Englishहिन्दीമലയാളംதமிழ்తెలుగు

ಸಚಿನ್ ವಿದಾಯ ಪಂದ್ಯ, ಟಿಕೆಟ್ ಸಿಕ್ಕಿದ್ರೆ ಸೀರುಂಡೆ

Posted by:
Published: Monday, November 11, 2013, 16:46 [IST]
 

ಮುಂಬೈ,ನ.11: ಕ್ರಿಕೆಟ್ ದೇವರ ಕಟ್ಟಕಡೆಯ ಟೆಸ್ಟ್ ಆಟ ನೋಡಲು ಅಭಿಮಾನಿಗಳು ಟಿಕೆಟ್ ಖರೀದಿಗೆ ಏಕಕಾಲಕ್ಕೆ ಮುಗಿಬಿದ್ದ ಪರಿಣಾಮ ಆನ್ ಲೈನ್ ಟಿಕೆಟ್ ವ್ಯವಸ್ಥೆ ಕಲ್ಪಿಸಿರುವ ವೆಬ್ ಸೈಟ್ ಒತ್ತಡ ತಾಳಲಾರದೆ ಕುಸಿದಿದೆ.

ನ.14ರಿಂದ 18ರವರೆಗೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸಚಿನ್ ತೆಂಡೂಲ್ಕರ್ 200ನೇ ಪಂದ್ಯ ಆಡಲಿದ್ದು, ಅದು ಸಚಿನ್ ವೃತ್ತಿ ಜೀವನದ ಅಂತಿಮ ಪಂದ್ಯ. ಹೀಗಾಗಿ ಪಂದ್ಯದ ಖುದ್ದು ವೀಕ್ಷಣೆಗೆ ಅವರ ಅಪಾರ ಅಭಿಮಾನಿಗಳು ಟಿಕೆಟ್ ಖರೀದಿಗೆ ತಾ ಮುಂದು, ನಾ ಮುಂದು ಎಂದು ವೆಬ್ ಸೈಟ್ ಗೆ ಲಗ್ಗೆ ಇಟ್ಟಿದ್ದಾರೆ.

ಒಟ್ಟು 33 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಹೊಂದಿರುವ ವಾಂಖಡೆ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಗಾಗಿ ಈಗ ಉಳಿದಿರುವುದು ಕೇವಲ 5 ಸಾವಿರ ಟಿಕೆಟ್ ಮಾತ್ರ. ಇದನ್ನು ಆನ್ ಲೈನ್ ಮೂಲಕ ಮಾರಾಟ ಮಾಡಲು kyazoonga.com ಗೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್(ಎಂಸಿಎ) ಅನುಮತಿ ನೀಡಿತ್ತು.

ಸಚಿನ್ ವಿದಾಯ ಪಂದ್ಯ, ಟಿಕೆಟ್ ಸಿಕ್ಕಿದ್ರೆ ಸೀರುಂಡೆ

ಆದರೆ, ವೆಬ್ ಸೈಟ್ ಗೆ ಡೌನ್ ಆಗಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆನ್ ಲೈನ್ ಮೂಲಕ ಒಬ್ಬರು 2 ವಿಕೆಟ್ ಪಡೆದುಕೊಳ್ಳಬಹುದಾಗಿದೆ. ಆದರೆ, ವೆಬ್ ಸೈಟ್ ಮೇಲಿನ ಒತ್ತಡವನ್ನು ತಪ್ಪಿಸಲು ಎಷ್ಟೇ ಪ್ರಯತ್ನ ಪಟ್ಟರೂ ಎಂಸಿಎಗೆ ಸಾಧ್ಯವಾಗುತ್ತಿಲ್ಲ. ಮೈದಾನದ ಒಟ್ಟು ಸಾಮರ್ಥ್ಯದ ಶೇ.20ರಷ್ಟು ಟಿಕೆಟ್ ಗಳನ್ನು ಮಾತ್ರ ಸಾರ್ವಜನಿಕರಿಗೆ ಮಾರಲಾಗುತ್ತಿದೆ.

17 ಸಾವಿರ ಟಿಕೆಟ್ ಗಳನ್ನು ನೊಂದಾಯಿತ ಕ್ರಿಕೆಟ್ ಕ್ಲಬ್ ಗಳಿಗೆ, 8 ಸಾವಿರ ಟಿಕೆಟ್ ಗಳನ್ನು ಕಾಂಪ್ಲಿಮೆಂಟರಿಯಾಗಿ ಆಯೋಜಕರು ಮತ್ತು ಸರ್ಕಾರಿ ಪ್ರತಿನಿಧಿಗಳಿಗೆ ನೀಡಿದ್ದು, 60 ಮಂದಿ ಕಾರ್ಪೋರೇಟರ್ ‌ಗಳು ಮತ್ತು ವಿಐಪಿ ಬಾಕ್ಸ್ , ಮಾಧ್ಯಮಗಳ ಗ್ಯಾಲರಿಗಳನ್ನು ಈಗಾಗಲೇ ಮೀಸಲಿರಿಸಲಾಗಿದೆ.

ಕ್ರಿಕೆಟ್ ದೇವರೆಂದೇ ಕರೆಸಿಕೊಳ್ಳುತ್ತಿರುವ ಸಚಿನ್ ರ ವಿದಾಯದ ಪಂದ್ಯ ಇದಾಗಿದ್ದು, ಬಾಲಿವುಡ್, ರಾಜಕೀಯ ಮತ್ತು ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರೂ ಈ ಪಂದ್ಯವನ್ನು ವೀಕ್ಷಿಸಲು ಆಗಮಿಸುತ್ತಿರುವುದರಿಂದ ಭಾರೀ ಮುಂಜಾಗ್ರತೆ ವಹಿಸಿ 5 ಸಾವಿರ ಟಿಕೆಟ್ ಗಳ ಮಾರಾಟ ಸಂದರ್ಭದಲ್ಲೂ ಅತ್ಯಂತ ಸೂಕ್ಷ್ಮ ಅಂಶಗಳನ್ನೂ ಪರಿಗಣಿಸಲಾಗುತ್ತಿದೆ ಎಂದು ಮೈದಾನದ ಅಧಿಕಾರಿಗಳು ತಿಳಿಸಿದ್ದಾರೆ.

English summary
Cricket fans were left disappointed on Monday morning after the website which was to sell tickets for Sachin Tendulkar's final Test online crashed.
ಅಭಿಪ್ರಾಯ ಬರೆಯಿರಿ