Englishहिन्दीമലയാളംதமிழ்తెలుగు

ಕೆಎಸ್ ಸಿಎ ಚುನಾವಣೆಗೆ ಒಡೆಯರ್ ಬಣ ಸಿದ್ಧತೆ

Posted by:
Updated: Sunday, December 1, 2013, 22:28 [IST]
 

ಬೆಂಗಳೂರು, ನ. 10: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ (ಕೆಎಸ್ ಸಿಎ) ಚುನಾವಣೆಯಲ್ಲಿ ಕ್ರಮವಾಗಿ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಸ್ಥಾನಕ್ಕೆ ಮೈಸೂರು ರಾಜವಂಶಸ್ಥ ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ಹಾಗೂ ಭಾರತದ ಮಾಜಿ ಬ್ಯಾಟ್ಸ್ ಮನ್ ಬ್ರಿಜೇಶ್ ಪಟೇಲ್ ಸ್ಪರ್ಧಿಸಲಿದ್ದಾರೆ.

'ಮುಂದಿನ ತಿಂಗಳು ನಡೆಯಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಚುನಾವಣೆಯಲ್ಲಿ ನಾವು ಸ್ಪರ್ಧಿಸಲಿದ್ದೇವೆ' ಎಂದು ಶನಿವಾರ ಸುದ್ದಿಗಾರರಿಗೆ ಒಡೆಯರ್ ಹಾಗೂ ಪಟೇಲ್ ತಿಳಿಸಿದ್ದಾರೆ. ಪಟೇಲ್ ಅವರು ಕೆಎಸ್ ಸಿಎ ಕಾರ್ಯದರ್ಶಿಯಾಗಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಒಡೆಯರ್ ಅವರು ಕೂಡಾ ಈ ಮುಂಚೆ ಕಾರ್ಯದರ್ಶಿ ಹಾಗೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಭಾರತದ ಮಾಜಿ ನಾಯಕ ಅನಿಲ್ ಕುಂಬ್ಳೆ ಹಾಗೂ ಮಾಜಿ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಪ್ರಸ್ತುತ ಕೆಎಸ್ ಸಿಎ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಆಗಿ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ಅವಧಿಗೆ ಚುನಾವಣೆಯಲ್ಲಿ ಸ್ಪರ್ಧಿಸದೆ ಇರಲು ನಿರ್ಧರಿಸಿದ್ದಾರೆ. ನೂತನ ಆಡಳಿತ ಮಂಡಳಿಗೆ ಬೆಂಬಲ ನೀಡುವುದಾಗಿ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

'ನಾವು ಮತ್ತೊಮ್ಮೆ ಆಯ್ಕೆಯಾದರೆೆ ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) ಸಹಿತ ಅಂಡರ್-14 ಹಾಗೂ ಅಂಡರ್-19 ಟೂರ್ನಿಗಳನ್ನು ಪುನರಾರಂಭಿಸಲಾಗುವುದು. ಕೆಲವೊಂದು ಕಾರಣದಿಂದ 2010 ರಿಂದ ಕೆಪಿಎಲ್ ಟ್ವೆಂಟಿ-20 ಟೂರ್ನಿ ನಡೆದಿಲ್ಲ' ಎಂದು ಒಡೆಯರ್ ಹಾಗೂ ಪಟೇಲ್ ಸುದ್ದಿಗಾರರಿಗೆ ತಿಳಿಸಿದರು.

ಕೆಎಸ್ ಸಿಎ ಚುನಾವಣೆಗೆ ಒಡೆಯರ್ ಬಣ ಸಿದ್ಧತೆ

ಈ ಹಿಂದೆ 12 ವರ್ಷಗಳ ಕಾಲ ಕಾರ್ಯದರ್ಶಿ ಆಗಿದ್ದ ಪಟೇಲ್ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ‘ಕರ್ನಾಟಕ ಕ್ರಿಕೆಟ್ ಗುಣಮಟ್ಟವನ್ನು ಅಭಿವೃದ್ದಿಪಡಿಸುವುದು ಹಾಗೂ ತಳಮಟ್ಟದಲ್ಲಿ ಮೂಲಭೂತ ಸೌಕರ್ಯವನ್ನು ಹೆಚ್ಚಿಸುವುದು ನಮ್ಮ ಪ್ರಮುಖ ಉದ್ದೇಶ'ಎಂದು ಪಟೇಲ್ ಹೇಳಿದ್ದಾರೆ.

ಒಡೆಯರ್- ಪಟೇಲ್ ಸ್ಪರ್ಧೆಗೆ ಉದ್ಯಮಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ತಂಡದ ಒಡೆಯ ವಿಜಯ್ ಮಲ್ಯ ಅವರ ಬೆಂಬಲವೂ ಸಿಕ್ಕಿದೆ. ಭಾರತದ ಮಾಜಿ ವೇಗಿ ದೊಡ್ಡ ಗಣೇಶ್ ಅವರು ಕೂಡಾ ಚುನಾವಣಾ ಕಣಕ್ಕಿಳಿಯುವ ಬಗ್ಗೆ ಹೇಳಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ : ಶ್ರೀಕಂಠದತ್ತ ನರಸಿಂಹರಾಜ ಒಡೆಯರ್
ಉಪಾಧ್ಯಕ್ಷ: ಅಶೋಕ್ ಆನಂದ್, ಸುಧಾಕರ್ ರಾವ್, ಸಂಜಯ್ ದೇಸಾಯಿ
ಕಾರ್ಯದರ್ಶಿ: ಬ್ರಿಜೇಶ್ ಪಟೇಲ್
ಖಜಾಂಚಿ : ದಯಾನಂದ್ ಪೈ

ದಟ್ಸ್ ಕ್ರಿಕೆಟ್

Story first published:  Sunday, November 10, 2013, 15:47 [IST]
English summary
Former India batsman Brijesh Patel and Srikanta Datta Narasimharaja Wodeyar, the scion of the Mysore royal family have teamed up to contest next month's Karnataka State Cricket Association (KSCA) elections.
ಅಭಿಪ್ರಾಯ ಬರೆಯಿರಿ