Englishहिन्दीമലയാളംதமிழ்తెలుగు

ಪಂದ್ಯದ ಮುಖ್ಯಾಂಶ: ಸಾಮಿ ಸಕತ್ ಆಟ, ವಿಂಡೀಸ್ ಗೆ ರೋಚಕ ಜಯ

Posted by:
Updated: Sunday, November 24, 2013, 23:07 [IST]
 

ವಿಶಾಖಪಟ್ಟಣಂ, ನ.24: ಟೀಂ ಇಂಡಿಯಾದ ತಂತ್ರಗಳಿಗೆ ಪ್ರತಿತಂತ್ರ ಹೆಣೆದು ಅತಿಥೇಯರನ್ನು ಬಗ್ಗುಬಡಿದ ವಿಂಡೀಸ್ ಪಡೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು 1-1 ಸಮಮಾಡಿಕೊಂಡಿದೆ. ವಿಂಡೀಸ್ ನ ನಾಲ್ವರು ಆಟಗಾರರು ಅರ್ಧಶತಕ ಬಾರಿಸಿ ಭಾರತ ಒಡ್ಡಿದ್ದ 289 ರನ್ ಗುರಿ ಮುಟ್ಟಿ 2 ವಿಕೆಟ್ ಗಳ ಅರ್ಹ ಜಯ ದಾಖಲಿಸಿತು.

ಟೀಂ ಇಂಡಿಯಾದ ಉಪನಾಯಕ ವಿರಾಟ್ ಕೊಹ್ಲಿ ಶತಕದ ಹೊಸ್ತಿಲಲ್ಲಿ ಎಡವಿದ್ದಾರೆ. ಇನ್ನೇನು 18ನೇ ಏಕದಿನ ಶತಕ ಬಾರಿಸುತ್ತಾರೆ ಎಂದು ಅಭಿಮಾನಿಗಳು ಕಾದಿದ್ದಾಗ ಕೊಹ್ಲಿ ಔಟಾಗಿ ಪೆವಿಲಿಯನ್ ತೆರಳಿದರು. ನಂತರ ನಾಯಕ ಧೋನಿ ಇನ್ನಿಂಗ್ಸ್ ಸಂಭಾಳಿಸಿ ವಿಂಡೀಸ್ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತವನ್ನು ಟಾರ್ಗೆಟ್ ಆಗಿ ನೀಡಿದರು. ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡೀಸ್ ತಂಡ ಭಾರತವನ್ನು 300ರನ್ ಸ್ಕೋರ್ ಒಳಗೆ ನಿಯಂತ್ರಿಸುವಲ್ಲಿ ಸಫಲವಾಗಿದೆ.

ಸ್ಕೋರ್ ಕಾರ್ಡ್ ನೋಡಿ

ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕರೂ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಲಿಲ್ಲ. ಕೊಹ್ಲಿ ಹಾಗೂ ಧೋನಿ ಅರ್ಧಶತಕ ಮತ್ತು ಅಶ್ವಿನ್ ಬ್ಯಾಟಿಂಗ್ ನೆರವಿನಿಂದ 50 ಓವರ್ ಗಳಲ್ಲಿ 288/7 ಸ್ಕೋರ್ ಮಾಡಿತು. ಮುಖ್ಯಾಂಶಗಳು ಕೆಳಗಿದೆ ತಪ್ಪದೇ ಓದಿ...

ಪಂದ್ಯದ ಮುಖ್ಯಾಂಶಗಳು
ಭಾರತ : ಬೌಂಡರಿ : 27; ಸಿಕ್ಸರ್ : 6
ವೆಸ್ಟ್ ಇಂಡೀಸ್ : ಬೌಂಡರಿ : 31; ಸಿಕ್ಸರ್ : 6

