Englishहिन्दीമലയാളംதமிழ்తెలుగు

ಟ್ವಿಟ್ಟರಿನಲ್ಲಿಯೂ ದಾಖಲೆ ಧೂಳಿಪಟ ಮಾಡಿದ ಸಚಿನ್!

Posted by:
Published: Friday, November 15, 2013, 14:20 [IST]
 

ಮುಂಬೈ, ನ. 15 : ಕ್ರಿಕೆಟ್ ಮೈದಾನದಲ್ಲಿ ಸಚಿನ್ ತೆಂಡೂಲ್ಕರ್ ಮಾಡಿರುವ ಪಕ್ಕಾ ಲೆಕ್ಕವಿರುವ ದಾಖಲೆಗಳು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ, 'ಮಾಸ್ಟರ್ ಬ್ಲಾಸ್ಟರ್' ಸಚಿನ್ ಅವರು ಈ ಬಾರಿ ಮೈದಾನದ ಹೊರಗೆ, ಅಂದರೆ ಟ್ವಿಟ್ಟರಿನಲ್ಲಿ ವಿಶ್ವ ದಾಖಲೆ ಸ್ಥಾಪಿಸಿದ್ದಾರೆ.

#ThankYouSachin ಎಂಬ ಟ್ಯಾಗ್ ಇದ್ದ, ಸಚಿನ್ ತೆಂಡೂಲ್ಕರ್ ಅವರೇ ಕಳಿಸಿದ್ದ ಸಂದೇಶ ಎಲ್ಲ ದಾಖಲೆಗಳನ್ನು ಧೂಳಿಪಟ ಮಾಡಿದೆ. ಈ ಟ್ವಿಟ್ಟರ್ ಸಂದೇಶ ನ.15ರ ಮಧ್ಯಾಹ್ನ ಸರಿಯಾಗಿ 2 ಗಂಟೆ ಹೊತ್ತಿಗೆ 10,205 ಬಾರಿ ರಿಟ್ವೀಟ್ ಆಗಿದೆ ಮತ್ತು 6,135 ಟ್ವಿಟ್ಟಿಗರು ಇದನ್ನು ಫೆವರಿಟ್ ಮಾಡಿಕೊಂಡಿದ್ದಾರೆ.

ಮೊದಲ ಬಾರಿಗೆ 2010ರಲ್ಲಿ @sachin_rt ಖಾತೆ ತೆರೆದಿದ್ದ ಸಚಿನ್ ತೆಂಡೂಲ್ಕರ್ ಇಷ್ಟು ವರ್ಷಗಳಲ್ಲಿ ಅಪಾರ ಟ್ವಿಟ್ಟರ್ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಕೊನೆಯ ಟೆಸ್ಟ್ ಆರಂಭವಾಗುವ ಹಿಂದಿನ ದಿನ, ಅಂದರೆ, ನ.13ರಂದು ಸಚಿನ್ ಅವರು, "I am really touched with #ThankYouSachin messages. Your support all these years have inspired me to give my best." ಎಂದು ಟ್ವೀಟ್ ಮಾಡಿದ್ದರು.

ಟ್ವಿಟ್ಟರಿನಲ್ಲಿಯೂ ದಾಖಲೆ ಧೂಳಿಪಟ ಮಾಡಿದ ಸಚಿನ್!

ಭಾರತದಲ್ಲಿ ಟ್ವಿಟ್ಟರ್ ನಲ್ಲಿ ಇದು ಹೊಸ ದಾಖಲೆ ಎಂದು ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಆಗಿರುವ Twitter India (@TwitterIndia) ಶುಕ್ರವಾರ ಮಧ್ಯಾಹ್ನ "This tweet from Sachin Tendulkar @sachin_rt is now the most RTd tweet of all-time in India." ಎಂದು ಟ್ವೀಟ್ ಮಾಡಿದೆ.

ಕಾಕತಾಳೀಯವೆಂದರೆ, ಇಂದಿಗೆ ಸಚಿನ್ ತೆಂಡೂಲ್ಕರ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಅಂಗಳಕ್ಕೆ ಬಂದು ಸರಿಯಾಗಿ 24 ವರ್ಷಗಳು. 1989ರ ನ.15ರಂದು ಅವರು ಪಾದಾರ್ಪಣೆ ಮಾಡಿದ್ದರು. 200ನೇ ಟೆಸ್ಟ್ ಕ್ರಿಕೆಟ್ ಆಡುತ್ತಿರುವ ಸಂದರ್ಭದಲ್ಲಿಯೇ ಮತ್ತೊಂದು ದಾಖಲೆಯನ್ನು ಸಚಿನ್ ಸೃಷ್ಟಿಸಿರುವುದು ಕೂಡ ಕಾಕತಾಳಿಯವೆ. ಈ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಅವರು 74 ರನ್ ಬಾರಿಸಿ ಔಟಾದರು.

ಟ್ವಿಟ್ಟರ್ ಅಂಗಳದಲ್ಲಿ ಸಚಿನ್ ತೆಂಡೂಲ್ಕರ್ ಅವರಿಗೆ 3,843,282 ಅಭಿಮಾನಿಗಳು ಅವರನ್ನು ಹಿಂಬಾಲಿಸುತ್ತಿದ್ದಾರೆ. ಭಾರತೀಯ ಕ್ರಿಕೆಟ್ ಮಂಡಳಿ ಸ್ವತಃ #ThankYouSachin ಅಭಿಯಾನವನ್ನು ಆರಂಭಿಸಿದ್ದು, ಒಟ್ಟಾರೆಯಾಗಿ 18 ಲಕ್ಷಕ್ಕೂ ಹೆಚ್ಚು ಟ್ವೀಟ್ ಗಳು ಈ ಹ್ಯಾಶ್ ಟ್ಯಾಗ್ ನೊಂದಿಗೆ ಸೇರ್ಪಡೆಯಾಗಿವೆ.

ಸಚಿನ್ ತೆಂಡೂಲ್ಕರ್ ನಿಜಕ್ಕೂ ದಾಖಲೆ ವೀರನಲ್ಲವೆ? ಕ್ರಿಕೆಟನ್ನೇ ಜೀವನವನ್ನಾಗಿಸಿಕೊಂಡಿರುವ, ಕ್ರಿಕೆಟ್ ಪ್ರೇಮಿಗಳಿಗೆ ಆರಾಧ್ಯ ದೈವವಾಗಿರುವ, ಆದರೆ ಅನಿವಾರ್ಯವಾಗಿ ಕ್ರಿಕೆಟ್ ಅಂಗಳದಿಂದ ಹಿಂದೆ ಸರಿಯುತ್ತಿರುವ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟುವ ಸಾಟಿ ಯಾರಿಗಿದೆ?

English summary
It is a known fact that Sachin Tendulkar sets records on the cricket field. But, the Master Blaster has now achieved another milestone on a different platform - off the field and on Twitter. The message tweeted by Sachin has been re-tweeted 9,574 times (till 14 PM IST, November 15, 2013) and 5,824 have set it as favourite.
ಅಭಿಪ್ರಾಯ ಬರೆಯಿರಿ