Englishहिन्दीമലയാളംதமிழ்తెలుగు

ನಿವೃತ್ತಿ ನಂತರ ಸಚಿನ್ ಸುದ್ದಿಗೋಷ್ಠಿ ಮುಖ್ಯಾಂಶ

Posted by:
Updated: Sunday, November 17, 2013, 17:58 [IST]
 

ಮುಂಬೈ, ನ.17: ನಿವೃತ್ತಿ ಘೋಷಣೆ ಬಗ್ಗೆ ವಿಷಾದವಿಲ್ಲ. ನಾನು 24 ವರ್ಷ ದೇಶಕ್ಕಾಗಿ ಆಡಿದ್ದೇನೆ. ಹಲವು ಏಳು ಬೀಳುಗಳನ್ನು ಕಂಡಿದ್ದೇನೆ. ಈಗ 24 ವರ್ಷಗಳ ಕನಸಿನ ಪಯಣ ಮುಗಿದಿದೆ ಎಂದು ಸಚಿನ್ ಸಂತೋಷದಿಂದಲೇ ಹೇಳಿದರು. ಇಲ್ಲಿನ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ನಗುನಗುತ್ತಾ ಉತ್ತರಿಸಿದರು.

ಕ್ರಿಕೆಟ್ ನನ್ನ ಆಮ್ಲಜನಕವಾಗಿತ್ತು. ಕ್ರಿಕೆಟ್ ಬಿಟ್ಟು ಜೀವಿಸಲು ಕಷ್ಟವಾಗುತ್ತದೆ. ಯಾವ ರೀತಿಯಲ್ಲಿ ಕ್ರಿಕೆಟ್ ನೊಂದಿಗೆ ತೊಡಗುತ್ತೇನೆ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ.ನಾನು ಕ್ರಿಕೆಟ್ ತಂಡದಲ್ಲಿ ಇರಲಿ ಬಿಡಲಿ, ನಾನು ಸದಾ ಕಾಲ ಇಂಡಿಯನ್ ಕ್ರಿಕೆಟರ್ ಆಗೇ ಉಳಿಯುತ್ತೇನೆ ಎಂದರು.

51 ಏಕದಿನ ಕ್ರಿಕೆಟ್ ಹಾಗೂ 49 ಟೆಸ್ಟ್ ಶತಕ ದಾಖಲಿಸಿರುವ 200 ಟೆಸ್ಟ್ ಪಂದ್ಯವಾಡಿರುವ ಏಕೈಕ ಆಟಗಾರ ಸಚಿನ್ ತೆಂಡೂಲ್ಕರ್ ಅವರು ಭಾರತ ರತ್ನ ಪ್ರಶಸ್ತಿ ಗಳಿಸಿರುವ ದೇಶದ ಪ್ರಥಮ ಕ್ರೀಡಾಪಟು ಎನಿಸಿದ್ದಾರೆ. ಭಾರತ ರತ್ನ ಸಿಕ್ಕಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿನ್, ನನಗೆ ಸಿಕ್ಕ ಪ್ರಶಸ್ತಿ ನನ್ನ ತಾಯಿಗೆ ಅರ್ಪಿಸುತ್ತೇನೆ ಎಂದರು.

ಖ್ಯಾತ ವಿಜ್ಞಾನಿ ಸಿಎನ್ ಆರ್ ರಾವ್ ಅವರ ಜತೆಯಲ್ಲಿ ನನ್ನ ಹೆಸರು ಭಾರತರತ್ನ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ನನಗೆ ಅತ್ಯಂತ ಖುಷಿಯಾಗುತ್ತದೆ ಎಂದರು.

ನಿವೃತ್ತಿ ನಂತರ ಸಚಿನ್ ಸುದ್ದಿಗೋಷ್ಠಿ ಮುಖ್ಯಾಂಶ

ನಾನು ಕ್ರಿಕೆಟ್ ಆಡುವುದನ್ನು ಒಮ್ಮೆ ಕೂಡಾ ನೋಡದ ನನ್ನ ತಾಯಿಗೆ ಮಾಧ್ಯಮಗಳ ಮೂಲಕ ಮುಂಬೈನಲ್ಲಿ ನನ್ನ ಮಗ ಕೊನೆ ಪಂದ್ಯವಾಡುತ್ತಿದ್ದಾನೆ ಎಂದು ತಿಳಿದು ಬಿಟ್ಟಿತು. ನನ್ನ ತಾಯಿ ನನ್ನ ಪಂದ್ಯ ವೀಕ್ಷಿಸಲು ಬಂದಿದ್ದು ಧನ್ಯತೆ ಸಿಕ್ಕ ಕ್ಷಣ ಎಂದರು.

Story first published:  Sunday, November 17, 2013, 16:42 [IST]
English summary
After the retirement of legendary cricketer Sachin Tendulakar addressed the media. Highlights from the press conference : It’s been a dream journey for me, no regret after announcing retirement. It was quite challenging to play for 24 years for the country, but desire was so strong that I kept on going
ಅಭಿಪ್ರಾಯ ಬರೆಯಿರಿ