ಟಾಪ್ ಸ್ಕೋರರ್ : ಭಾರತ :ವಿರಾಟ್ ಕೊಹ್ಲಿ 99 (100 ಎಸೆತ, 9X4)
ಯಶಸ್ವಿ ಬೌಲರ್ : ವೆಸ್ಟ್ ಇಂಡೀಸ್ :ರವಿ ರಾಂಪಾಲ್ 4/60, 10 ಓವರ್ಸ್, ಭಾರತ :ಭುವನೇಶ್ವರ್ ಕುಮಾರ್ (2/56, 9 ಓವರ್ಸ್), ಮಹಮ್ಮದ್ ಶಮಿ (2/55, 7 ಓವರ್ಸ್), ಆರ್ ಅಶ್ವಿನ್ (2/37 10, ಓವರ್ಸ್)# ವೆಸ್ಟ್ ಇಂಡೀಸ್ ತಂಡ 289 ರನ್ ಗುರಿಯನ್ನು 49.3 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು ಮುಟ್ಟಿತು. ಇದು ವಿಂಡೀಸ್ ನ ನಾಲ್ಕನೇ ಅತಿ ಹೆಚ್ಚು ರನ್ ಚೇಸ್ ಆಗಿದೆ.

# ಕೆಲವು ಕ್ಯಾಚ್ ಗಳನ್ನು ಬಿಟ್ಟಿದ್ದು, ತೇವಾಂಶ ಹವೆಯಿಂದ ಚೆಂಡಿನ ಮೇಲೆ ಬಿಗಿ ಹಿಡಿತ ತಪ್ಪಿದ್ದು ಧೋನಿ ಲೆಕ್ಕಾಚಾರ ಬುಡಮೇಲು ಮಾಡಿತು.
# ಸರಣಿಯ ಕೊನೆ ಪಂದ್ಯ ಕಾನ್ಪುರದಲ್ಲಿ ನವೆಂಬರ್ 27 ರಂದು(ಬೆಳಗ್ಗೆ 9ಕ್ಕೆ ಶುರು) ನಡೆಯಲಿದೆ.
# ಲಿಂಡ್ಲ್ ಸಿಮನ್ಸ್ 62 ರನ್ (74 ಎಸೆತ, 5X4, 1X6),
# ಡರೇನ್ ಬ್ರಾವೋ 50 (54 ಎಸೆತ, 8 ಬೌಂಡರಿ) ಮೂರು ಬಾರಿ ಜೀವದಾನ(ಧೋನಿ, ರೈನಾ ಹಾಗೂ ಶಮಿ ಕ್ಯಾಚ್ ಕೈಚೆಲ್ಲಿದರು)
# ಪಂದ್ಯಕ್ಕೆ ತಿರುವು ನೀಡಿದ ಸಾಮಿ 43 ರನ್ ಮಾಡಿದ್ದಾಗ ಯುವರಾಜ್ ಸಿಂಗ್ ಕ್ಯಾಚ್ ಬಿಟ್ಟರು.
# ಕಿರಾನ್ ಪೊವೆಲ್ 59 ರನ್ (70 ಎಸೆತ, 7X4, 1X6)

# ವರ್ಷದಲ್ಲಿ 50 ವಿಕೆಟ್ ಪಡೆದ ಕ್ರಿಕೆಟರ್ ಸಾಲಿಗೆ ಜಡೇಜ ಸೇರಿದರು. ಅನಿಲ್ ಕುಂಬ್ಳೆ(1996ರಲ್ಲಿ 61 ವಿಕೆಟ್), ಅಜಿತ್ ಅಗರ್ಕರ್ (1998ರಲ್ಲಿ 58 )ಪಡೆದಿದ್ದರು.

# ಟೀಂ ಇಂಡಿಯಾ 50 ಓವರ್ ಗಳಲ್ಲಿ 288/7 ಸ್ಕೋರ್ ಮಾಡಿದೆ. ಕೊನೆ 5 ಓವರ್ ಗಳಲ್ಲಿ 62 ರನ್ ಚೆಚ್ಚಿತು.
# ವಿರಾಟ್ ಕೊಹ್ಲಿ ತನ್ನ ಏಕದಿನ ಕ್ರಿಕೆಟ್ ಬದುಕಿನ 18ನೇ ಶತಕ ಮಿಸ್ ಮಾಡಿಕೊಂಡರು. 99 ರನ್ ಆಗಿದ್ದಾಗ ಕ್ಯಾಚಿತ್ತು ಔಟಾದರು.
# ಕೊಹ್ಲಿ ಅವರು 28ನೇ ಏಕದಿನ ಅಂತಾರಾಷ್ಟ್ರೀಯ ಅರ್ಧ ಶತಕ ಸಿಡಿಸಿದರು.


