Englishहिन्दीമലയാളംதமிழ்తెలుగు

ವೇಗಿ ವಿನಯ್ ಕುಮಾರ್ ಗೆ ಕಂಕಣ ಭಾಗ್ಯ

Posted by:
Updated: Thursday, November 28, 2013, 14:44 [IST]
 

ವೇಗಿ ವಿನಯ್ ಕುಮಾರ್ ಗೆ ಕಂಕಣ ಭಾಗ್ಯ
 

ಬೆಂಗಳೂರು, ನ.28: ಟೀಂ ಇಂಡಿಯಾದ ವೇಗದ ಬೌಲರ್, ಕರ್ನಾಟಕದ 'ದಾವಣಗೆರೆ ಎಕ್ಸ್ ಪ್ರೆಸ್' ಆರ್. ವಿನಯ್ ಕುಮಾರ್ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. 29 ವರ್ಷದ ವಿನಯ್ ಅವರು ಬೆಂಗಳೂರಿನ ಜಯಮಹಲ್ ನಲ್ಲಿ ಗುರುವಾರ ತಮ್ಮ ಗೆಳತಿ ರೀಚಾ ಆಳ್ವಾ ಜತೆ ವೈವಾಹಿಕ ಜೀವನಕ್ಕೆ ಅಡಿ ಇಟ್ಟಿದ್ದಾರೆ.

ಆಪ್ತರು, ಕುಟುಂಬ ವರ್ಗದವರಿಗೆ ಮಾತ್ರ ಮದುವೆಗೆ ಆಹ್ವಾನ ನೀಡಲಾಗಿದೆ. ವಿವಾಹದ ನಂತರ ಶುಕ್ರವಾರ ನಗರದ ಪ್ರಮುಖ ಹೋಟೆಲ್ ವಿಂಡ್ಸರ್ ಮ್ಯಾನರ್ ಹೋಟೆಲ್ ನಲ್ಲಿ ಸಂಜೆ 7 ಗಂಟೆಗೆ ಆರತಕ್ಷತೆ ಇಟ್ಟುಕೊಳ್ಳಲಾಗಿದೆ. ಆರತಕ್ಷತೆಗೆ ಕ್ರಿಕೆಟರ್ ಗಳು ಸೇರಿದಂತೆ ಹಲವಾರು ಗಣ್ಯರಿಗೆ ಆಹ್ವಾನ ನೀಡಲಾಗಿದೆ.

31 ಏಕದಿನ ಮತ್ತು 1 ಟೆಸ್ಟ್ ಹಾಗೂ 9 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಇತ್ತೀಚೆಗೆ ವೆಸ್ಟ್ ವಿಂಡೀಸ್ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಮಹಾರಾಷ್ಟ್ರದ ಧವಳ್ ಕುಲಕರ್ಣಿ ಗಾಯಗೊಂಡ ಹಿನ್ನೆಲೆಯಲ್ಲಿ, ರಾಷ್ಟ್ರೀಯ ತಂಡದಲ್ಲಿ ಅವರಿಗೆ ಅವಕಾಶ ದೊರಕಿತ್ತು. ವಿನಯ್ ಏಕದಿನ ಕ್ರಿಕೆಟ್ ನಲ್ಲಿ 38, ಟಿ20ಯಲ್ಲಿ 10 ಹಾಗೂ ಟೆಸ್ಟ್‌ನಲ್ಲಿ 1 ವಿಕೆಟ್ ಪಡೆದಿದ್ದಾರೆ.

ಆದರೆ, ಬುಧವಾರ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಕೊನೆ ಪಂದ್ಯದಲ್ಲಿ ವಿನಯ್ ಕುಮಾರ್ ಆಡಿರಲಿಲ್ಲ. ಪ್ರಸ್ತುತ ರಣಜಿ ಋತುವಿನಲ್ಲಿ ಕರ್ನಾಟಕ ತಂಡಕ್ಕೆ ವಿನಯ್ ಕುಮಾರ್ ನಾಯಕರಾಗಿದ್ದಾರೆ.

Story first published:  Thursday, November 28, 2013, 14:07 [IST]
English summary
India paceman R Vinay Kumar will start a new innings in life today(Nov.28) when he marries his girlfriend Richa, in Bangalore.
ಅಭಿಪ್ರಾಯ ಬರೆಯಿರಿ