Englishहिन्दीമലയാളംதமிழ்తెలుగు

ಕೋಲ್ಕತ್ತಾ ಟೆಸ್ಟ್ : ವಿಂಡೀಸ್ ವಿರುದ್ಧ ಭಾರತ ಜಯಭೇರಿ

Posted by:
Updated: Friday, November 8, 2013, 16:11 [IST]
 

ಕೋಲ್ಕತ್ತಾ, ನ.8: ಪ್ರವಾಸಿ ವೆಸ್ಟ್ ಇಂಡೀಸ್ ತಂಡ ಈಡೆನ್ ಗಾರ್ಡನ್ಸ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಅತಿಥೇಯ ಭಾರತದ ವಿರುದ್ಧ ಸುಲಭವಾಗಿ ಶರಣಾಗಿದೆ. ವೆಸ್ಟ್ ಇಂಡೀಸ್ ತಂಡ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 168ರನ್ನಿಗೆ ಆಲೌಟ್ ಆಗುವ ಮೂಲಕ ಭಾರತಕ್ಕೆ 51ರನ್ ಗಳ ಜಯದ ಉಡುಗೊರೆ ನೀಡಿತು.

ಸ್ಕೋರ್ ಕಾರ್ಡ್ ನೋಡಿ

ಭಾರತದ ಪರ ಚೊಚ್ಚಲ ಪಂದ್ಯವಾಡುತ್ತಿರುವ ಶಮಿ ಅಹ್ಮದ್ 47/5 ವಿಕೆಟ್ ಪಡೆದು ಭರ್ಜರಿ ಪ್ರದರ್ಶನ ನೀಡಿದರು. ಅರ್ ಅಶ್ವಿನ್ 46 ರನ್ನಿತ್ತು 3 ವಿಕೆಟ್ ಪಡೆದರೆ ಭುವನೇಶ್ವರ್ ಕುಮಾರ್ 1 ವಿಕೆಟ್ ಗಳಿಸಿದರು.

ಎರಡನೇ ದಿನಾಂತ್ಯದ ವೇಳೆ 6 ವಿಕೆಟ್ ಗೆ 354 ರನ್ ಗಳಿಸಿದ್ದ ಭಾರತ ಇಂದು 453 ರನ್ ಗಳಿಸಿ ಆಲೌಟ್ ಆಯಿತು. ರೋಹಿತ್ ಶರ್ಮಾ ಜೊತೆಗೆ ಆರ್.ಅಶ್ವಿನ್ ಕೂಡ ಇಂದು ಭರ್ಜರಿ ಶತಕ ದಾಖಲಿಸಿದರು.ಶತಕದ ಅಂಚಿನಲ್ಲಿದ್ದ ಅಶ್ವಿನ್ ಮೂರಂಕಿ ಸ್ಕೋರನ್ನ ಸಲೀಸಾಗಿ ದಾಟಿದರು. ರೋಹಿತ್ ಶರ್ಮಾ ಅಶ್ವಿನ್ ಇಬ್ಬರು 7ನೇ ವಿಕೆಟ್'ಗೆ 280 ರನ್ ಪೇರಿಸಿದರು.

ಕೋಲ್ಕತ್ತಾ ಟೆಸ್ಟ್ : ವಿಂಡೀಸ್ ವಿರುದ್ಧ ಭಾರತ ಜಯಭೇರಿ

ಚೊಚ್ಚಲ ಟೆಸ್ಟ್ ಪಂದ್ಯವಾಡುತ್ತಿರುವ ರೋಹಿತ್ ಶರ್ಮಾ 177 ರನ್ನಿಗೆ ಔಟಾದರು. ಶಿಖರ್ ಧವನ್ ತಮ್ಮ ಚೊಚ್ಚಲ ಟೆಸ್ಟ್'ನಲ್ಲಿ 187 ರನ್ ಗಳಿಸಿದ್ದ ದಾಖಲೆಯನ್ನ ಮುರಿಯಲು ಸಾಧ್ಯವಾಗಲಿಲ್ಲ ಈ ಮೂಲಕ ಭಾರತಕ್ಕೆ 219 ರನ್ನುಗಳ ಮೊದಲ ಇನಿಂಗ್ಸ್ ಮುನ್ನಡೆ ಪಡೆಯಿತು. ವಿಂಡೀಸ್ ಪರ ಶಿಲ್ಲಿಂಗ್ ಫೋರ್ಡ್ 6 ವಿಕೆಟ್ ಕಿತ್ತು ಯಶಸ್ವಿ ಬೌಲರ್ ಎನಿಸಿದರು. ರೋಹಿತ್ ಶರ್ಮ ಪಂದ್ಯ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್
ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ : 234/10, 78 ಓವರ್ಸ್
ವೆಸ್ಟ್ ಇಂಡೀಸ್ ಎರಡನೇ ಇನ್ನಿಂಗ್ಸ್ : 168/10, 54.1 ಓವರ್ಸ್
ಭಾರತ ಮೊದಲ ಇನ್ನಿಂಗ್ಸ್ :453/10, 129.4 ಒವರ್ಸ್

Story first published:  Friday, November 8, 2013, 16:09 [IST]
English summary
Kolkata Test :Debutant Mohammed Shami's superb spell of reverse-swing bowling powered India to an innings and 51-run victory over West Indies on the third day of the first Test here at Eden Gardens on Friday(Nov.8).
ಅಭಿಪ್ರಾಯ ಬರೆಯಿರಿ