Englishहिन्दीമലയാളംதமிழ்తెలుగు

ಸಚಿನ್ ದಾಖಲೆ ಮುರಿದ ಮುಂಬೈ ಯುವಕ ಪೃಥ್ವಿ

Posted by:
Updated: Wednesday, November 20, 2013, 18:42 [IST]
 

ಮುಂಬೈ, ನ.20: ರಿಜ್ವಿ ಸ್ಪ್ರಿಂಗ್ ಫೀಲ್ಡ್ ಶಾಲೆಯ ಪೃಥ್ವಿ ಶಾ ಎಂಬ 15 ವರ್ಷದ ಯುವಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಹ್ಯಾರೀಸ್ ಶೀಲ್ಡ್ ಕ್ರಿಕೆಟ್ ಟೂರ್ನಿಮೆಂಟ್ ನಲ್ಲಿ ಪೃಥ್ವಿ ಬರೋಬ್ಬರಿ 546 ರನ್ ಚೆಚ್ಚಿದ್ದಾರೆ.

ಈ ಶಾಲಾ ಟೂರ್ನಿಮೆಂಟ್ ನಲ್ಲಿ ಸಚಿನ್ ಅವರು ತಮ್ಮ ಶಾಲಾ ದಿನಗಳಲ್ಲಿ 326 ರನ್ ಹೊಡೆದು ನಾಟೌಟ್ ಆಗಿದ್ದರು. ವಿನೋದ್ ಕಾಂಬ್ಳಿ ಅವರ ಜತೆ 664 ರನ್ ಗಳ ಜೊತೆಯಾಟ ಪ್ರದರ್ಶಿಸಿದ್ದರು. ಮುಂಬೈನ ಆಟಗಾರ ವಾಸಿಂ ಜಾಫರ್ ಅವರ ಸಂಬಂಧಿ ಅರ್ಮಾನ್ ಜಾಫರ್ ಅವರು ಇದೇ ಟೂರ್ನಿಯಲ್ಲಿ 498 ರನ್ ಚೆಚ್ಚಿ ಹೊಸ ದಾಖಲೆ ಬರೆದಿದ್ದರು.

ನಿನ್ನೆ 257 ರನ್ ಗಳಿಸಿ ಅಜೇಯನಾಗಿ ಉಳಿದಿದ್ದ ಪೃಥ್ವಿ ಶಾ ಇಂದು ದಾಖಲೆಯ ರನ್ ಸಿಡಿಸಿದ್ದಾನೆ. ಇದರಲ್ಲಿ 5 ಸಿಕ್ಸರ್ ಮತ್ತು 85 ಬೌಂಡರಿಗಳು ಸೇರಿವೆ. ಇಂಗ್ಲೆಂಡ್ ನ ಪ್ರಥಮ ದರ್ಜೆ ಕ್ರಿಕೆಟ್ ಗಿಂತ ಒಂದು ಹಂತದ ಕೆಳಗಿರುವ ಗ್ಲೌಸ್ಟರ್ ಶೇರ್ ತಂಡದ ಪರ ಪೃಥ್ವಿ ಶಾ ಆಡಿದ್ದಾನೆ.

ಸಚಿನ್ ದಾಖಲೆ ಮುರಿದ ಮುಂಬೈ ಯುವಕ ಪೃಥ್ವಿ

ಭಾರತೀಯ ಕ್ರಿಕೆಟ್ ನಲ್ಲಿ ಇದುವರೆಗಿನ ಗರಿಷ್ಠ ವೈಯಕ್ತಿಕ ಮೊತ್ತ 515 ರನ್, 1933/34ರ ಸೀಸನ್ ನಲ್ಲಿ ದಾದಭಾಯ್ ಹವೆವಾಲಾ ಎಂಬಾತ ಸಿಐ ರೈಲ್ವೇಸ್ ಪರ ಸಿಡಿಸಿದ್ದ 515 ರನ್ ಇದುವರೆಗಿನ ಗರಿಷ್ಠ ರನ್ ಆಗಿತ್ತು. ಇದೀಗ ಸ್ಕೂಲ್ ಕ್ರಿಕೆಟ್ ನಲ್ಲಿ 543 ರನ್ ಸಿಡಿಸಿರುವ ಪೃಥ್ವಿ ಶಾ ಹೊಸ ದಾಖಲೆ ಬರೆದಿದ್ದಾರೆ.

ಈಗ ಪೃಥ್ವಿ 546 ರನ್ ಹೊಡೆದು ಹೊಸ ಇತಿಹಾಸ ರಚಿಸಿದ್ದಾರೆ. ಹ್ಯಾರೀಸ್ ಶೀಲ್ಡ್ ಕ್ರಿಕೆಟ್ ಇತಿಹಾಸದಲ್ಲಿ 500 ರನ್ ಗಡಿ ದಾಟಿದ ಪ್ರಥಮ ಕ್ರಿಕೆಟರ್ ಎನಿಸಿದ್ದಾರೆ. ದಿನದ ಆರಂಭದಲ್ಲಿ 257 ರನ್ ಮಾಡಿದ್ದ ಪೃಥ್ವಿಯನ್ನು ತಡೆಗಟ್ಟುವಲ್ಲಿ ಎದುರಾಳಿ ತಂಡ ಸೈಂಟ್ ಫ್ರಾನ್ಸಿಸ್ ಡಿ'ಅಸ್ಸಿಸಿ ವಿಫಲವಾಯಿತು.

Story first published:  Wednesday, November 20, 2013, 15:44 [IST]
English summary
Prithvi Shaw of Rizvi Springfield school has set a new record in school cricket by smashing 546 in the Elite Division of the Harris Shield cricket tournament (Under-16 inter-school) here on Wednesday(Nov.19).
ಅಭಿಪ್ರಾಯ ಬರೆಯಿರಿ