Englishहिन्दीമലയാളംதமிழ்తెలుగు

ಆಫ್ರಿಕನ್ ಸಫಾರಿ : ತಂಡಕ್ಕೆ ಮರಳಿದ ಜಹೀರ್ ಖಾನ್

Posted by:
Published: Monday, November 25, 2013, 14:22 [IST]
 

ಆಫ್ರಿಕನ್ ಸಫಾರಿ : ತಂಡಕ್ಕೆ ಮರಳಿದ ಜಹೀರ್ ಖಾನ್
 

ಮುಂಬೈ, ನ.25: ಆಫ್ರಿಕನ್ ಸಫಾರಿ ಮಾಡಲು ಟೀಂ ಇಂಡಿಯಾವನ್ನು ಬಿಸಿಸಿಐ ಆಯ್ಕೆ ಸಮಿತಿ ಸೋಮವಾರ ಪ್ರಕಟಿಸಿದೆ. ವೇಗಿ ಜಹೀರ್ ಖಾನ್ ಅವರು ಟೆಸ್ಟ್ ತಂಡಕ್ಕೆ ಸೇರ್ಪಡೆಯಾಗಿದ್ದರೆ ಆರಂಭಿಕ ಆಟಗಾರರಾದ ವಿರೇಂದ್ರ ಸೆಹ್ವಾಗ್ ಗೌತಮ್ ಗಂಭೀರ್ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಸಂದೀಪ್ ಪಾಟೀಲ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ತಂಡವನ್ನು ಪ್ರಕಟಿಸಿದೆ. ಡಿಸೆಂಬರ್ 5 ರಿಂದ ದಕ್ಷಿಣ ಆಫ್ರಿಕಾ ಪ್ರವಾಸ ಆರಂಭಗೊಳ್ಳಲಿದೆ. ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿ ಆಡಿದ ತಂಡವನ್ನೇ ಬಹುತೇಕ ದಕ್ಷಿಣ ಆಫ್ರಿಕಾ ಸರಣಿಗೆ ಆಯ್ಕೆ ಮಾಡಲಾಗಿದೆ.

ಏಕದಿನ ಸರಣಿ ಜೋಹಾನ್ಸ್ ಬರ್ಗ್ ನಲ್ಲಿ ಡಿಸೆಂಬರ್ 5 ರಂದು ಆರಂಭಗೊಳ್ಳಲಿದೆ. ಮೂರು ಏಕದಿನ ಪಂದ್ಯಗಳ ಸರಣಿ ಆಡಲಾಗುತ್ತದೆ. ಜೋಹಾನ್ಸ್ ಬರ್ಗ್ ನಲ್ಲೇ ಡಿಸೆಂಬರ್ 18ರಿಂದ ಟೆಸ್ಟ್ ಸರಣಿ ಶುರುವಾಗಲಿದೆ.

ಟೆಸ್ಟ್ ಸರಣಿಗೆ:
ಎಂಎಸ್ ಧೋನಿ(ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಮುರಳಿ ವಿಜಯ್, ಅಜಿಂಕ್ಯ ರಹಾನೆ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್) ಜಹೀರ್ ಖಾನ್, ಮಹಮ್ಮದ್ ಶಮಿ, ಪ್ರಗ್ನಾನ್ ಓಜಾ, ಇಶಾಂತ್ ಶರ್ಮ

ಏಕದಿನ ಸರಣಿ: ಎಂಎಸ್ ಧೋನಿ(ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಯುವರಾಜ್ ಸಿಂಗ್, ರವೀಂದ್ರ ಜಡೇಜ, ಅಜಿಂಕ್ಯ ರಹಾನೆ, ಆರ್ ಅಶ್ವಿನ್, ಭುವನೇಶ್ವರ್ ಕುಮಾರ್, ಮಹಮ್ಮದ್ ಶಮಿ, ಉಮೇಶ್ ಯಾದವ್, ಮೋಹಿತ್ ಶರ್ಮ, ಅಂಬಟಿ ರಾಯುಡು, ಅಮಿತ್ ಮಿಶ್ರಾ, ಇಶಾಂತ್ ಶರ್ಮ

English summary
African safari: Left-arm paceman Zaheer Khan was on Monday(Nov.25) recalled to the Indian team for next month's South Africa tour.Openers Virender Sehwag and Gautam Gambhir have been ignored.
ಅಭಿಪ್ರಾಯ ಬರೆಯಿರಿ