# ಎಂಎಸ್ ಧೋನಿ ವಿಕೆಟ್ ಕೀಪರ್ ನಾಯಕ ನಾಗಿ ಹೊಸ ದಾಖಲೆ ಬರೆದಿದ್ದಾರೆ. 150 ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ್ದಾರೆ.
# ಒಟ್ಟಾರೆ 174 ಪಂದ್ಯಗಳಿಗೆ ನಾಯಕರಾಗಿದ್ದ ಮಹಮ್ಮದ್ ಅಜರುದ್ದೀನ್ ಅವರು ಧೋನಿಗಿಂತ ಮುಂದಿದ್ದಾರೆ.
# ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಿದ್ದು 150 ಪಂದ್ಯಗಳಿಗೆ ನಾಯಕನಾದ ಸಾಧನೆ ಮಾಡಿರುವ ಮೊದಲ ಆಟಗಾರ ಧೋನಿ.
# ಧೋನಿ ಅವರು ವೃತ್ತಿ ಜೀವನದ 50ನೇ ಅರ್ಧ ಶತಕ ದಾಖಲಿಸಿದರು.
# ಧೋನಿ 51 ರನ್ (40 ಎಸೆತ, 3 ಬೌಂಡರಿ, 4 ಸಿಕ್ಸ್)
# 35 ರನ್ ಹೊಡೆದ ಶಿಖರ್ ಧವನ್ ಅವರು ಈ ವರ್ಷದಲ್ಲಿ 1000 ರನ್ ಪೂರೈಸಿದ್ದಾರೆ. 22 ಇನ್ನಿಂಗ್ಸ್ ನಲ್ಲಿ 4 ಶತಕ, 4 ಅರ್ಧಶತಕ ಮೂಲಕ 1000 ರನ್ ಕಲೆ ಹಾಕಿದ್ದಾರೆ.
# ವೆಸ್ಟ್ ಇಂಡೀಸ್ ತಂಡದಲ್ಲಿ ಗಾಯಾಳು ಕ್ರಿಸ್ ಗೇಲ್ ವೆಸ್ಟ್ ಇಂಡೀಸ್ ಗೆ ತೆರಳಿದ್ದಾರೆ. ಅವರ ಬದಲಿಗೆ ಪೊವೆಲ್ ಹಾಗೂ ನರಸಿಂಗ್ ಬದಲಿಗೆ ಪೆರುಮಾಳ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
# ಭಾರತ ತಂಡದಲ್ಲಿ ಜಯದೇವ್ ಉನದ್ಕತ್ ಬದಲಿಗೆ ಮೋಹಿತ್ ಶರ್ಮ ಆಡಿದರು.
# ಭಾರತದ 50 ರನ್ 63 ಎಸೆತದಲ್ಲಿ ಬಂತು.100ರನ್ : 120 ಎಸೆತ; 150: 181; 200: 217; 250: 283
# ಧೋನಿ ಹಾಗೂ ಅಶ್ವಿನ್ 7ನೇ ವಿಕೆಟ್ ಗೆ 3.2 ಓವರ್ ಗಳಲ್ಲಿ 47 ರನ್ ಸೇರಿಸಿದರು.

Story first published:  Sunday, November 24, 2013, 18:01 [IST]
English summary
Highlights: 2nd ODI: India Vs West Indies in Visakhapatnam : West Indies edged India by two wickets in a close last-over finish to level the three-match ODI series 1-1 here on Sunday(Nov.24). The visitors, in pursuit of 289, were aided by four half centuries from Kieran Powell, Darren Bravo, Lendl Simmons and Darren Sammy.
ಅಭಿಪ್ರಾಯ ಬರೆಯಿರಿ