Englishहिन्दीമലയാളംதமிழ்తెలుగు

ಮುಗಿಯಿತು ಸಚಿನ್ ತೆಂಡೂಲ್ಕರ್ ಭವ್ಯ ಅಧ್ಯಾಯ

Posted by:
Updated: Friday, November 15, 2013, 12:57 [IST]
 

ಮುಂಬೈ, ನ.15: ಮುಂಬೈನ ವಾಂಖೇಡೆ ಸ್ಟೇಡಿಯಂನಲ್ಲಿ ಇಂದು ಅಚ್ಚಳಿಯದ ಭವ್ಯ ಇತಿಹಾಸ ನಿರ್ಮಾಣಗೊಂಡಿದೆ. ಮೂರು ದಶಕಗಳ ಕಾಲ ಭಾರತದ ಕ್ರಿಕೆಟ್ ರಂಗವನ್ನು ಆಳಿದ ಧ್ರುವತಾರೆ ಸಚಿನ್ ರಮೇಶ್ ತೆಂಡೂಲ್ಕರ್ ಅವರು ಇಂದು ತಮ್ಮ ಕೊನೆಯ ಟೆಸ್ಟ್ ಇನ್ನಿಂಗ್ಸ್ ಆಡಿದರು.

ಸ್ಕೋರ್ ಕಾರ್ಡ್ ನೋಡಿ

ಕೊನೆಯ ಟೆಸ್ಟ್ ಇನ್ನಿಂಗ್ಸ್ ನಲ್ಲೂ ಸ್ಮರಣೀಯ ಆಟವಾಡಿದ ಸಚಿನ್ನ 74 ರನ್ ಗಳಿಸಿದರು. ಕೊನೆಯ ಇನ್ನಿಂಗ್ಸ್ ನಲ್ಲಿ ಸೆಂಚುರಿ ಬಾರಿಸುತ್ತಾರೆ ಎಂದು ಕಾದಿದ್ದ ಅಭಿಮಾನಿಗಳಿಗೆ ತುಸು ಬೇಸರವಾದರೂ ಗಣ್ಯಾತಿಗಣ್ಯರೂ ಸೇರಿದಂತೆ ಇಡೀ ಸ್ಟೇಡಿಯಂನಲ್ಲಿ ಜಮಾಯಿಸಿದ್ದ ಸಚಿನ್ ಅಭಿಮಾನಿಗಳು ಎದ್ದುನಿಂತು ಸಚಿನ್ ಅವರಿಗೆ ವಿದಾಯ ಹೇಳಿದರು. (ಆದರೆ ಸಚಿನ್ ಈ ಟೆಸ್ಟ್ ನಲ್ಲಿ ಇನ್ನೂ ಒಂದು ಇನ್ನಿಂಗ್ಸ್ ಆಡುವ ಪ್ರಮೇಯವಿದೆ).

ಮುಗಿಯಿತು ಸಚಿನ್ ತೆಂಡೂಲ್ಕರ್ ಭವ್ಯ ಅಧ್ಯಾಯ

ನರಸಿಂಹ ದೇವನಾರಾಯಣ ಅವರ ಬೌಲಿಂಗ್ ನಲ್ಲಿ ಡೆರೆನ್ ಸಾಮಿ ಕೈಗೆ ಸುಲಭ ಕ್ಯಾಚ್ ನೀಡಿ, ಸಚಿನ್ ನಿರ್ಗಮಿಸಿದರು. ಆಗ ಇಡೀ ಸ್ಟೇಡಿಯಂನಲ್ಲಿ Thank You Sachin ಮಾರ್ದನಿಸಿತು. ಖ್ಯಾತನಾಮರಾದ ರಾಹುಲ್ ಗಾಂಧಿ ಮತ್ತು ಅಮೀರ್ ಖಾನ್ ಅಕ್ಕಪಕ್ಕ ಕುಳಿತು ಸಚಿನ್ ಅವರ 200ನೇ ಟೆಸ್ಟ್ ಪಂದ್ಯ ವೀಕ್ಷಿಸಿ, ಸಂಭ್ರಮಿಸಿದರು.

ತಾಜಾ ವರದಿಗಳು ಬಂದಾಗ ಭಾರತ 315ಕ್ಕೆ 4 ವಿಕೆಟ್ ಕಳೆದುಕೊಂಡಿತ್ತು.

Story first published:  Friday, November 15, 2013, 12:47 [IST]
English summary
Farewell Sachin Tendulkar dismissed for 74 in 200th test Mumbai. All hopes for a century were destroyed when Sachin Tendulkar was dismissed at 74, but the crowd made sure that the sporting spirit was kept alive. He was caught by Darren Sammy in the slips. Narsingh Deonarine was the bowler. Rahul Gandhi, Aamir Khan, Kiran Rao were some of the many who descended to the stadium to be a part of this day in history.
ಅಭಿಪ್ರಾಯ ಬರೆಯಿರಿ