Englishहिन्दीമലയാളംதமிழ்తెలుగు

ವಿಂಡೀಸ್ ವಿರುದ್ಧ ಇಂಡಿಯಾಗೆ 'ವಿರಾಟ್' ಜಯ

Posted by:
Updated: Thursday, November 21, 2013, 21:37 [IST]
 

ಕೊಚ್ಚಿ, ನ.21: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ವಿದಾಯ ಟೆಸ್ಟ್ ಸರಣಿ ನಂತರ ಹೊಸ ಹುರುಪಿನೊಂದಿಗೆ ಏಕದಿನ ಸರಣಿಗೆ ತಯಾರಾಗಿದ್ದ ವಿಂಡೀಸ್ ತಂಡಕ್ಕೆ ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾ ಆಘಾತ ನೀಡಿದೆ. ಇಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ವಿಂಡೀಸ್ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕಿದ್ದಲ್ಲದೆ, ಸುಲಭವಾಗಿ ರನ್ ಚೇಸ್ ಮಾಡುವ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಪಂದ್ಯವನ್ನು 6 ವಿಕೆಟ್ ಗಳ ಅಂತರದಿಂದ ಧೋನಿ ಪಡೆ ಗೆದ್ದುಕೊಂಡಿದೆ.

ಟಾಸ್ ಗೆದ್ದ ವಿಂಡೀಸ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ಕೇವಲ ಎರಡು ಎಸೆತ ಎದುರಿಸಿದ ಕ್ರಿಸ್ ಗೇಲ್ ಅನಗತ್ಯ ರನ್ ಕದಿಯಲು ಯತ್ನಿಸಿ ರನೌಟ್ ಆದರು. ಜತೆಗೆ ಡೈವ್ ಹೊಡೆದು ಬಿದ್ದ ಕಾರಣ ಗಾಯಗೊಂಡಿರುವುದು ವಿಂಡೀಸ್ ತಂಡಕ್ಕೆ ದೊಡ್ಡ ಹೊಡೆತವಾಗಿದೆ. ಮುಂದಿನ ಪಂದ್ಯವಾಡುವುದು ಅನುಮಾನ ಎನ್ನಲಾಗಿದೆ.

ವಿಂಡೀಸ್ ವಿರುದ್ಧ ಇಂಡಿಯಾಗೆ 'ವಿರಾಟ್' ಜಯ

ಸ್ಕೋರ್ ಕಾರ್ಡ್ ನೋಡಿ

ಪಂದ್ಯದ ಮುಖ್ಯಾಂಶಗಳು:

ಬೌಂಡರಿಗಳು : ಭಾರತ:23; ವೆಸ್ಟ್ ಇಂಡೀಸ್ : 18
ಸಿಕ್ಸರ್ : ಭಾರತ: 3; ವೆಸ್ಟ್ ಇಂಡೀಸ್ : 6
ಟಾಪ್ ಸ್ಕೋರರ್: ವೆಸ್ಟ್ ಇಂಡೀಸ್ : ಡರೇನ್ ಬ್ರಾವೋ 59 ರನ್( 77 ಎಸೆತಗಳು, 4 ಬೌಂಡರಿ, 2 ಸಿಕ್ಸರ್) ಭಾರತ: ವಿರಾಟ್ ಕೊಹ್ಲಿ 86 ರನ್ (84 ಎಸೆತಗಳು, 9 ಬೌಂಡರಿ, 2 ಸಿಕ್ಸ್)
ಯಶಸ್ವಿ ಬೌಲರ್ಸ್ : ಸುರೇಶ್ ರೈನಾ (3/34), ರವೀಂದ್ರ ಜಡೇಜ (3/37), ವಿಂಡೀಸ್ ಜಾಸನ್ ಹೋಲ್ಡರ್ 2/48

* ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ 1-0 ಅಂತರದ ಮುನ್ನಡೆ ಪಡೆದಿದೆ. ವಿಶಾಖಪಟ್ಟಣದಲ್ಲಿ ನ.24(ಭಾನುವಾರ) ಮುಂದಿನ ಪಂದ್ಯ ನಡೆಯಲಿದೆ.
* ರೋಹಿತ್ ಶರ್ಮ 20ನೇ ಏಕದಿನ ಅರ್ಧಶತಕ ಬಾರಿಸಿದರು. 72 ರನ್ (81 ಎಸೆತ, 8 ಬೌಂಡರಿ, 1 ಸಿಕ್ಸ್)
* 2013ರಲ್ಲಿ 23 ಪಂದ್ಯಗಳಲ್ಲಿ ರೋಹಿತ್ 1143 ರನ್ ಚೆಚ್ಚಿದ್ದು 60.15 ರನ್ ಸರಾಸರಿ ಹೊಂದಿದ್ದಾರೆ. 209 ಗರಿಷ್ಠ ಮೊತ್ತದ ಜತೆಗೆ 2 ಶತಕ, 8 ಅರ್ಧಶತಕ ಬಂದಿದೆ.
* ವಿರಾಟ್ ಕೊಹ್ಲಿ 27 ನೇ ಅರ್ಧಶತಕ ಸಿಡಿಸಿದರು.
* ಏಕದಿನ ಕ್ರಿಕೆಟ್ ನಲ್ಲಿ ಅತಿ ವೇಗವಾಗಿ 5000 ರನ್ ಗಳಿಕೆ ಮಾಡಿದ ವಿವಿಯನ್ ರಿಚರ್ಡ್ಸ್ ದಾಖಲೆಯನ್ನು ವಿರಾಟ್ ಕೊಹ್ಲಿ ಸರಿಗಟ್ಟಿದ್ದರು. ಇಬ್ಬರು 114 ಇನ್ನಿಂಗ್ಸ್ ನಲ್ಲಿ 5 ಸಾವಿರ ರನ್ ಗಡಿ ದಾಟಿದ್ದಾರೆ.
* ವಿಂಡೀಸ್ ತಂಡ 69 ರನ್ನಿಗೆ 7 ವಿಕೆಟ್ ಕಳೆದುಕೊಂಡಿದ್ದು ಮುಳುವಾಯಿತು. (142/3 ನಿಂದ 221 ಆಲೌಟ್
* ಸುರೇಶ್ ರೈನಾ ಡಕೌಟ್ ಆದರು. ಬೌಲಿಂಗ್ ನಲ್ಲಿ ಮಿಂಚಿ ಈವರೆಗಿನ ವೈಯಕ್ತಿಕ ಶ್ರೇಷ್ಠ ಪ್ರದರ್ಶನ (3/34) ಗಳಿಸಿದರು.
* 2013ರಲ್ಲಿ ಜಡೇಜ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಎನಿಸಿದ್ದಾರೆ. 29 ಪಂದ್ಯಗಳಲ್ಲಿ 49 ವಿಕೆಟ್ ಕಿತ್ತಿದ್ದಾರೆ.
* ವೆಸ್ಟ್ ಇಂಡೀಸ್ : 48.5 ಓವರ್‌ಗಳಲ್ಲಿ 211 ರನ್‌ ಆಲೌಟ್
* ಭಾರತ : 212/4 (35.2 ಓವರ್ )

ತಂಡಗಳು ಇಂತಿದೆ:
ಭಾರತ: ಶಿಖರ್ ಧವನ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಯುವರಾಜ್ ಸಿಂಗ್, ಎಂಎಸ್ ಧೋನಿ, ರವೀಂದ್ರ ಜಡೇಜ, ಆರ್ ಅಶ್ವಿನ್, ಭುವನೇಶ್ವರ್ ಕುಮಾರ್, ಜಯದೇವ್ ಉನದ್ಕತ್, ಶಮಿ ಅಹ್ಮದ್

ವೆಸ್ಟ್ ಇಂಡೀಸ್: ಕ್ರಿಸ್ ಗೇಲ್, ಜಾನ್ಸನ್ ಚಾರ್ಲ್ಸ್, ಡರೇನ್ ಬ್ರಾವೊ, ಮರ್ಲನ್ ಸ್ಯಾಮುಯಲ್ಸ್, ಲೆಂಡ್ಲ್ ಸಿಮನ್ಸ್, ಡ್ವಾಯ್ನೆ ಬ್ರಾವೊ, ನರಸಿಂಗ್ ದಿಯೋನಾರಾಯಣ್, ಡರೇನ್ ಸಾಮಿ, ಸುನಿಲ್ ನಾರಾಯಣ್, ರವಿ ರಾಮ್ ಪಾಲ್, ಜಾಸನ್ ಹೋಲ್ಡರ್

Story first published:  Thursday, November 21, 2013, 13:46 [IST]
English summary
1st ODI: India Vs West Indies in Kochi : India cruised to a six-wicket victory over West Indies to take a 1-0 lead in the three-match ODI series here at Nehru Stadium on Thursday(Nov.21).
ಅಭಿಪ್ರಾಯ ಬರೆಯಿರಿ