಗಳಲ್ಲಿ ವಿನೋದ್ ಕಾಂಬ್ಳಿ ಹಾಗೂ ಸಚಿನ್ ತೆಂಡೂಲ್ಕರ್ ಇಬ್ಬರೂ ಜೊತೆಯಾಟದಲ್ಲಿ 664ರನ್ ಜೊತೆಯಾಟ ಗಳಿಸಿ ದೇಶದ ಗಮನ ಸೆಳೆದಿದ್ದರು. ಭಾರತದ ಪರ 17 ಟೆಸ್ಟ್ ಪಂದ್ಯ, 104 ಏಕದಿನ ಕ್ರಿಕೆಟ್ ಪಂದ್ಯಗಳನ್ನು ಕಾಂಬ್ಳಿ ಆಡಿದ್ದಾರೆ.

ಇತ್ತೀಚೆಗೆ (ನ.16ರಂದು) ತನ್ನ ಬಾಲ್ಯದ ಗೆಳೆಯ ಸಚಿನ್‌ತೆಂಡೂಲ್ಕರ್ ಕ್ರಿಕೆಟ್ ಗೆ ವಿದಾಯ ಹೇಳಿದ ಸಂದರ್ಭದಲ್ಲಿ ಏರ್ಪಡಿಸಿದ್ದ ಭೋಜನಕೂಟಕ್ಕೆ ತಮ್ಮನ್ನು ಕರೆಯ ಲಿಲ್ಲವಲ್ಲ ಎಂಬ ನೋವು, ಕೊರಗು ಕಾಂಬ್ಳಿ ಅವರನ್ನು ಕಾಡುತ್ತಿತ್ತು ಎನ್ನಲಾಗಿದೆ.

2009ರ ಚುನಾವಣೆಯಲ್ಲಿ ಮುಂಬೈಯ ವಿಖ್ರೋಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಬಿಗ್ ಬಾಸ್ ಕಾರ್ಯಕ್ರಮದಲ್ಲೂ ಅದೃಷ್ಟ ಪರೀಕ್ಷೆಗಿಳಿದಿದ್ದ ಕಾಂಬ್ಲಿ ನಂತರ ಅಲ್ಲಿಂದ ಹೊರಬಿದ್ದರು. ಸಚ್ ಕಾ ಸಾಮ್ನಾ ರಿಯಾಲಿಟಿ ಶೋನಲ್ಲಿ ಕಷ್ಟದ ಸಮಯದಲ್ಲಿ ಸಚಿನ್ ನನ್ನನ್ನು ಕೈ ಹಿಡಿದು ನಡೆಸಲಿಲ್ಲ ಎಂದು ಹೇಳಿ ವಿವಾದಕ್ಕೆ ಕಾರಣರಾಗಿದ್ದರು.

Story first published:  Friday, November 29, 2013, 14:05 [IST]
English summary
Mumbai : Former India batsman Vinod Kambli suffered a heart attack and has been admitted to the Lilavati Hospital here on Friday, according to reports.
ಅಭಿಪ್ರಾಯ ಬರೆಯಿರಿ