Englishहिन्दीമലയാളംதமிழ்తెలుగు

ಕ್ರಿಕೆಟ್ ದೇವ್ರ ಜತೆ ಪೂಜಾರ್ ಬ್ಯಾಟಿಂಗ್

Posted by:
Updated: Thursday, November 14, 2013, 18:37 [IST]
 

ಮುಂಬೈ, ನ.14: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 24 ವರ್ಷಗಳ ಸುದೀರ್ಘ ಕ್ರಿಕೆಟ್ ಜೀವನದ ಅಂತಿಮ ಪಂದ್ಯ ಮುಂಬೈನಲ್ಲಿ ಗುರುವಾರ ಆರಂಭಗೊಂಡಿದೆ. 200ನೆ ಟೆಸ್ಟ್ ಪಂದ್ಯವಾಡುತ್ತಿರುವ ಸಚಿನ್ ಅವರು ವಿಂಡೀಸ್ ವಿರುದ್ಧದ ಎರಡನೇ ಟೆಸ್ಟ್ ನ ಮೊದಲ ದಿನವೇ ಬ್ಯಾಟ್ ಮಾಡುವ ಅವಕಾಶ ಪಡೆದಿದ್ದಾರೆ.

ಸ್ಕೋರ್ ಕಾರ್ಡ್ ನೋಡಿ

ಸಚಿನ್ ಮೇಲೆ ಸುಮಾರು 2000 ಕೋಟಿ ರು ಗೂ ಅಧಿಕ ಬೆಟ್ಟಿಂಗ್ ಮೊತ್ತ ಹಾಕಲಾಗಿದೆ ಎಂಬ ಸುದ್ದಿಯಿದೆ. ವಾಂಖೆಡೆ ಮೈದಾನದಲ್ಲಿ ಪ್ರೇಕ್ಷಕರ ಹರ್ಷೋದ್ಘಾರ ಮುಗಿಲು ಮುಟ್ಟಿದೆ. ಸಚಿನ್ ಅವರ ತಾಯಿ Sachin Forever' ಎಂಬ ಫಲಕ ನೋಡುತ್ತಾ ಪೆವಿಲಿಯನ್ನಿಂದ ಬಂದ ಮಗನನ್ನು ಹೆಮ್ಮೆಯಿಂದ ನೋಡಿದರು.

ಕ್ರಿಕೆಟ್ ದೇವ್ರ ಜತೆ ಪೂಜಾರ್ ಬ್ಯಾಟಿಂಗ್

ಗಣ್ಯಾತಿಗಣ್ಯರ ನಡುವೆ 'ಕ್ರಿಕೆಟ್ ದೇವರು' ಸಚಿನ್ ಬ್ಯಾಟಿಂಗ್ ಮಾಡಲು ಬಂದಿದ್ದು ಈ ಕ್ಷಣದ ವಿಶೇಷ. ಭಾರತ ಮುರಳಿ ವಿಜಯ್(43), ಶಿಖರ್ ಧವನ್ (33) ಇಬ್ಬರ ವಿಕೆಟ್ ಕಳೆದುಕೊಂಡಿದೆ. ಸಚಿನ್ ಜತೆ ಪೂಜಾರಾ ಇದ್ದಾರೆ.

40 ವರ್ಷ ವಯಸ್ಸಿನ ಸಚಿನ್ ಅವರು ಯಾವುದೇ ಅಳುಕಿಲ್ಲದೆ ಬ್ಯಾಟಿಂಗ್ ಮಾಡಿದ್ದಲ್ಲದೆ ಎರಡು ವಿಕೆಟ್ ಕಳೆದುಕೊಂದಿದ್ದ ಭಾರತದ ಇನ್ನಿಂಗ್ಸ್ ಕಟ್ಟುತ್ತಿದ್ದಾರೆ. ದಿನದ ಅಂತ್ಯಕ್ಕೆ 6 ಬೌಂಡರಿ ಹೊಡೆದಿರುವ ಸಚಿನ್ ಅವರು 73 ಎಸೆತಗಳಲ್ಲಿ 38 ರನ್ ಹೊಡೆದು ಔಟಾಗದೆ ಉಳಿದಿದ್ದಾರೆ. ಸಚಿನ್ ಗೆ ಉತ್ತಮ ಸಾಥ್ ನೀಡಿರುವ ಪೂಜಾರಾ ಅವರು 34 ರನ್ (49 ಎಸೆತ, 4 ಬೌಂಡರಿ) ಗಳಿಸಿ ಆಡುತ್ತಿದ್ದಾರೆ.

ಗುರುವಾರ ಬೆಳಗ್ಗೆ ವಾಂಖೆಡೆ ಕ್ರೀಡಾಂಗಣದಲ್ಲಿ ಟಾಸ್ ಗೆದ್ದರೂ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಎಂಎಸ್ ಧೋನಿ ಅಚ್ಚರಿ ಮೂಡಿಸಿದ್ದರು. ಆದರೆ, ಧೋನಿ ಎಣಿಕೆ ತಪ್ಪಾಗಲಿಲ್ಲ. ವಿಂಡೀಸ್ ತಂಡ ಮತ್ತೊಮ್ಮೆ ಕಳಪೆ ಮೊತ್ತಕ್ಕೆ ಕುಸಿಯಿತು. ಚಹಾ ವಿರಾಮದ ವೇಳೆಗೆ ವೆಸ್ಟ್ ಇಂಡೀಸ್ ತಂಡ 182 ಸ್ಕೋರ್ ಮಾಡಿ ಆಲೌಟ್ ಆಗಿದ್ದರಿಂದ ಸಚಿನ್ ಬ್ಯಾಟಿಂಗ್ ಮೊದಲ ದಿನವೇ ನೋಡುವ ಭಾಗ್ಯ ಅಭಿಮಾನಿಗಳಿಗೆ ಸಿಕ್ಕಿದೆ.

ಕ್ರಿಕೆಟ್ ದೇವ್ರ ಜತೆ ಪೂಜಾರ್ ಬ್ಯಾಟಿಂಗ್

ಭಾರತದ ಸ್ಪಿನ್ನರ್ ಪ್ರಗ್ನಾನ್ ಓಝಾ 5 ವಿಕೆಟ್ ಪಡೆಯುವ ಮೂಲಕ ವಿಂಡೀಸ್ ತಂಡದ ಬೆನ್ನೆಲುಬು ಮುರಿದರು. ಭುವನೇಶ್ವರ್ ಕುಮಾರ್, ಶಮಿ ಅಹ್ಮದ್ ಜತೆಗೆ ಅಶ್ವಿನ್ ಕೂಡಾ ಉತ್ತಮ ಬೌಲಿಂಗ್ ಮಾಡಿದ್ದು ವಿಂಡೀಸ್ ಗೆ ಮುಳುವಾಯಿತು.ವಿಂಡೀಸ್ ಪರ ಕೀರಾನ್ ಪೊವೆಲ್ (48 ರನ್) ಅತ್ಯಧಿಕ ಸ್ಕೋರರ್ ಎನಿಸಿದರು.

Story first published:  Thursday, November 14, 2013, 15:53 [IST]
English summary
Iconic batsman Sachin Tendulkar kept his emotions in check and showed his genius for one last time in front of adoring fans with an unbeaten 38 as India seized early control of his 200th and final Test against the West Indies after a disciplined bowling display here today(Nov.14).
ಅಭಿಪ್ರಾಯ ಬರೆಯಿರಿ