Englishहिन्दीമലയാളംதமிழ்తెలుగు

ವಿಂಡೀಸ್ ವಿರುದ್ಧ ಗೆಲುವಿನ 'ಶಿಖರ' ಏರಿದ ಭಾರತ

Posted by:
Updated: Wednesday, November 27, 2013, 17:51 [IST]
 

ಕಾನ್ಪುರ, ನ.27 : ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಗೆಲುವಿನ 'ಶಿಖರ' ವೇರಲು ಧವನ್ ಕಾರಣರಾಗಿದ್ದಾರೆ. ಕಾನ್ಪುರದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ 95 ಎಸೆತದಲ್ಲಿ 119 ರನ್ ಸಿಡಿಸಿ ಭಾರತ ಕೊನೆ ಏಕದಿನ ಪಂದ್ಯವನ್ನು ಐದು ವಿಕೆಟ್ ಗಳಿಂದ ಗೆಲ್ಲುವಂತೆ ಮಾಡಿದ್ದಾರೆ. ಮೂರು ಏಕದಿನ ಪಂದ್ಯಗಳ ಸರಣಿಯನ್ನು ಭಾರತ 2-1ರಲ್ಲಿ ತನ್ನದಾಗಿಸಿಕೊಂಡಿದೆ.

ಸ್ಕೋರ್ ಕಾರ್ಡ್ ನೋಡಿ

ಭಾರತದ ಎಡಗೈ ಆರಂಭಿಕ ಆಟಗಾರ ಶಿಖರ್ ಧವನ್ ಐದನೇ ಏಕದಿನ ಶತಕ ದಾಖಲಿಸಿದರೆ, ಯುವರಾಜ್ ಸಿಂಗ್ ಮತ್ತೆ ಲಯ ಕಂಡುಕೊಂಡು ಅರ್ಧ ಶತಕ ಗಳಿಸಿ ಗ್ರೀನ್ ಪಾರ್ಕ್ ನಲ್ಲಿ ವಿಂಡೀಸ್ ಒಡ್ಡಿದ್ದ 264 ರನ್ ಮೊತ್ತವನ್ನು ಬೆನ್ನಟ್ಟಿ ವಿಜಯೋತ್ಸವ ಆಚರಿಸಿದರು.

ವಿಂಡೀಸ್ ವಿರುದ್ಧ ಗೆಲುವಿನ 'ಶಿಖರ' ಏರಿದ ಭಾರತ

ಇದಕ್ಕೂ ಮುನ್ನ ಟಾಸ್ ಗೆದ್ದ ಭಾರತ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ನೀಡಿದ ಬ್ಯಾಟಿಂಗ್ ಆಹ್ವಾನವನ್ನು ಸ್ವೀಕರಿಸಿ ಕ್ರೀಸಿಗೆ ಇಳಿದ ವೆಸ್ಟ್ ಇಂಡೀಸ್ ಆರಂಭದಲ್ಲೇ ಚಾರ್ಲ್ಸ್ ವಿಕೆಟ್ (11) ಕಳೆದುಕೊಂಡಿತು. ಆದರೆ, ಕಿರಾನ್ ಪೊವೆಲ್, ಸ್ಯಾಮುಯಲ್ ಹಾಗೂ ಡರೇನ್ ಬ್ರಾವೋ ಸಮಯೋಚಿತ ಆಟದಿಂದಾಗಿ 50 ಓವರ್ ಗಳಲ್ಲಿ 263/5 ಸ್ಕೋರ್ ಮಾಡಿತ್ತು.

ಪಂದ್ಯದ ಮುಖ್ಯಾಂಶ ಇಂತಿದೆ:
ಬೌಂಡರಿ: ಭಾರತ : 36; ವೆಸ್ಟ್ ಇಂಡೀಸ್ : 25
ಸಿಕ್ಸ್ : ಭಾರತ : 0, ವೆಸ್ಟ್ ಇಂಡೀಸ್ : 5
ಟಾಪ್ ಸ್ಕೋರರ್: ವೆಸ್ಟ್ ಇಂಡೀಸ್ ; ಮರ್ಲಾನ್ ಸ್ಯಾಮುಯಲ್ 71 (93 ಎಸೆತ, 7x4, 1x6), ಶಿಖರ್ ಧವನ್ 119( 95 ಎಸೆತ, 20X4)

# ಭಾರತದ ಪರ ಎರಡು ವಿಕೆಟ್(2/45, 10 ಓವರ್ ) ಪಡೆದ ಅಶ್ವಿನ್ ಯಶಸ್ವಿ ಬೌಲರ್ ಎನಿಸಿಕೊಂಡರು. ಭುವನೇಶ್ವರ್ ಕುಮಾರ್, ಮಹಮ್ಮದ್ ಶಮಿ ಮತ್ತು ರವೀಂದ್ರ ಜಡೇಜ ತಲಾ ಒಂದು ವಿಕೆಟ್ ಕಬಳಿಸಿದರು.
# ಶಿಖರ್ ಧವನ್ ಅವರ ಐದನೇ ಏಕದಿನ ಕ್ರಿಕೆಟ್ ಶತಕ ಇದಾಗಿದೆ. ಎಲ್ಲಾ ಶತಕಗಳು ಈ ವರ್ಷದಲ್ಲೇ ಬಾರಿಸಿದ್ದಾರೆ.
# ಶ್ರೀಲಂಕಾದ ಉಪುಲ್ ತರಂಗಾ ಅವರು ಅತಿವೇಗವಾಗಿ (28 ಇನ್ನಿಂಗ್ಸ್) 5 ಶತಕ ಬಾರಿಸಿದ್ದರು. ಧವನ್ ಕೂಡಾ ಈ ಗೌರವಕ್ಕೆ ಪಾತ್ರರಾಗಿದ್ದಾರೆ.
# ಯುವರಾಜ್ ಸಿಂಗ್ 51ನೇ ಅರ್ಧಶತಕ ಬಾರಿಸಿದ್ದಾರೆ.
# ಡರೇನ್ ಬ್ರಾವೋ ಸರಣಿಯಲ್ಲಿ ಸತತ ಮೂರನೇ(59,50,51) ಅರ್ಧಶತಕ ದಾಖಲಿಸಿದರು.
# ಮರ್ಲಾನ್ ಸ್ಯಾಮುಯಲ್ 71 ರನ್ (93 ಎ, 7X4, 1X6) ಗಳಿಸಿದರು.
# ಸ್ಯಾಮುಯಲ್ 60 ರನ್ ಗಳಿಸಿದ್ದಾಗ ಜಡೇಜ ಬೌಲಿಂಗ್ ನಲ್ಲಿ ಕ್ಯಾಚಿತ್ತದ್ದನ್ನು ಕೊಹ್ಲಿ ಕೈ ಚೆಲ್ಲಿದರು.
# ಮೋಹಿತ್ ಶರ್ಮ ಕಳಪೆ ಬೌಲಿಂಗ್ ಮಾಡಿ 7 ಓವರ್ ನಲ್ಲಿ 47 ರನ್ ತೆತ್ತರು.

Story first published:  Wednesday, November 27, 2013, 17:15 [IST]
English summary
Shikhar Dhawan's 95-ball 119 gave India a series-clinching five-wicket victory over West Indies in the third and final One Day International here on Wednesday(Nov.27).
ಅಭಿಪ್ರಾಯ ಬರೆಯಿರಿ